ಭರವಸೆ ಬತ್ತಿದರೂ ಬೀದಿಬೀದಿ ಸುತ್ತಿ ಬಸವಳಿದು ಬತ್ತುವ ಬಡಪಾಯಿಗಳ ಬಾಳಿಗೆ ಬಹಳಷ್ಟು ಬೆಳಕು ಬೀರಬೇಕು.
ಮಾಯಾಪದಚೌಕ ಅಡ್ಡ-ಉದ್ದ ಒಂದೇ 3 ಅಕ್ಷರ
ಜನರು 'ವಾ' ಎಂದರೆ ಬಾಗಿಲಲ್ಲಿ ನಿಲ್ಲುವ
ಸೇವಕ ಬರುತ್ತಾನೆ -
ಈ ಸಂತತಿ ಬಾಲ ಇರುವ ಕಪಿಗಳು,
ರಾಮನಿಗೆ ಸೇತುವೆ ಕಟ್ಟಿ ಕೊಟ್ಟವರು -
ಇದು ನರಸಿಂಹನ ಸಂಕ್ಷಿಪ್ತ ರೂಪ,
ಆಪ್ತ ಸಂಬೋಧನೆ -
ಮಾಯಾಪದಚೌಕ ಅಡ್ಡ-ಉದ್ದ ಒಂದೇ 4 ಅಕ್ಷರ
ಇವನಿಗೆ ಆನಂದ ಸದಾ ಜೊತೆಯಲ್ಲೇ ಇರುತ್ತದೆ -
ತುಂಬಿದ ಸಂತೆಯಲ್ಲಿ ಬೇರೆಯವರಿಗೆ
ದಾರಿ ಮಾಡಿಕೊಟ್ಟ -
ಯಾರನ್ನಾದರೂ ನಂಬಿದ ನಂತರ
ಬೇಡ ಎಂದರೆ ಹೇಗೆ? -
ಬಹಳ ಮರಗಳು ಇರುವ ಕಾಡು
ದಟ್ಟವಾದ ಅಡವಿ -
ಗತಪ್ರತ್ಯಾಗತ
ಎಲ್ಲರನ್ನೂ ಕೆಟ್ಟ ನೋಟದಿಂದ ನೋಡುವ ಕುಹಕಿಗಳ ವಕ್ರದೃಷ್ಟಿಯನ್ನು ನಾಶಮಾಡಿ ಎಂದು ಹೇಳುವ ಒಂದೇ ಪದ 'ಕುಟುಕುವನಯನವಕುಟುಕು'
ನಿನ್ನೆಯ ಉತ್ತರಗಳು:
3 ಅಕ್ಷರ: ಯೋಜನೆ, ಜತನ, ನೆನಪು
4 ಅಕ್ಷರ: ಪೈಲವಾನ, ಲಡಿದಾರ, ವಾದಾತ್ಮಜ, ನರಜನ್ಮ
-ಎಲ್.ಜಿ. ಜ್ಯೋತೀಶ್ವರ
lgjyothish@gmail.com
ಮೊ:9845317141