ಬೈಟುಕಾಫಿ

ಡ್ರ್ಯಾಗನ್‌ನೊಂದಿಗೆ ಸ್ನೇಹ

Published On :

ಮನೋವೈದ್ಯನ ಬಳಿಗೆ ಬಂದವನೊಬ್ಬ ಪ್ರತಿದಿನ ರಾತ್ರಿ ಮೂರು ತಲೆಗಳುಳ್ಳ ಹನ್ನೆರಡು ಅಡಿ ಉದ್ದದ ಡ್ರ್ಯಾಗನ್ ಒಂದು ತನ್ನ ಬಳಿಗೆ ಬರುತ್ತಿರುವುದಾಗಿ ಹೇಳಿದ. ಇದರಿಂದ ನಿದ್ದೆಯೇ ಇಲ್ಲದೆ ನರದೌರ್ಬಲ್ಯಕ್ಕೊಳಗಾಗಿ ಆತ ಪೂರ್ತಿಯಾಗಿ ಕಂಗಾಲಾಗಿದ್ದ. ಅವನು ಆತ್ಮಹತ್ಯೆ ಮಾಡಿಕೊಳ್ಳಲೂ ಚಿಂತನೆ ನಡೆಸಿದ್ದ.

ಮನೋವೈದ್ಯ ಹೇಳಿದ, 'ನಾನು ನಿನಗೆ ಸಹಾಯ ಮಾಡಬಹುದೆಂದು ತೋರುತ್ತದೆ. ಆದರೆ ಅದನ್ನು ಗುಣಪಡಿಸಲು ಒಂದೆರಡು ವರ್ಷಗಳು ತಗಲಬಹುದು ಮತ್ತು ಅದಕ್ಕೆ ಮೂರು ಸಾವಿರ ಡಾಲರ್ ಖರ್ಚಾಗುತ್ತದೆ.'
'ಮೂರು ಸಾವಿರ ಡಾಲರ್‌ಗಳು!' ಆ ಮನುಷ್ಯ ಉದ್ಗರಿಸಿದ 'ಹಾಗಾದರೆ ಹೋಗಲಿ ಬಿಡಿ. ನಾನು ಮನೆಗೆ ಹೋಗಿ ಅದರೊಡನೆ ಸ್ನೇಹ ಮಾಡುತ್ತೇನೆ.' <
ಆರೋಗ್ಯದ ಗುಟ್ಟು
ಎಂಬತ್ತು ವರ್ಷದವನೊಬ್ಬನನ್ನು ಅವನ ಉತ್ತಮ ದೇಹದಾರ್ಢ್ಯದ ಗುಟ್ಟೇನು ಎಂದು ಕೇಳಲಾಯಿತು.
ಅದಕ್ಕೆ ಅವನಂದ 'ನಾನು ಕುಡಿಯುವುದಿಲ್ಲ, ತಂಬಾಕು ಸೇವಿಸುವುದಿಲ್ಲ ಮತ್ತು ಪ್ರತಿದಿನ ಒಂದು ಮೈಲು ಈಜುತ್ತೇನೆ.'
'ನನ್ನ ಚಿಕ್ಕ ತಂದೆಯೊಬ್ಬ ಹಾಗೆಯೇ ಮಾಡುತ್ತಿದ್ದ. ಆದರೆ ಅವನು ತನ್ನ ಅರವತ್ತನೇ ವಯಸ್ಸಿನಲ್ಲಿಯೇ ತೀರಿಕೊಂಡ' ಎಂದನೊಬ್ಬ.
'ಓಹ್! ಅದಕ್ಕೆ ಕಾರಣ ನಿನ್ನ ಚಿಕ್ಕ ತಂದೆ ಅದನ್ನು ಸಾಕಷ್ಟು ದೀರ್ಘಕಾಲ ಮಾಡದೇ ಇದ್ದುದು.'

-ನಂದಿನಿ ಡಿ. ಕಾಮತ್
ಮೂಲ: ಅಂತೋನಿ ಡಿಮೆಲ್ಲೊ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.