ನರೇಂದ್ರನೇ ನಿಮ್ಮ ನಾಯಕ
ಸಮಾಧಿಗೇರಿ ತನ್ನೊಳಗೆ ಭಗವಂತನನ್ನು ಕಾಣುವುದು ಜ್ಞಾನ; ಸಮಾಧಿಯಿಂದಿಳಿದು ಕಣ್ತೆರೆದು ಸಕಲ ಜೀವಜಂತುಗಳಲ್ಲೂ ಅದೇ ಭಗವಂತನನ್ನು ಕಾಣುವುದೇ ವಿಜ್ಞಾನಸ್ಥಿತಿ.' ನರೇಂದ್ರ ಸಮಾಧಿಸ್ಥಿತಿಯನ್ನು ಬಯಸಿದಾಗ ರಾಮಕೃಷ್ಣರು ಸಮಾಧಿಗಿಂತಲೂ ಎತ್ತರಕ್ಕೇರುವ ಉನ್ನತಸ್ಥಿತಿಯ ಅನುಭವ ಮಾಡಿಸಿಕೊಡುವುದಾಗಿ ಹೇಳಿದರು.
ರಾಮಕೃಷ್ಣರನ್ನು ಕೊಲ್ಕತ್ತದ ಕಾಶೀಪುರದ ಉದ್ಯಾನಗೃಹಕ್ಕೆ ಕರೆತಂದರು. ಈ ಉದ್ಯಾನಗೃಹವೇ ರಾಮಕೃಷ್ಣರ ಜೀವನ ನಾಟಕದ ಕೊನೆಯ ದೃಶ್ಯ. ಅವರು ಮುಂದೆ ತಮ್ಮ ದಿವ್ಯ ಸಂದೇಶಗಳನ್ನು ಸಾರಲಿರುವಂತಹ ಸರ್ವಸಂಗ ಪರಿತ್ಯಾಗಿಗಳಾದ ಯುವಕರನ್ನು ಸೇರಿಸಿ ಸಂಘಟನೆ ಮಾಡಿದ್ದು ಈ ಸ್ಥಳದಲ್ಲೇ. 'ನರೇಂದ್ರನೇ ನಿಮ್ಮ ನಾಯಕ. ಅವನ ಅಧ್ಯಾತ್ಮಿಕ ಶಕ್ತಿ ಹಾಗೂ ಅಧ್ಯಾತ್ಮಿಕ ಜ್ಞಾನವೇ ಮುಂದೆ ನಿಮಗೆ ಮಾರ್ಗದರ್ಶನವಾಗಿ ನಿಲ್ಲುತ್ತದೆ' ಎಂದು ರಾಮಕೃಷ್ಣರು ತಮ್ಮ ಪ್ರಿಯ ಶಿಷ್ಯರಿಗೆ ಹೇಳುತ್ತಿದ್ದರು. ನರೇಂದ್ರನು ಬುದ್ಧಿಶಕ್ತಿ, ವಿಚಾರಶಕ್ತಿ, ಜ್ಞಾನಶಕ್ತಿ ಹಾಗೂ ಶ್ರದ್ಧಾಭಕ್ತಿಗಳಲ್ಲಿ ತಮ್ಮೆಲ್ಲರನ್ನೂ ಮೀರಿಸಿದವನು ಎಂದು ಅವರೆಲ್ಲಾ ಅರಿತಿದ್ದರು. ರಾಮಕೃಷ್ಣರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾದದ್ದು ಕೂಡ ನರೇಂದ್ರನ ಮೂಲಕವೇ!
ರಾಮಕೃಷ್ಣರು ನರೇಂದ್ರನನ್ನು ಕುಳ್ಳಿರಿಸಿಕೊಂಡು ರಾಮಮಂತ್ರ ಉಪದೇಶ ಮಾಡುತ್ತಾ, 'ಇಗೋ, ಇದು ನನ್ನ ಇಷ್ಟಮಂತ್ರ. ಇದು ನನಗೆ ನನ್ನ ಗುರುವಿನಿಂದ ಸಿಕ್ಕಿದ ಮಂತ್ರ' ಎಂದು ತಿಳಿಸಿದರು.
ಆ ಮಂತ್ರವನ್ನು ಸ್ವೀಕರಿಸಿದಾಗ ಅವನಲ್ಲುಂಟಾದ ಪರಿಣಾಮ ಮಹಾದ್ಭುತವಾಗಿತ್ತು.
-ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

