ಬೈಟುಕಾಫಿ

ನಿತ್ಯಸಿದ್ಧನ ಗಾಢಧ್ಯಾನ!

Published On :

ನರೇಂದ್ರನಲ್ಲಿ ಅಧ್ಯಾತ್ಮಿಕ ಸಾಧನೆಯು ಪರಾಕಾಷ್ಠೆಗೇರುತ್ತಿದ್ದ ದಿನಗಳಲ್ಲಿ ಅವನಿಗೆ ಅದ್ವೈತ ಸಾಧನೆಯ ಅತ್ಯುನ್ನತ ಸ್ಥಿತಿಯಾದ ನಿರ್ವಿಕಲ್ಪ ಸಮಾಧಿಯ ಆನಂದವನ್ನು ಅನುಭವಿಸಬೇಕೆಂಬ ಹಂಬಲ ತೀವ್ರವಾಯಿತು. ರಾಮಕೃಷ್ಣರಲ್ಲಿಗೆ ಹೋಗಿ, ನೀವು ನನಗೆ ನಿರ್ವಿಕಲ್ಪ ಸಮಾಧಿಯನ್ನು ಕೊಡಿಸಲೇಬೇಕೆಂದು ಹಠಹಿಡಿದರು.
ಇದಾದ ಕೆಲ ದಿನಗಳ ನಂತರ ಒಂದು ಅಪರಾಹ್ನ ನರೇಂದ್ರ ಮಲಗಿರುವ ಸ್ಥಿತಿಯಲ್ಲೇ ಧ್ಯಾನಮಗ್ನನಾಗಿದ್ದ. ಆಗ ಅವನಿಗೆ ಅನಿರೀಕ್ಷಿತವಾಗಿ ಅನಿರ್ವಚನೀಯವಾದ ಅನುಭವವಾಗತೊಡಗಿತು. ಶಿಷ್ಯನೊಬ್ಬ ನರೇಂದ್ರನ ದೇಹವನ್ನು ಮುಟ್ಟಿ ನೋಡುತ್ತಾನೆ, ಅದು ಮರದ ಕೊರಡಿನಂತಾಗಿದೆ! ಪ್ರಜ್ಞೆಯೂ ಇಲ್ಲ. ಕಂಗಾಲಾದ ಅವನು 'ಬೇಗ ಬನ್ನಿ' ಎಂದು ಕೂಗಿಕೊಂಡ. ಎಲ್ಲರೂ ಬಂದು ನೋಡುತ್ತಾರೆ, ನರೇಂದ್ರ ನಿಶ್ಚೇಷ್ಟಿತನಾಗಿ ಬಿದ್ದಿದ್ದಾನೆ. ಶಿಷ್ಯರು ರಾಮಕೃಷ್ಣರಕೋಣೆಗೆ ಹೋಗಿ ನರೇಂದ್ರನಿಗಾದ ಸ್ಥಿತಿಯನ್ನು ಬಣ್ಣಿಸಿದರು. ಆಗ ಅವರು, 'ಇರಲಿ ಇರಲಿ.. ಸ್ವಲ್ಪ ಹೊತ್ತು ಹಾಗೇ ಇರಲಿ, ಅದಕ್ಕಾಗಿ ಅವನು ನನಗೆ ಸಾಕಷ್ಟು ತೊಂದರೆ ಕೊಟ್ಟಿದ್ದಾನೆ' ಎಂದು ಶಾಂತವಾಗಿ ನುಡಿದರು.
ನಿಧಾನವಾಗಿ ಪ್ರಜ್ಞಾವಸ್ಥೆಗೆ ಮರಳಿದ ನರೇಂದ್ರ ಧನ್ಯತೆಯ ಕಣ್ಣೀರು ಸುರಿಸುತ್ತಾ ರಾಮಕೃಷ್ಣರ ಮುಂದೆ ಹೋಗಿ ನಿಂತ. ರಾಮಕೃಷ್ಣರು 'ಜಗನ್ಮಾತೆ ನಿನಗೆ ಎಲ್ಲವನ್ನೂ ತೋರಿಸಿದ್ದಾಳೆ! ಆದರೆ ನೋಡು, ನಿನ್ನ ಈ ಅನುಭವವನ್ನು ಬೀಗಮುದ್ರೆ ಹಾಕಿಟ್ಟಿದ್ದೇನೆ. ನೀವು ಸಾಧಿಸಬೇಕಾದ ಕೆಲಸಗಳು ಇನ್ನೂ ಬಹಳಷ್ಟಿವೆ. ಅವುಗಳನ್ನೆಲ್ಲ ಮಾಡಿ ಮುಗಿಸಿದ ಮೇಲೆ ಮತ್ತೆ ಆ ನಿಧಿ ನಿನ್ನದಾಗುತ್ತದೆ' ಎಂದರು.


-ಆನಂದ ಎಸ್.ಎನ್.
anandsn193@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.