ಬೈಟುಕಾಫಿ

ಗುಪ್ತವಾರ್ತೆ ಸಂಗ್ರಹ

Published On :

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಗುಪ್ತದಳ ಇರುವಂತೆ ಪ್ರತಿ ಠಾಣೆಯಲ್ಲೂ ಅಂತಹ ಒಬ್ಬ ಸಿಬ್ಬಂದಿ ಇರುತ್ತಾರೆ. ಆದರೆ, ಅವರು ಗುಪ್ತದಳದವರಲ್ಲ. ಅದೇ ಠಾಣೆಯವರು. ತಾವು ಕೆಲಸ ಮಾಡುವ ಪೊಲೀಸ್ ಠಾಣೆಗೆ ಅವರು ಗುಪ್ತವಾರ್ತೆ ಸಂಗ್ರಹದಾರ ಎನ್ನಬಹುದು.
ಅಂತಹ ಸಿಬ್ಬಂದಿಯನ್ನು ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ನೇಮಿಸುತ್ತಾರೆ. ಅವರು ಸಮವಸ್ತ್ರ ಧರಿಸುವುದಿಲ್ಲ. ಸದಾ ಮಫ್ತಿಯಲ್ಲಿರುತ್ತಾರೆ. ತಮ್ಮ ಠಾಣೆ ವ್ಯಾಪ್ತಿಯ ಆಗುಹೋಗುಗಳ ಬಗ್ಗೆ ಗಮನಹರಿಸುವುದು, ರೌಡಿಗಳ ಚಟುವಟಿಕೆಗಳು, ಶಂಕಿತರ ಮೇಲೆ ಹಾಗೂ ಅಪರಿಚಿತರ ಮೇಲೆ ನಿಗಾ ಇಡುವುದು. ಸ್ಥಳೀಯ ಜನರ ಸಂಪರ್ಕ ಸಾಧಿಸುವುದು, ಅಲ್ಲಿನ ಆಗುಹೋಗುಗಳ ಬಗ್ಗೆ ಮಾಹಿತಿ ಕಲೆಹಾಕುವುದು, ಪೊಲೀಸ್ ಸಂಪರ್ಕದಾರರ ಜತೆ ಸಂಪರ್ಕ ಇಟ್ಟುಕೊಳ್ಳುವುದು.
ತಮ್ಮ ಠಾಣೆ ವ್ಯಾಪ್ತಿಯಲ್ಲಿ ಯಾವುದೇ ಅಪರಾಧ ಸಂಭವಿಸಿದರೂ ಆ ಬಗ್ಗೆ ಮೊದಲು ಗುಪ್ತವಾರ್ತೆಯ ಸಿಬ್ಬಂದಿಗೆ ಮಾಹಿತಿ ಬರುತ್ತದೆ. ಚೀತಾ ಅಥವಾ ಹೊಯ್ಸಳ ವಾಹನದ ಸಿಬ್ಬಂದಿ ಬೇರೆ ಪ್ರಕರಣಕ್ಕೆ ಹೋಗಿದ್ದಲ್ಲಿ ಗುಪ್ತವಾರ್ತೆಯ ಸಿಬ್ಬಂದಿ ಸ್ಥಳಕ್ಕೆ ಹೋಗಿ ಪರಿಶೀಲಿಸುವುದು ಅವರ ಕೆಲಸ.
ಮಾಹಿತಿ ಸಂಗ್ರಹಿಸುವ ಹಾಗೂ ಸಾರ್ವಜನಿಕರ ಜತೆ ಉತ್ತಮ ಸಂಪರ್ಕ ಹೊಂದಿರುವ ಸಿಬ್ಬಂದಿಯನ್ನು ಈ ಗುಪ್ತವಾರ್ತೆಯ ಸಿಬ್ಬಂದಿಯನ್ನಾಗಿ ನೇಮಿಸುತ್ತಾರೆ. ಅವರಿಗೆ ಸಮಯ ನಿಗದಿ ಇರುವುದಿಲ್ಲ. ಬೆಳಗ್ಗೆ ಬಂದರೆ ರಾತ್ರಿಯೇ ಮನೆಗೆ ಹಿಂದಿರುಗುತ್ತಾರೆ. ತಾವು ಕಲೆಹಾಕಿದ ಆ ದಿನದ ಮಾಹಿತಿ ಬಗ್ಗೆ ಠಾಣಾಧಿಕಾರಿಗೆ ಮಾಹಿತಿ ನೀಡುತ್ತಾರೆ.

- ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.