ಬೈಟುಕಾಫಿ

ರಂಗೋಲಿಯಲ್ಲಿ ಡ್ರಮ್‌ಜಮ್ ಕಲರವ

Published On :

ರಂಗೋಲಿ ಮೆಟ್ರೋ ಆರ್ಟ್ ಸೆಂಟರ್ ಡ್ರಮ್‌ಜಮ್ ಜತೆ ಎರಡನೇ ಸೆಷನ್‌ನ ಡ್ರಮ್ ನುಡಿಸುವ ಕಾರ್ಯಕ್ರಮವನ್ನು ಆಯೋಜಿಸಿದೆ. ತಿಂಗಳಲ್ಲಿ ಒಂದು ದಿನ ಈ ಕಾರ್ಯಕ್ರಮವನ್ನು ನಡೆಸಲಾಗು ವುದು.  ಜುಲೈ ತಿಂಗಳ ಕಾರ್ಯಕ್ರಮರ 21ರಂದು ನಡೆಯಲಿದೆ. ಇದು ಡ್ರಮ್‌ಜಮ್‌ನ ಎರಡನೇ ಸೆಷನ್. ಭಾರತದಲ್ಲಿ ರಿದಮ್ ಆಧಾರಿತ ಚಟುವಟಿಕೆಗಳ ಕಾರ್ಯಕ್ರಮಗಳ ಆದ್ಯ ಪ್ರವರ್ತಕ ಈ ಡ್ರಮ್‌ಜಮ್. ರಾಬರ್ಟ್ ನರೇನ್ ಹಾಗೂ ಹಾಡುಗಾರ್ತಿ-ನಟಿ ವಸುಂಧರಾ ದಾಸ್ ಈ ಕಾರ್ಯಕ್ರಮದ ಮುಂದಾಳತ್ವ ವಹಿಸಲಿದ್ದಾರೆ.
ಗುಂಪು ಡ್ರಮ್ಮಿಂಗ್‌ನಿಂದ ಮನಸ್ಸಿನ ಒತ್ತಡ ನಿವಾರಣೆ, ಪರಸ್ಪರರಲ್ಲಿ ಆತ್ಮೀಯತೆ, ಸಂವಹನದಿಂದ ಪರಸ್ಪರರ ನಡುವೆ ಇರುವ ಅಡೆತಡೆ ನಿವಾರಣೆಯಾಗಿ ಬಾಂಧವ್ಯವೇರ್ಪಡಲು ಸಹಾಯಕವಾಗುತ್ತದೆ ಎನ್ನುತ್ತಾರೆ ಆಯೋಜಕರು. ಈ ಕಾರಣಕ್ಕೆ ರಂಗೋಲಿ ಮೆಟ್ರೋ ಆರ್ಟ್ ಸೆಂಟರ್ ಸಾರ್ವಜನಿಕರಿಗಾಗಿ ಪ್ರತಿ ತಿಂಗಳು ಡ್ರಮ್‌ಜಮ್ ಜತೆ ಈ ಸಮುದಾಯ ಸೆಷನ್ ಏರ್ಪಡಿಸುತ್ತಾ ಬಂದಿದೆ. ಸಂಗೀತದಲ್ಲಿ ಯಾವುದೇ ಅನುಭವ ಇಲ್ಲದ ಯಾರು ಬೇಕಾದರೂ ಭಾಗವಹಿಸಬಹುದು. ಪ್ರವೇಶ ಉಚಿತ. ಸುಮಾರು 200 ಸಂಗೀತ ವಾದ್ಯಗಳನ್ನು ಡ್ರಮ್‌ಜಮ್ ಒದಗಿಸುತ್ತಿದೆ. ಭಾಗವಹಿಸುವವರು ತಮ್ಮೊಂದಿಗೆ ತಾಳವಾದ್ಯ ಸಾಧನಗಳನ್ನು ತರಬೇಕು.
ಹೆಚ್ಚಿನ ಮಾಹಿತಿಗೆ 080-22969265 ಸಂಪರ್ಕಿಸಬಹುದು.
ದಿನಾಂಕ: 21 ಜುಲೈ, 2013
ಸ್ಥಳ: ರಂಗೋಲಿ ಮೆಟ್ರೋ ಆರ್ಟ್ ಸೆಂಟರ್,
ಎಂ.ಜಿ. ರಸ್ತೆ, ಬೆಂಗಳೂರು.
ಸಮಯ: ಸಂಜೆ 4 ಗಂಟೆ ನಂತರ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.