ಬೈಟುಕಾಫಿ

ಭ್ರಾಮಕ ಪ್ರಪಂಚದ ಮಾಯಾಜಾಲ

Published On :

ರೀಲು..ಬರಿ ರೀಲು..  
ಹೌದು! ಇತ್ತೀಚಿನ ದಿನಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ರಿಯಾಲಿಟಿನೇ ಇರೋದಿಲ್ಲ. ಬರೀ ರೀಲೇ ಇರುತ್ತದೆ ಎಂದು ಅನಿಸುತ್ತಿದೆ. ನಾನು ಹಲವಾರು ವರ್ಷಗಳಿಂದ ರಿಯಾಲಿಟಿ ಶೋಗಳನ್ನು ಗಮನಿಸುತ್ತಾ ಬಂದಿದ್ದೇನೆ. ಆದರೆ ರಿಯಾಲಿಟಿ ಶೋಗಳಲ್ಲಿ ಕೆಲವು ಬದಲಾವಣೆ ತರಬೇಕು ಎಂದು ಅನಿಸುತ್ತಿದೆ.
1) ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಹಲವು ಪರೀಕ್ಷೆಗಳ ನಂತರ ಭಾಗವಹಿಸಲು ಅವಕಾಶ ಕೊಡುತ್ತಾರೆ. ಆದರೆ ಆ ಶೋಗೆ ಬರುವ ತೀರ್ಪುಗಾರರಿಗೆ ಯಾವುದೇ ಅನುಭವ ಇಲ್ಲದಿದ್ದರೂ ಆ ಪ್ರತಿಭೆಯ ಬಗ್ಗೆ ತೀರ್ಪು ಹೇಳುತ್ತಾರೆ, ಇದು ನ್ಯಾಯವೇ? ಉದಾ: ನೃತ್ಯ ರಿಯಾಲಿಟಿ ಶೋ ಎಂದರೆ, ಆ ತೀರ್ಪುಗಾರರಿಗೆ ನೃತ್ಯದ ಬಗ್ಗೆ ಅನುಭವ, ಮಾಹಿತಿ ಸ್ವಲ್ಪ ಮಟ್ಟಿಗಾದರೂ ಇರಬೇಕು. ಯಾರನ್ನೋ ತಂದು ಕೂರಿಸಿ ತೀರ್ಪು ಹೇಳಿ ಎಂದು ಹೇಳುವುದಲ್ಲ.
2) ರಿಯಾಲಿಟಿ ಶೋಗಳು ಪ್ರೇಕ್ಷಕರಿಗೆ ಏನಾದರೂ ಸಂದೇಶ ನೀಡುವಂತಿರಬೇಕು.
3) ಒಂದು ಚಾನೆಲ್‌ನಲ್ಲಿ ಒಂದು ರೀತಿ ರಿಯಾಲಿಟಿ ಶೋಗಳು ಇದ್ದರೆ, ಇನ್ನೊಂದು ಮಾಧ್ಯಮದಲ್ಲಿ ಬೇರೆ ಶೋ ಇರಬೇಕು. ಆದರೆ ಎಲ್ಲಾ ಚಾನೆಲ್‌ಗಳೂ ಬಹುತೇಕ ಒಂದೇ ರೀತಿಯ ರಿಯಾಲಿಟಿ ಶೋಗಳನ್ನು ನಡೆಸುತ್ತವೆ.
-ಎನ್.ಆರ್. ವಿನಯ್, ಸಾಗರ


ಸರ್ರಿಯಲಿಸ್ಟಿಕ್ ರಿಯಾಲಿಟಿ ಶೋ!  
ರಿಯಾಲಿಟಿ ಶೋಗಳು ನಿಜವಾಗಿಯೇ ಇರಬೇಕಾ? ಮನೆಯಲ್ಲಿ ನಡೆಯುವಂತೆಯೇ ಎಲ್ಲವೂ 'ರಿಯಲ್‌' ಆಗೇ ಆದ್ರೆ ವಾಹಿನಿಗೆ ಆಗುವ ಲಾಭವೇನು? ಚಿತ್ರ ರಚನೆಯಲ್ಲಿ 'ರಿಯಲ್‌' ಹಾಗೂ ಸರ್ರಿಯಲಿಸ್ಟಿಕ್ ಎನ್ನುವ ಪ್ರಯೋಗವಿದೆ. ಭ್ರಾಮಕ ಪ್ರಪಂಚದ ಕಲೆಯೇ ಸರ್ರಿಯಲಿಸ್ಟಿಕ್. ಅಂತೆಯೇ ಅತಿಹೆಚ್ಚು ಚರ್ವಿತ- ಚರ್ವಿಣಕ್ಕೊಳಗಾದ ಇತ್ತೀಚಿನ 'ದೊಡ್ಡ' ರಿಯಾಲಿಟಿ ಶೋದಲ್ಲಿ ಆದದ್ದೂ ಇದೇ. ಯಾವುದೋ ಹೆಣ್ಣು ಯಾರನ್ನೋ ತಬ್ಬಿ ಮುದ್ದಾಡುವುದು, ಯಾರೋ ಮತ್ಯಾರದ್ದೋ ಅಪ್ಪುಗೆಯಲ್ಲಿ ಕರಗುವುದು, ಬಾಯಿಗೆ ಬಂದಂತೆ ಸಂಭಾಷಣೆಗಳನ್ನು ಉದುರಿಸುವುದು... ಹೀಗೆ ಸಾಗಿ ಕಾವಿಸ್ವಾಮಿಗಳೂ ಕಾಮಿನಿಯರ ನಡುವೆ ಕರಗಿ ಹೋದದ್ದೂ ಆಯ್ತು. ಹೀಗೇ ಭ್ರಾಮಕ ಪ್ರಪಂಚವನ್ನು ಸೃಷ್ಟಿಸಿ, ಕೃತಕ ನಗೆ, ನಡವಳಿಕೆಗಳಲ್ಲಿ ಯಾರನ್ನೋ ಖುಷಿ ಪಡಿಸುವ ಪ್ರಯತ್ನ ಖಾಸಗಿ ವಾಹನಿಗಳಿಗೇಕೆ ಬೇಕಿತ್ತೋ?
-ಕೊ.ಸು. ನರಸಿಂಹಮೂರ್ತಿ, ಮೈಸೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.