ಬೈಟುಕಾಫಿ

ವಾರಕ್ಕೊಮ್ಮೆ ರಾತ್ರಿ ಪಾಳಿ

Published On :

ಪ್ರತಿ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುವ ಎಲ್ಲಾ ಸಿಬ್ಬಂದಿ ಹಗಲು ಹಾಗೂ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸಬೇಕು. ಇದು ಕಡ್ಡಾಯ. ಆಯಾ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಆ ದಿನದ ರಾತ್ರಿ ಪಾಳಿ ಯಾರು ಮಾಡಬೇಕೆಂಬುದನ್ನು ತಿಳಿಸುತ್ತಾರೆ. ಇದಕ್ಕೆ ಮಹಿಳಾ ಸಿಬ್ಬಂದಿಯೂ ಹೊರತಲ್ಲ. ರಾತ್ರಿಪಾಳಿಯಲ್ಲದೆ ಹಗಲಿನಲ್ಲೂ ಪೊಲೀಸರು ಗಸ್ತು ತಿರುಗುತ್ತಿರುತ್ತಾರೆ. ಕೆಲವರು ಪೊಲೀಸ್ ಸಮವಸ್ತ್ರ ಧರಿಸಿದ್ದರೆ, ಕೆಲವರು ಮಫ್ತಿಯಲ್ಲಿರುತ್ತಾರೆ.
ಆಯಾ ಠಾಣೆ ಪೊಲೀಸರು ಗಸ್ತು ತಿರುಗಲು ಚೀತಾ, ಹೊಯ್ಸಳ ವಾಹನಗಳಿರುತ್ತವೆ. ಹೊಯ್ಸಳ ವಾಹನದಲ್ಲಿ ಪಿಎಸ್‌ಐ, ಎಎಸ್‌ಐ, ಮುಖ್ಯ ಪೊಲೀಸ್ ಪೇದೆಗಳು ಇರುತ್ತಾರೆ. ಅವರ ಜತೆಗೆ ಒಬ್ಬ ಚಾಲಕ ಸೇರಿ ಜೀಪಿನಲ್ಲಿಬ್ಬರು ಹಾಗೂ ದ್ವಿಚಕ್ರವಾಹನದಲ್ಲಿಬ್ಬರು ಗಸ್ತಿನಲ್ಲಿರುತ್ತಾರೆ. ಶಂಕಿತರನ್ನು ಗಮನಿಸುವುದು, ತಮ್ಮ ಠಾಣೆ ವ್ಯಾಪ್ತಿಯಲ್ಲಿ ಯಾವುದೇ ಅಪರಾಧ ಕೃತ್ಯ ನಡೆದಲ್ಲಿ ತಕ್ಷಣ ಆ ಸ್ಥಳಕ್ಕೆ ಧಾವಿಸುವುದು ಗಸ್ತಿನಲ್ಲಿರುವ ಸಿಬ್ಬಂದಿ ಮಾಡುತ್ತಾರೆ.
ಅವರು ಯಾವ ಬಡಾವಣೆಯಲ್ಲಿ ಗಸ್ತು ತಿರುಗಬೇಕು ಎಂಬುದನ್ನು ನಿಗದಿಪಡಿಸಲಾಗಿರುತ್ತದೆ. ಆ ಪಾಯಿಂಟ್‌ವರೆಗೆ ಅವರು ಗಸ್ತು ತಿರುಗುತ್ತಾರೆ. ರಾತ್ರಿ ಪಾಳಿಗೆ ಕಡಿಮೆ ಸಿಬ್ಬಂದಿ ಇರುತ್ತಾರೆ. ಇವರ ಪಾಳಿ ಪ್ರತಿ ವಾರಕ್ಕೊಮ್ಮೆ ಬದಲಾಗುತ್ತದೆ. ಒಂದು ವಾರ ರಾತ್ರಿ ಪಾಳಿ ಮಾಡಿದವರು ಮತ್ತೊಂದು ವಾರ ಹಗಲು.. ಹೀಗೆ ಮುಂದುವರೆಯುತ್ತದೆ.
ಠಾಣೆಯ ಸಿಬ್ಬಂದಿ ಹಾಗೂ ಅಲ್ಲಿ ಸಂಭವಿಸುವ ಅಪರಾಧ ಸಂಖ್ಯೆಗನುಗುಣವಾಗಿ ಸಿಬ್ಬಂದಿಯನ್ನು ವಿಂಗಡಿಸಿ ಗಸ್ತು ತಿರುಗುವ ವ್ಯವಸ್ಥೆ ಮಾಡಲಾಗಿರುತ್ತದೆ. ಠಾಣೆಯೊಂದರಲ್ಲಿ ಅಂದಾಜು ಎಂಟಕ್ಕೂ ಅಧಿಕ ಗಸ್ತಿನ ತಂಡಗಳಿರುತ್ತವೆ.

-  ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.