ಬಾಲಗಂಗಾಧರ ತಿಲಕ್ ಜನುಮ ದಿನ
1856.
ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ, ಸಮಾಜ ಸುಧಾರಕ.
'ಲೋಕಮಾನ್ಯ' ಜನರೇ ನೀಡಿದ್ದ ಬಿರುದು.
ಇವರ 'ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಮತ್ತು ಅದನ್ನು ಪಡೆದೇ ತೀರುವೆ' ಘೋಷಣೆ ಸ್ವಾತಂತ್ರ್ಯ ಹೋರಾಟದಲ್ಲಿ ಹೊಸ ಕಿಚ್ಚು ಹತ್ತಿಸಿತು.
ಲಕ್ಷ್ಮೀ ಸೆಹಗಲ್ ಪುಣ್ಯತಿಥಿ
1914-2012.
ಸ್ವಾತಂತ್ರ್ಯ ಹೋರಾಟಗಾರ್ತಿ.
ಆಜಾದ್ ಹಿಂದ್ ಫೌಜ್‌ನಲ್ಲಿ ಆಫೀಸರ್. ಹೀಗಾಗಿ ಕ್ಯಾಪ್ಟನ್ ಲಕ್ಷ್ಮೀ ಎಂದೂ ಗುರುತಿಸಲಾಗುತ್ತದೆ.
1971ರಲ್ಲಿ ಸಿಪಿಐ (ಎಂ)ನಿಂದ ರಾಜ್ಯಸಭಾ ಸದಸ್ಯೆ, 2002ರ ರಾಷ್ಟ್ರಪಚಿ ಚುನಾವಣೆಯಲ್ಲಿ ಕಲಾಂ ವಿರುದ್ಧ ಎಡಪಕ್ಷಗಳ ಒಮ್ಮತದ ಅಭ್ಯರ್ಥಿ.
ದಿನಚರಿತೆ
1926- ಸಿನಿಮಾದಲ್ಲಿ ಧ್ವನಿಗ್ರಹಣ ತಂತ್ರಜ್ಞಾನ ಮೂವಿಟೋನ್ ಸೌಂಡ್ ಸಿಸ್ಟಮ್ ಹಕ್ಕುಸ್ವಾಮ್ಯ ಖರೀದಿಸಿದ ಅಮೆರಿಕದ ಫಾಕ್ಸ್ ಫಿಲಂ.
1927- ಇಂಡಿಯನ್ ಬ್ರಾಡ್‌ಕಾಸ್ಟಿಂಗ್ ಕಂಪನಿಯ ಮೊದಲ ಆಕಾಶವಾಣಿ ಕೇಂದ್ರ ಮುಂಬೈನಲ್ಲಿ ಕಾರ್ಯಾರಂಭ.
1928- ಇಟಲಿಯ ಫ್ಯಾಸಿಸ್ಟ್ ಸರ್ಕಾರ ವಿದೇಶಿ ಶಬ್ದಗಳ ಬಳಕೆ ನಿಷೇಧಿಸಿತು.
ಟ್ವೀಟ್‌ಸ್ಟಾಲ್
ಅಮ್ಮ ನಮ್ಮನ್ನು ಎಷ್ಟು ನಿಸ್ವಾರ್ಥವಾಗಿ ಪ್ರೀತಿಸುತ್ತಾಳೆ. ನಮಗೆ ಒಳ್ಳೆಯ ಬದುಕು ಕಟ್ಟಿಕೊಡಲು ಎಷ್ಟೆಲ್ಲ ತ್ಯಾಗ ಮಾಡುತ್ತಾಳೆ. ಕೊನೆಗೆ ಅವಳಿಗೊಂದು ಪ್ರಶಂಸೆಯ ಮಾತೂ ಹೇಳಲಾಗದಷ್ಟು ಸ್ವಾರ್ಥಿಗಳಾಗಿಬಿಡುತ್ತೇವೆ ನಾವು.
-ಕೃತ್ತಿಕಾ ಕಮ್ರಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

