ನಿಲ್ಲು, ಎದುರಿಸಿ ನಿಲ್ಲು!
ಸ್ವಾಮಿ ವಿವೇಕಾನಂದರ ಬೋಧನೆಗಳು ಅವರ ಜೀವನದ ಕುಲುಮೆಯಲ್ಲಿ ಕುದ್ದು ಕುದ್ದು ಹೊರಬಂದ ಅನುಭವದ ರಸಪಾಕ. ಆ ಅನುಭವಗಳು ಜೀವನ ಪಾಠಗಳಾಗಿ ಅವರ ಬದುಕನ್ನೇ ಬದಲಿಸಿದವು. ಅಂತಹ ಒಂದು ಅದ್ಭುತ ಜೀವನಪಾಠವನ್ನು ಅವರು ವಾರಣಾಸಿಯಲ್ಲಿ ಕಲಿತರು.
ಸ್ವಾಮೀಜಿ ಮಠದಿಂದ ಹೊರಟು ಮೊದಲು ಬಂದಿದ್ದು ವಾರಣಾಸಿಗೆ. ಒಂದು ದಿನ ಬೆಳಗ್ಗೆ ಸ್ವಾಮೀಜಿ ದುರ್ಗೆಯ ದರ್ಶನ ಮಾಡಿಕೊಂಡು ಬರುತ್ತಿದ್ದಾಗ, ಕೋತಿಗಳು ಹಿಂಡು ಹಿಂಡಾಗಿ ಬಂದು ಮುತ್ತಿಕೊಂಡವು. ಅವು ಅವರನ್ನು ಮುಂದುವರಿಯಲು ಬಿಡದೆ ಕಿರುಚತೊಡಗಿದವು. ಸ್ವಾಮೀಜಿ ದಾಪುಗಾಲು ಹಾಕುತ್ತ ನಡೆಯತೊಡಗಿದರು. ಕೋತಿಗಳು ವಿಚಿತ್ರವಾಗಿ ಕಿರುಚುತ್ತ ಅಟ್ಟಿಸಿಕೊಂಡು ಬಂದವು. ಸ್ವಾಮೀಜಿ ಓಡಲಾರಂಭಿಸಿದರು. ಆ ಸಮಯಕ್ಕೆ ಸರಿಯಾಗಿ ಎದುರುಗಡೆಯಿಂದ ಬಂದ ವೃದ್ಧ ಸಾಧುವೊಬ್ಬರು, ಹೇಳಿದರು, 'ನಿಲ್ಲು, ಆ ಪ್ರಾಣಿಗಳನ್ನು ಎದುರಿಸು!' ಸ್ವಾಮೀಜಿ ಕೋತಿಗಳಿಗೆ ಬೆನ್ನುಮಾಡಿ ಓಡುತ್ತಿದ್ದವರು ಇದ್ದಕ್ಕಿದ್ದಂತೆ ಎದುರಿಸಿ ನಿಂತು ಕೋತಿಗಳನ್ನು ದುರುಗುಟ್ಟಿ ನೋಡಿದರು. ಏನಾಶ್ಚರ್ಯ! ತಕ್ಷಣ ಆ ಕೋತಿಗಳೆಲ್ಲ ಓಟಕಿತ್ತವು. ವಿಸ್ಮಯಾನಂದಗಳಿಂದ ಸ್ವಾಮೀಜಿ ಆ ಸಾಧುವಿಗೆ ಕೃತಜ್ಞತೆಯಿಂದ ನಮಿಸಿದರು.
ಈ ಘಟನೆಯನ್ನು ಉದಾಹರಿಸುತ್ತಾ ಸ್ವಾಮೀಜಿ ನ್ಯೂಯಾರ್ಕ್ನಲ್ಲಿ ಭಾಷಣ ಮಾಡುವಾಗ ಹೇಳುತ್ತಾರೆ, 'ನಮ್ಮ ಇಡೀ ಜೀವನಕ್ಕೆ ಅನ್ವಯಿಸುವ ದೊಡ್ಡ ಪಾಠವಿದು. ಕಷ್ಟಗಳನ್ನು ಎದುರಿಸಿ ಧೈರ್ಯವಾಗಿ ಎದುರಿಸಿ ನಿಲ್ಲಿ. ಕಷ್ಟಕಾರ್ಪಣ್ಯಗಳನ್ನು ಕಂಡು ಹೆದರಿ ಓಡಿಹೋಗುವ ಬದಲು ಎದುರಿಸಿ ನಿಂತದ್ದೇ ಆದರೆ ಅವು ಆ ಕೋತಿಗಳಂತೆಯೇ ಪಲಾಯನ ಮಾಡುತ್ತವೆ. ನಮ್ಮಲ್ಲಿರುವ ಭಯ-ಅಜ್ಞಾನಗಳು, ಕಷ್ಟಕಾರ್ಪಣ್ಯಗಳು ತೊಲಗಬೇಕಾದರೆ ನಾವುಅವುಗಳನ್ನು ಎದುರಿಸಿ ಹೋರಾಡಬೇಕು.'
-ಆನಂದ ಎಸ್.ಎನ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

