ಬುದ್ಧಿ ಗೆದ್ದು ಬುದ್ಧನಾದ
ಜೀವನವೆಂದರೆ ಅದೊಂದು ಅವಿರತ ಹೋರಾಟ. ತನ್ನನ್ನು ಕೆಳಕ್ಕೊತ್ತುತ್ತಿರುವ ಪರಿಸರ-ಪರಿಸ್ಥಿತಿಗಳಲ್ಲಿ ಒಂದು ಜೀವಿಯ ವಿಕಸನ-ಮುನ್ನಡೆಗಳೇ ಜೀವನ.' ಅವುಗಳಲ್ಲಿ ಬುದ್ಧಿಯೂ ಒಂದು. ಅದನ್ನು ಗೆಲ್ಲುವುದೇ ನಮ್ಮ ನಿಜವಾದ ವಿಜಯ. ಅದು ಪಾಂಡಿತ್ಯಕ್ಕಿಂತ ಜೀವನಾನುಭವದ ಪೆಟ್ಟಿಗೆ ಬಾಗುತ್ತದೆ. ಕೆಳಕ್ಕೆಳೆಯುವ ಬುದ್ಧಿಯ ಮೇಲೆ ನಮ್ಮ ಅಧಿಪತ್ಯವು ಸಾರ್ವಜನಿಕ ಜೀವನದ ಉನ್ನತಿಯನ್ನು ಹೆಚ್ಚಿಸುತ್ತದೆ. ಸ್ವಾಮಿ ವಿವೇಕಾನಂದರು ತಮಗಾದ ಜೀವನಾನುಭವದಿಂದ ಬುದ್ಧಿಯನ್ನು ಹೇಗೆ ಗೆದ್ದರೆಂಬುದಕ್ಕೆ ಈ ಘಟನೆ ಉದಾಹರಣೆ.
ಒಮ್ಮೆ ಸ್ವಾಮೀಜಿ ಆಗ್ರಾದಿಂದ ಬೃಂದಾವನಕ್ಕೆ ಕಾಲ್ನಡಿಗೆಯಲ್ಲಿ ಹೊರಟರು. ದಾರಿ ಮಧ್ಯೆ ದಣಿವಾರಿಸಿಕೊಳ್ಳಲು ಕುಳಿತರು. ಅಲ್ಲೊಬ್ಬ ಹುಕ್ಕಾ ಸೇದುತ್ತ ಕುಳಿತಿದ್ದ. ಇವರು ಆತನನ್ನು ಹುಕ್ಕಾ ತಯಾರಿಸಿಕೊಡುವಂತೆ ಕೇಳಿದರು. ಆತ ತಾನು ಜಾಡಮಾಲಿ, ನಾನು ತಯಾರಿಸಿಕೊಟ್ಟರೆ ನಿಮಗೆ ಮೈಲಿಗೆಯಾಗುವುದಿಲ್ವೇ? ಎಂದು ಕೇಳಿದ. ಹಠಬಿಡದ ಸ್ವಾಮೀಜಿ ಕೊನೆಗೂ ಆತನಿಂದ ಹುಕ್ಕಾ ಪಡೆದು ಸೇದಿ, ಕೃತಜ್ಞತೆ ಸಲ್ಲಿಸಿ ಮುಂದೆ ಸಾಗಿದರು.
'ನಿಜಕ್ಕೂ ನಾನು ನನ್ನನ್ನು ಪರೀಕ್ಷೆ ಮಾಡಿ ನೋಡಿಕೊಳ್ಳುವುದಕ್ಕೋಸ್ಕರವೇ ಹಾಗೆ ಮಾಡಿದೆ. ಸನ್ಯಾಸ ಸ್ವೀಕರಿಸಿದ ಮೇಲೆ ಪ್ರತಿಯೊಬ್ಬನೂ ತನ್ನನ್ನು ತಾನು ಪರೀಕ್ಷೆ ಮಾಡಿ ನೋಡಿಕೊಳ್ಳಬೇಕು. ತಾನು ಜಾತಿ-ಕುಲ-ಗೋತ್ರಗಳ ಬಂಧನದಿಂದ ಪಾರಾಗಿದ್ದೇನೆಯೋ ಇಲ್ಲವೋ ಎಂದು. ಮಾತಿಗೂ ಕೃತಿಗೂ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕು. ಈ ಘಟನೆ ನನಗೊಂದು ಒಳ್ಳೆಯ ಪಾಠ ಕಲಿಸಿತು. ನಾವು ಯಾರನ್ನೂ ಕಡೆಗಣಿಸಬಾರದು; ಬದಲಾಗಿ ಎಲ್ಲರನ್ನೂ ಸಮಾನ ದೃಷ್ಟಿಯಿಂದ ಭಗವಂತನ ಮಕ್ಕಳೆಂದು ಭಾವಿಸಬೇಕು' ಎಂದು ಸ್ವಾಮೀಜಿ ಜಾತ್ಯಭಿಮಾನ, ಕುಲಾಭಿಮಾನಗಳ ಬಂಧನದಿಂದ ಪಾರಾದ ಬಗೆಯನ್ನು ವಿವರಿಸುತ್ತಿದ್ದರು.
-ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

