ಬೈಟುಕಾಫಿ

ನಂಬಿ ಕರೆದರೆ ಓ ಎನ್ನನೆ!

Published On :

ನಮ್ಮ ಶ್ರದ್ಧಾಭಕ್ತಿಗಳು ದೈವನಿಷ್ಠವಾಗಿದ್ದರೆ ಪ್ರೀತಿಯ ಭಗವಂತ ನಮ್ಮನ್ನು ಕೈಹಿಡಿದು ಕಾಪಾಡುತ್ತಾನೆ. ನಮ್ಮ ಶಕ್ತಿ ಸಾಮರ್ಥ್ಯಗಳು ಸಾಧನಾನಿಷ್ಠವಾಗಿದ್ದರೆ ದಯಾಮಯ ಭಗವಂತನು ನಮ್ಮನ್ನು ಮುನ್ನಡೆಸುತ್ತಾನೆ ಎಂಬುದಕ್ಕೆ ಸ್ವಾಮಿ ವಿವೇಕಾನಂದರಿಗೆ ಬೃಂದಾವನದಲ್ಲಿ ಆದ ಅನುಭವಗಳೇ ಸಾಕ್ಷಿ.
ಸ್ವಾಮೀಜಿ ಗೋವರ್ಧನ ಪರ್ವತ ಪ್ರದಕ್ಷಿಣೆ ಹಾಕಲು ಹೊರಟರು. ಈ ಪ್ರದಕ್ಷಿಣೆ ಮಾಡುವ ಕಾಲದಲ್ಲಿ ತಾವು ಭಿಕ್ಷೆ ಬೇಡಬಾರದು, ತಾನಾಗಿಯೇ ಬರುವುದನ್ನು ಸ್ವೀಕರಿಸಬೇಕೆಂದು ತೀರ್ಮಾನಿಸಿದ್ದರು. ಮಧ್ಯಾಹ್ನದ ವೇಳೆಗೆ ಅವರಿಗೆ ಹಸಿವು ತೀವ್ರವಾಯಿತು. ಬಸವಳಿದು ಬೀಳುವ ಹಾಗಾಯಿತು. ಆಗ ಯಾರೋ ಒಬ್ಬರು ಹಿಂದಿನಿಂದ 'ಬಾಬಾಜಿ ನಿಲ್ಲಿ, ನಿಮಗೋಸ್ಕರ ಊಟ ತಂದಿದ್ದೇನೆ, ಸ್ವೀಕರಿಸಿ' ಎಂದು ವಿನಂತಿಸುತ್ತಿದ್ದರು. ಆದರೆ ಸ್ವಾಮೀಜಿ ಇದನ್ನು ಪರೀಕ್ಷೆ ಮಾಡಲೋಸುಗ ಆಯಾಸಗೊಂಡಿದ್ದರೂ ಓಡಲಾರಂಭಿಸಿದರು. ಆ ವ್ಯಕ್ತಿಯೂ ಓಡಿಬಂದು ಅಂಗಲಾಚಿದ. ಸ್ವಾಮೀಜಿ ಆಗ ಊಟ ಮಾಡಿದರು. ಅನಾಥರಕ್ಷಕ ಭಗವಂತ ತನ್ನ ಭಕ್ತರನ್ನು ನೋಡಿಕೊಳ್ಳುವ ಪರಿಯನ್ನು ನೆನೆದು ಕಂಗಳು ಹನಿಗೂಡಿದವು.
ಇನ್ನೊಮ್ಮೆ ಸರೋವರದಲ್ಲಿ ವಸ್ತ್ರವನ್ನು ತೊಳೆದು ದಡದಲ್ಲಿ ಒಣಹಾಕಿ ಸ್ನಾನ ಮಾಡಿ ತಿರುಗಿ ಬಂದು ನೋಡಿದರೆ ವಸ್ತ್ರಗಳು ಮರದ ಮೇಲಿದ್ದ ಕೋತಿಯ ಕೈಯಲ್ಲಿತ್ತು! ಎಷ್ಟೇ ಪ್ರಯತ್ನಿಸಿದರೂ ಕೋತಿ ವಸ್ತ್ರ ಕೊಡಲಿಲ್ಲ. ಬೇಸರದಿಂದ ಕಾಡಿನತ್ತ ತೆರಳಿದರು. ಅಷ್ಟರಲ್ಲಿ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಬಂದು ಹೊಸ ಕಾವಿವಸ್ತ್ರ, ಸ್ವಲ್ಪ ಆಹಾರ ಕೊಟ್ಟು ಹೋದ. ಊಟ ಮುಗಿಸಿಕೊಂಡು ಸರೋವರದ ಸಮೀಪ ಬಂದಾಗ ವಸ್ತ್ರ ಒಣಹಾಕಿದ ಜಾಗದಲ್ಲೇ ಇತ್ತು! ಪ್ರೀತಿಯ ಭಗವಂತ ನಾವು ಎಲ್ಲಿಗೆ ಹೋದರೂ ಬಿಡದೆ ನಮ್ಮನ್ನು ಕಾಪಾಡುತ್ತಾನೆ ಎಂಬುದು ಅವರಿಗೆ ದೃಢವಾಯಿತು.

-ಆನಂದ ಎಸ್.ಎನ್.
anandsn193@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.