ಬೈಟುಕಾಫಿ

ಕಾಡುತ್ತಿರುವ ಕುಂದು ಕೊರತೆ

Published On :

ಅಪರಾಧ ನಡೆದ ಸ್ಥಳದಲ್ಲಿ ಪತ್ತೆಯಾಗುವ ರಕ್ತ, ಕೂದಲು, ಮೂಳೆ... ಮಾದರಿಗಳನ್ನು ಸಂಗ್ರಹಿಸಿ ಅದು ಯಾರಿಗೆ ಸೇರಿದ್ದು, ಏನು, ಎಂಬಿತ್ಯಾದಿ ಬಗ್ಗೆ ಪರಿಶೀಲಿಸಿ, ಪರೀಕ್ಷಿಸಿ ಅದರ ವರದಿಯನ್ನು ಪೊಲೀಸರಿಗೆ ನೀಡುವ ಉದ್ದೇಶದಿಂದ ಹಾಗೂ ಇದರಿಂದ ಪೊಲೀಸರ ತನಿಖೆಗೆ ಸಹಾಯವಾಗುವ ಕಾರಣಕ್ಕೆ ವಿಧಿವಿಜ್ಞಾನ ಪ್ರಯೋಗಾಲಯ ಸ್ಥಾಪಿಸಲಾಗಿದೆ.
ಆದರೆ, ಇದರಿಂದ ಉಪಯೋಗ ಪಡೆಯುವ ಬದಲು ಪೊಲೀಸರಿಗೆ ತೊಂದರೆಯೇ ಹೆಚ್ಚು. ಕಾರಣ, ಅಲ್ಲಿನ ಕುಂದುಕೊರತೆಗಳು. ಎಫ್‌ಎಸ್‌ಎಲ್ ಸಿಬ್ಬಂದಿ ಸಂಗ್ರಹಿಸಿಕೊಂಡು ಹೋದ ಮಾದರಿ ಪರೀಕ್ಷೆಯ ವರದಿ ಸಮಯಕ್ಕೆ ಸರಿಯಾಗಿ ಸಿಗುವುದಿಲ್ಲ.
ಇದರಿಂದ ಪೊಲೀಸರು ಕಚೇರಿ ಬಳಿ ಅಲೆಯುವುದಲ್ಲದೆ ತಿಂಗಳುಗಟ್ಟಲೆ ಕಾಯಬೇಕಾಗುತ್ತದೆ. ಆ ವೇಳೆಗೆ ಅಪರಾಧಿ ಪರಾರಿಯಾಗುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ದೂರುದಾರರಿಗೂ ತೊಂದರೆಯಾಗುತ್ತದೆ.
ಇದಕ್ಕೆ ಕಾರಣ ಸಿಬ್ಬಂದಿ ಹಾಗೂ ಅಗತ್ಯ ಯಂತ್ರೋಪಕರಣಗಳು. ರಾಜಧಾನಿ ಬೆಂಗಳೂರು ಸೇರಿದಂತೆ ಇಡೀ ರಾಜ್ಯದ ಎಫ್‌ಎಸ್‌ಎಲ್ ಕಚೇರಿಗಳಲ್ಲಿ ಈ ಕೊರತೆ ಇದೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕೊರತೆ ನೀಗಿಸುವ ಗೋಜಿಗೇ ಹೋಗಿಲ್ಲ.
ಮುಂದುವರೆದ ಈ ದಿನಗಳಲ್ಲಿ ಬೇರೆ ರಾಜ್ಯಗಳಲ್ಲಿನ ಎಫ್‌ಎಸ್‌ಎಲ್‌ನಲ್ಲಿ ಹೊಸ ಯಂತ್ರೋಪಕರಣ ಬಳಸಲಾಗುತ್ತಿದ್ದು, ಅಪರಾಧ ನಡೆದ ಸ್ಥಳದಲ್ಲಿ ಸಂಗ್ರಹಿಸಿದ ಮಾದರಿ ವಸ್ತುಗಳು ಪರೀಕ್ಷೆ ನಡೆಸಿ ಒಂದೆರಡು ದಿನದಲ್ಲಿ ಅದರ ವರದಿಯನ್ನು ಪೊಲೀಸರಿಗೆ ನೀಡಲಾಗುತ್ತದೆ.
ಆದರೆ, ರಾಜ್ಯದಲ್ಲಿ ತಿಂಗಳುಗಳೇ ಕಳೆದರೂ ಪರೀಕ್ಷೆಯ ವರದಿ ಪೊಲೀಸರ ಕೈಸೇರುವುದಿಲ್ಲ. ಇದರಿಂದ ತಮಗೆ ತೊಂದರೆಯಾಗುತ್ತಿದ್ದು, ತನಿಖೆಗೆ ಹಿನ್ನಡೆಯಾಗುತ್ತದೆ ಎಂಬುದು ಪೊಲೀಸರ ಆರೋಪ.


-  ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.