ಬೈಟುಕಾಫಿ

ಫೂಟ್ ಪ್ರಿಂಟ್‌ನಿಂದಲೂ ಪತ್ತೆ

Published On :

ಬೆರಳಚ್ಚು ಮೂಲಕ ಆರೋಪಿಗಳನ್ನು ಪತ್ತೆ ಮಾಡುವಂತೆ ಫೂಟ್ ಪ್ರಿಂಟ್ ಮೂಲಕ ಅಂದರೆ ಹೆಜ್ಜೆಗಳ ಗುರುತಿನ ಮೂಲಕವೂ ಪತ್ತೆ ಮಾಡಬಹುದು. ಒಂದು ವೇಳೆ ಆರೋಪಿ ಅಪರಾಧ ಕೃತ್ಯವೆಸಗುವಾಗ ಪಾದರಕ್ಷೆ ತೊಟ್ಟಿದ್ದಲ್ಲಿ ಅವುಗಳ ಗುರುತು ಅಪರಾಧ ನಡೆದ ಸ್ಥಳದಲ್ಲಿ ಸಿಕ್ಕಿದಲ್ಲಿ ಅದರಿಂದಲೂ ಆರೋಪಿ ಪತ್ತೆ ಮಾಡುವ ಸಾಧ್ಯತೆ ಇದೆ.
ಪಾದರಕ್ಷೆ ಅಥವಾ ಹೆಜ್ಜೆಯನ್ನೂ ಒಂದು ಸಾಕ್ಷಿ ಎಂದು ಪರಿಗಣಿಸಲಾಗುತ್ತದೆ. ಆದರೆ, ಸಾಕಷ್ಟು ಪ್ರಕರಣಗಳಲ್ಲಿ ಇವು ಪ್ರಕರಣದ ಪ್ರಮುಖ ಸಾಕ್ಷಿಗಳಾಗುವುದಿಲ್ಲ.
ಸಾಮಾನ್ಯವಾಗಿ ಎಲ್ಲಾ ಅಪರಾಧ ಪ್ರಕರಣಗಳಲ್ಲೂ ಹೆಜ್ಜೆಗುರುತುಗಳು ಸಿಗುವುದಿಲ್ಲ. ಕೆಲವು ಪ್ರಕರಣಗಳಲ್ಲಿ ಮಾತ್ರ ಈ ಗುರುತುಗಳು ಸಿಗುತ್ತವೆ. ಗಟ್ಟಿ ನೆಲದಲ್ಲಿ ನಡೆದಾಡಿದರೆ ಹೆಜ್ಜೆ ಗುರುತು ಪತ್ತೆಹಚ್ಚುವುದು ಕಷ್ಟ. ಮರಳು, ಮಣ್ಣು, ಕೆಸರಿನಲ್ಲಿ ನಡೆದಾಡಿದಲ್ಲಿ ನಡೆದಾಗ ಮಾತ್ರ ಈ ಹೆಜ್ಜೆ ಹಾಗೂ ಪಾದರಕ್ಷೆಯ ಗುರುತುಗಳು ಅಳಿಸದೆ ಹಾಗೆಯೇ ಇರುತ್ತವೆ. ನೀರು ಅಥವಾ ತೇವಾಂಶ ಇರುವ ಸ್ಥಳದಲ್ಲಿ ಪತ್ತೆಮಾಡುವುದು ಅಸಾಧ್ಯ. ಅಲ್ಲದೆ ಘಟನೆ ನಂತರ ಸ್ಥಳವನ್ನು ಸ್ವಚ್ಛಗೊಳಿಸಿದರೂ ಗುರುತು ಪತ್ತೆ ಕಷ್ಟ.
ಅಪರಾಧ ಘಟನೆ ನಡೆದ ಸ್ಥಳಕ್ಕೆ ಮೊದಲು ಬರುವ ಪೊಲೀಸರು ಅಥವಾ ಸಾರ್ವಜನಿಕರು ಅಲ್ಲಿನ ಸಾಕ್ಷಿಗಳ ಬಗ್ಗೆ ಎಚ್ಚರವಹಿಸಬೇಕು. ಒಂದು ವೇಳೆ ಅಪರಾಧ ಕೃತ್ಯ ನಡೆದ ಸ್ಥಳದಲ್ಲಿ ಹೆಜ್ಜೆ ಗುರುತು ಇದ್ದಲ್ಲಿ ಪೊಲೀಸರು ತಕ್ಷಣ ಎಚ್ಚರಗೊಳ್ಳಬೇಕು. ಆ ಸ್ಥಳಗಳನ್ನು ಗುರುತು ಮಾಡಬೇಕು. ಆ ಸ್ಥಳದಲ್ಲಿ ಯಾರೂ ಸುಳಿಯದಂತೆ ಎಚ್ಚರವಹಿಸಬೇಕು. ನಂತರ ನಿಯಮಾನುಸಾರವಾಗಿ ಆ ಪಾದರಕ್ಷೆ ಅಥವಾ ಹೆಜ್ಜೆಯ ಗುರುತನ್ನು ತೆಗೆದುಕೊಂಡು ಪರೀಕ್ಷೆಗಾಗಿ ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡುತ್ತಾರೆ.

-  ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.