ಬೈಟುಕಾಫಿ

ನಾನು ಮತ್ತು ನನ್ನ ಸ್ನೇಹಿತೆ

Published On :

ಒಂದು ದಿನ ಮಧ್ಯಾಹ್ನ ನಾನು ಮತ್ತು ನನ್ನ ಸ್ನೇಹಿತೆ ಮಾರ್ಕೆಟ್‌ಗೆ ಹೊರಟಿದ್ದೆವು. ಬಸ್ ತಪ್ಪಿ ಹೋಗುವುದೇನೋ ಎಂಬ ಧಾವಂತದಲ್ಲಿ ಬೇಗಬೇಗ ಹೆಜ್ಜೆ ಹಾಕುತ್ತಿದ್ದೆವು. ಬಸ್ ದೂರದಲ್ಲಿ ಬರುತ್ತಿತ್ತು. ಎಲ್ಲರೂ ಬಸ್ ಹತ್ತಲು ತಾ ಮುಂದು ನಾ ಮುಂದು ಅನ್ನುವಷ್ಟರಲ್ಲಿ ಎಲ್ಲಿಂದಲೋ ಒಂದು ಬೈಕ್ ಸವಾರ ಸ್ಪೀಡಾಗಿ ಬಂದು, ನಿಂತಿದ್ದ ಒಬ್ಬ ಪ್ರಾಯದವರಿಗೆ ಗುದ್ದೆ ಅಷ್ಟೇ ರಭಸದಲ್ಲಿ ಮಾಯವಾಗಿಬಿಟ್ಟ. ಪಾಪ, ಆ ಮುದಿ ಪ್ರಾಯದವರು ನೋವಿನಿಂದ ಒದ್ದಾಡುತ್ತಿದ್ದರು. ಆದರೆ ಎಲ್ಲರೂ ಬಸ್ ಹತ್ತುವುದರಲ್ಲಿಯೇ ಮಗ್ನರಾಗಿದ್ದರು. ಯಾರಿಗೂ ಅವರ ಬಗ್ಗೆ ಗಮನವೇ ಇಲ್ಲ. ನಾನು ಏನು ಮಾಡುವುದೆಂದು ಯೋಚಿಸುತ್ತಿರುವಾಗಲೇ ನನ್ನ ಸ್ನೇಹಿತೆ ಯಾರನ್ನೂ ಕಾಯದೆ ಆಟೋ ತರಿಸಿ ನನ್ನನ್ನು ಕರೆದಳು. ನಾವಿಬ್ಬರೂ ಸೇರಿ ಅವರನ್ನು ಆಸ್ಪತ್ರೆ ಗೆ ಸಾಗಿಸಿದೆವು. ಮತ್ತೆ ಅವರ ಮನೆಗೆ ಸುದ್ದಿ ತಲುಪಿಸಿದೆವು. ಅವರ ಮನೆಯವರು ಬರುವವರೆಗೂ ಅಲ್ಲಿದ್ದು ಹೊರಟೆವು.
ಇಬ್ಬರೂ ಮಾತಾಡುತ್ತ ನಡೆಯುತ್ತಿರುವಾಗ ನಾನು ಸ್ನೇಹಿತೆಯನ್ನೇ ನೋಡುತ್ತಿದ್ದೆ. ಹೆಮ್ಮೆ ಅನಿಸಿತು, ಇವಳಂಥ ಸ್ನೇಹಿತೆಯನ್ನು ಪಡೆದ ನಾನೇ ಧನ್ಯಳು ಎಂದು. ಅವಳಲ್ಲಿ ಇರುವ ಈ ಒಳ್ಳೆ ಗುಣ ನಮ್ಮಲ್ಲಿ ಯಾಕೆ ಇಲ್ಲ? ನಮ್ಮ ಮನಸಿಗೆ ಇದೆಲ್ಲಾ ಫಕ್ಕನೆ ಯಾಕೆ ಹೊಳೆಯುವುದಿಲ್ಲ?... ಎಂಬ ಯೋಚನೆಯಲ್ಲಿಯೇ ಮನೆ ಸಮೀಪಿಸಿತು.  'ಮಾರ್ಕೆಟ್‌ಗೆ ನಾಳೆ ಹೋಗೋಣ ಅಲ್ವಾ' ಅಂದಳು ಸ್ನೇಹಿತೆ. 'ಸರಿ' ಅಂದು ಮನೆಗೆ ನಡೆದೆ.
ನಾವೂ ಯಾಕೆ ಆಗಬಾರದು ನನ್ನ ಸ್ನೇಹಿತೆಯ ಹಾಗೆ?

-ಸುನಂದಾ ಪುತ್ರನ್ ಬಹರೇನ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.