ಆತ್ಮವಿಕಾಸದ ಹಾದಿಯಲ್ಲಿ
ನರೇಂದ್ರ, ರಾಮಕೃಷ್ಣರ ಬಳಿ ಆಧ್ಯಾತ್ಮಿಕ ಶಿಕ್ಷಣ ಪಡೆಯುತ್ತಿದ್ದ ಕಾಲದಲ್ಲಿಯೇ ಪ್ರಾಚ್ಯ-ಪಾಶ್ಚಾತ್ಯ ಜ್ಞಾನದ ಅಧ್ಯಯನದಲ್ಲಿ ತೊಡಗಿದ್ದ. ತತ್ವಶಾಸ್ತ್ರ-ಸಿದ್ಧಾಂತಗಳನ್ನು ಅಧ್ಯಯನ ಮಾಡಿದಂತೆ ಇವುಗಳಲ್ಲಿ ಹೆಚ್ಚಿನವು ಕೇವಲ ಬುದ್ಧಿ ಚಮತ್ಕಾರಕ್ಕೆ ಸಂಬಂಧಿಸಿದ ಅಂಶಗಳು, ಇನ್ನೂ ಕೆಲವು ವಿಚಾರ ಸ್ವಾತಂತ್ರ್ಯಕ್ಕೆ ಅವಕಾಶ ಕೊಡದಿರುವ 'ಕಣ್ಣುಮುಚ್ಚಿಕೊಂಡು ನಂಬು' ಎನ್ನುವ ಸಿದ್ಧಾಂತಗಳು ಎಂದೆನಿಸಿತು. ಯಾವುದು ಮನುಷ್ಯನಲ್ಲಿ ಆಧ್ಯಾತ್ಮಿಕ ಪ್ರವೃತ್ತಿಯನ್ನುಂಟುಮಾಡುತ್ತದೆಯೋ, ಯಾವುದು ಮನುಷ್ಯನ ರಚನಾತ್ಮಕ ಶಕ್ತಿಯ ಮೂಲವೋ, ಯಾವುದು ಮನುಷ್ಯನ ಬುದ್ಧಿಶಕ್ತಿ-ಇಚ್ಛಾಶಕ್ತಿಗಳಿಗೆ ಅತ್ಯುನ್ನತವಾದ ಮತ್ತು ಅತ್ಯಂತ ಉದಾತ್ತವಾದ ಸ್ಫುರಣೆಯನ್ನು ಕೊಡುತ್ತದೆಯೋ ಅದು ಮಾತ್ರವೇ ನಿಜವಾದ ತತ್ವಶಾಸ್ತ್ರ.
ಪಾಶ್ಚಾತ್ಯ ವಿಜ್ಞಾನ ಹಾಗೂ ಅವುಗಳ ವಿಶ್ಲೇಷಣಾ ವಿಧಾನಗಳನ್ನು ಆಳವಾಗಿ ಅಧ್ಯಯ ಮಾಡುತ್ತಾ, ರಾಮಕೃಷ್ಣರ ಅತೀಂದ್ರಿಯ ಅನುಭವಗಳನ್ನು ವಿಮರ್ಶಿಸಿ ನೋಡಿದ. ಇವುಗಳ ಜತೆಗೆ ಅವನ ನೆಚ್ಚಿನ ವಿಷಯಗಳಾದ ಕಾವ್ಯ, ಇತಿಹಾಸಗಳಲ್ಲೂ ಕರಗತನಾದ. ನರೇಂದ್ರ ಯಾವುದೇ ಕಾರ್ಯದಲ್ಲಿ ತೊಡಗಿರಲಿ ಅದರ ಪ್ರಾಶಸ್ತ್ಯ, ಯುಕ್ತತೆಗಳನ್ನು ಮನಗಂಡು ಮಾಡುತ್ತಿದ್ದನೇ ಹೊರತು ಎಂದಿಗೂ ಮತ್ತೊಬ್ಬರ ಬಲಾತ್ಕಾರದಿಂದಲ್ಲ. ಅವನದು ಸ್ವತಂತ್ರ ಮನೋಭಾವ. ಆತ್ಮವಿಶ್ವಾಸದ ಹಾದಿಯಲ್ಲಿ ಸ್ವತಂತ್ರ ಮನೋಭಾವವು ಆಧಾರಭೂತ ಗುಣ. ನರೇಂದ್ರ ತನ್ನ ದಿವ್ಯಗುರು ರಾಮಕೃಷ್ಣರ ಮಾರ್ಗದರ್ಶನದಲ್ಲಿ ಮೆಲ್ಲಮೆಲ್ಲನೆ ಆಧ್ಯಾತ್ಮಿಕ ಜೀವನವನ್ನು ಬಲಪಡಿಸಿಕೊಳ್ಳತೊಡಗಿದ.
-ಆನಂದ ಎಸ್.ಎನ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

