ಬೈಟುಕಾಫಿ

ಮದುವೆ ಪ್ರಸ್ತಾಪ: ದೈವ ಸಂಕಲ್ಪ

Published On :

ನರೇಂದ್ರ ಪದವಿಯ ಕೊನೆಯ ವರ್ಷದಲ್ಲಿದ್ದಾಗ ಅವನ ತಂದೆ ವಿಶ್ವನಾಥ ದತ್ತರು ಮಗನನ್ನು ಒಬ್ಬ ಸಮರ್ಥ ವಕೀಲನನ್ನಾಗಿ ಮಾಡುವ ಉದ್ದೇಶದಿಂದ ಪ್ರಸಿದ್ಧ ವಕೀಲಿ ಸಂಸ್ಥೆಗೆ ಸೇರಿಸಿದರು. ನರೇಂದ್ರನನ್ನು ವಕೀಲಿಯಲ್ಲಿ ವಿಶೇಷ ಶಿಕ್ಷಣಕ್ಕಾಗಿ ಇಂಗ್ಲೆಂಡಿಗೆ ಕಳುಹಿಸುವ ಇರಾದೆಯೂ ಇತ್ತು.

ಪ್ರಾಪ್ತವಯಸ್ಕನಾದ ನರೇಂದ್ರನಿಗೆ ಮದುವೆ ಮಾಡುವ ಪ್ರಯತ್ನದಲ್ಲಿ ತೊಡಗಿದಾಗ, ನರೇಂದ್ರ ಖಡಾಖಂಡಿತವಾಗಿ ತಳ್ಳಿಹಾಕಿದ. ಇದು ಮನೆಯವರ ಮನಸ್ಸಿನಲ್ಲಿ ರಾಮಕೃಷ್ಣರ ಬಗ್ಗೆ ಸಂಶಯದ ಮೊಳಕೆಯೊಡೆಯಲು ಕಾರಣವಾಯಿತು. ಅವರ ಪ್ರಭಾವದಿಂದಲೇ ಇವನು ಮದುವೆಯಾಗುವುದಿಲ್ಲ ಎನ್ನುತ್ತಿರುವುದು ಎಂದು ಅರ್ಥೈಸಿಕೊಂಡರು. ಇದಕ್ಕೆ ಪರಿಹಾರ ಹುಡುಕಿ, ಆದಷ್ಟು ಬೇಗ ಮದುವೆ ಮಾಡಿಬಿಡುವ ಪ್ರಯತ್ನದಲ್ಲಿ ತೊಡಗಿದರು. ಆದರೆ ದೈವಸಂಕಲ್ಪ ಬೇರೆ ಪ್ರಯತ್ನದಲ್ಲಿ ತೊಡಗಿತ್ತು!
1884ರ ಫೆಬ್ರವರಿ 25, ಸಂಗೀತ ಕಛೇರಿ ನಡೆಸಲು ನರೇಂದ್ರ ಬಾರಾನಾಗೂರಿಗೆ ಹೋಗಿದ್ದ. ಕಾರ್ಯಕ್ರಮ ಮುಗಿಸಿ ವಿಶ್ರಮಿಸಿಕೊಳ್ಳುತ್ತಿದ್ದಾಗ, ರಾತ್ರಿ 2 ಗಂಟೆ ಸುಮಾರಿಗೆ ನರೇಂದ್ರನಿಗೆ ತಂದೆ, ವಿಶ್ವನಾಥ ದತ್ತರು ತೀರಿಕೊಂಡ ಸುದ್ದಿ ತಿಳಿಯಿತು. ಮನೆಗೆ ಧಾವಿಸಿದ. ತಂದೆಯ ಶರೀರವನ್ನು ಸ್ಮಶಾನಕ್ಕೊಯ್ಯಲು ಸಿದ್ಧತೆ ನಡೆಯುತ್ತಿತ್ತು. ತಾಯಿ, ಸೋದರ ಸೋದರಿಯರೆಲ್ಲರೂ ರೋದಿಸುತ್ತಿದ್ದರು. ನರೇಂದ್ರನಿಗೆ ದಿಕ್ಕು ತೋಚದೇ ನಿಂತುಬಿಟ್ಟ. ಹಿರಿಯ ಮಗನಾದ್ದರಿಂದ ಉತ್ತರಕ್ರಿಯೆಗಳನ್ನೆಲ್ಲ ನೆರವೇರಿಸಿದ. ಈ ಘಟನೆ ನರೇಂದ್ರನ ಮದುವೆಯ ಪ್ರಸ್ತಾಪಕ್ಕೆ ವಿರಾಮ ಹಾಕಿತು.
-ಆನಂದ ಎಸ್.ಎನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.