ಧರ್ಮವೆಂದರೆ... (ವಿವೇಕ ವಿಚಾರ)
ಮಾನವನ ಜೀವನದಲ್ಲಿ ಧರ್ಮ ಪ್ರಧಾನ ಪಾತ್ರ ವಹಿಸುತ್ತದೆ. ಅದು ನಮ್ಮ ಬಾಳಿನೊಂದಿಗೆ ಅವಿನಾಭಾವ ನಂಟನ್ನು ಹೊಂದಿದೆ. ನಮ್ಮ ನಡವಳಿಕೆ, ಆಚಾರ-ವಿಚಾರಗಳಲ್ ಅದು ಅಭಿವ್ಯಕ್ತಗೊಳ್ಳುತ್ತದೆ. ಇದನ್ನು ಆಧರಿಸಿ ನಮ್ಮ ಧರ್ಮ ಯಾವುದೆಂದು ಗುರುತಿಸುತ್ತಾರೆ. ಆದರೆ ಇಂದು ಧರ್ಮವೆಂಬುದು ಮಾನವನ ಬಾಹ್ಯ ಬದುಕಿನ ಆಚಾರ, ನಡವಳಿಕೆಗಳಿಗೆ ಮೂಲಾಧಾರವಾದಂತೆ ಆಂತರಿಕ ಗುಣ ಸ್ವಭಾವಕ್ಕೆ, ನೈತಿಕತೆಗೆ ತಳಹದಿಯಾಗುತ್ತಿಲ್ಲ. ಅಂತಹ ತೋರಿಕೆಯ ಧರ್ಮದಿಂದ ಯಾವುದೇ ಪ್ರಯೋಜನವಿಲ್ಲ.
ಮನುಷ್ಯನು ಸತ್ಯವನ್ನರಿತು ಎದ್ದು ನಿಂತು 'ನಾನೇ ದೇವರು' ಎಂದು ಘೋಷಿಸುವ ಕಾಲ ಬರುತ್ತದೆ. ನಮ್ಮ ನಿಜಸ್ವರೂಪವೇ ನಮ್ಮ ಅಮರತ್ವವೇ ದೇವರಾಗಿರುವಾಗ, ದೇವರು ಎಲ್ಲೋ ದೂರದಲ್ಲಿದ್ದಾನೆ ಎಂದು ಬೋಧಿಸುವುದೇಕೆ? ಧರ್ಮವು ಮನುಷ್ಯನ ದೌರ್ಬಲ್ಯದಿಂದ ಉದಿಸಿದುದಲ್ಲ ಅಥವಾ ಯಾವುದೋ ಘೋರ ಉಪದ್ರವಕ್ಕೆ ಹೆದರಿ ಮಾಡಿಕೊಂಡಿದ್ದಲ್ಲ. ಧರ್ಮವು ಪ್ರೇಮದ ವಿಕಸನ, ಬೆಳವಣಿಗೆ.
ಒಬ್ಬನೇ ಸೂರ್ಯನ ಛಾಯಾಚಿತ್ರಗಳನ್ನು ಬೇರೆ ಬೇರೆ ಸಮಯಗಳಲ್ಲಿ ಬೇರೆ ಬೇರೆ ದಿಕ್ಕುಗಳಲ್ಲಿ ತೆಗೆದರೆ, ಪ್ರತಿಯೊಂದು ಚಿತ್ರದಲ್ಲೂ ಆತ ವಿಭಿನ್ನನಾಗಿ ಕಾಣುವಂತೆ ಈ ಬೇರೆ ಬೇರೆ ತುಲನಾತ್ಮಕ ಸತ್ಯಗಳು ಆ ಪರಮ ಸತ್ಯದೊಂದಿಗೆ ಏಕರೀತಿಯ ಸಂಬಂಧವುಳ್ಳವುಗಳಾಗಿವೆ.
ಧಾರ್ಮಿಕ ವ್ಯಕ್ತಿಯೆಂದು ಕರೆಯಿಸಿಕೊಳ್ಳಬೇಕಾದರೆ ಶಾಸ್ತ್ರಗ್ರಂಥಗಳನ್ನು ಓದಿಕೊಂಡು ಭಾಷಣಬಿಗಿದು, ಜನರನ್ನು ಬೆರಗುಗೊಳಿಸಿದರೆ ಸಾಲದು; ಓದಿ ಗಳಿಸಿದ ಪಾಂಡಿತ್ಯವನ್ನು ಬಳಸಿಕೊಂಡು ಸಾಧನೆ ಮಾಡಬೇಕು. ಅದು ಸತ್ಯಾಂಶವನ್ನು ತೋರಿಸಿಕೊಡುವುದಾಗಿರಬೇಕು.
ಆನಂದ ಎಸ್.ಎನ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

