-ಮೂರ್ಖರ ದಿನ ನಿಮ್ಮ ಬಾಸ್ ಮೇಲೆ ಗುರುತರ ಭ್ರಷ್ಟಾಚಾರದ ಆಪಾದನೆ ಹೊರಿಸಿ ಮೇಲಧಿಕಾರಿಗೆ ಪತ್ರ ಬರೆಯಿರಿ. ಫೇಲಾದರೆ 'ಏಪ್ರಿಲ್ ಫೂಲ್' ಅಂದರಾಯಿತು.
-ಮೊಬೈಲ್ ಒಳಗೆ ನೀರು ಸೇರಿದ್ದರೆ ಹೀಗೆ ಮಾಡಿ. ಒಂದು ಬಾಣಲೆಯಲ್ಲಿ ಎಣ್ಣೆ ಸುರಿದು ಕಾಯಿಸಿ, ಅದರಲ್ಲಿ ಮೊಬೈಲ್ ಬಿಡಿ. 5 ನಿಮಿಷ ಬಿಟ್ಟು ತೆಗೆಯಿರಿ. ಕಾರಣ- ಎಣ್ಣೆಗೂ ನೀರಿಗೂ ಸೀಗೆಕಾಯಿ ಸಂಬಂಧ.
-ಮಂಡಿಯನ್ನು ಮುಚ್ಚುವ ಕುರ್ತಾ ಅಥವಾ ಅಂಗಿ ಧರಿಸುವ ಪ್ರಯೋಜನ- ಪ್ಯಾಂಟ್ನ ಜಿಪ್ ಹಾಕಿದ್ದೇನೋ ಇಲ್ಲವೋ ಎಂಬ ಅನುಮಾನದಿಂದ ಪಾರಾಗುವುದು.
-ಸಂದರ್ಶನಕ್ಕೆ ತೆರಳುವಾಗ ಫೇಸ್ಬುಕ್ಗೆ ಸ್ಟೇಟಸ್ ಹಾಕಿ. ನೀವೆಷ್ಟು ಅಪ್ಡೇಟ್ ಎಂಬುದಕ್ಕೆ ಅದನ್ನು ತೋರಿಸಬಹುದು.
-ಮಿತ್ರರ ಜತೆ ಹೋಟೆಲ್ಗೆ ಹೋದಾಗ ನಿಧಾನವಾಗಿ ತಿನ್ನಿ. ಮೋದಲು ತಿಂದು ಮುಗಿಸಿದವನು ಬಿಲ್ಲು ಕೈಗೆತ್ತಿಕೊಳ್ಳಬೇಕಾಗುತ್ತದೆ.
-'ನಾಯಿ ಇದೆ ಎಚ್ಚರಿಕೆ' ಎಂಬ ಬೋರ್ಡ್ ಸದಾ ನಿಮ್ಮ ಮನೆ ಮುಂದಿರಲಿ. ನಾಯಿ ಇಲ್ಲದಿದ್ದರೆ ಪರವಾಗಿಲ್ಲ, ಬೋರ್ಡೇ ಆ ಕೆಲಸಕ್ಕೆ ಸಾಕು.
-ಹಿಂದಿನ ಬೆಂಚಿನ ಹುಡುಗ ಅನ್ನಿಸಿಕೊಂಡರೂ ಪರವಾಗಿಲ್ಲ, ಮುಂದಿನ ಬೆಂಚಿನ ಹುಡುಗಿಯರನ್ನು ನೋಡುತ್ತಿರಬಹುದು.
-ಮನೆಗೆ ನಂಟರು ಪದೇ ಪದೆ ಬರುವುದನ್ನು ತಡೆಯುವ ಉಪಾಯ- ನೀವೇ ಅವರ ಮನೆಗೆ ಹೋಗುವುದು.