ಐದು ವರ್ಷಕ್ಕೊಮ್ಮೆ ರಾಜಕಾರಣಿಗಳಿಗೆ! ಗಾಢ ನಿದ್ದೆಯಿಂದ ಏಳಲೇಬೇಕಾದ ಅನಿವಾರ್ಯತೆ ತಂದೊಡ್ಡುವುದು!
- ಶ್ರೀಶ ಕಟ್ಪಾಡಿ, ಬಂಟ್ವಾಳ
ಸೀರೆ, ಪಂಚೆಗಳ ಹಳೆ ಸ್ಟಾಕುಗಳಿಗೆ ಮುಕ್ತಿ ದೊರಕಿಸಿಕೊಡುವ ಕಾಲ!
- ರಮಾ ಬಾದರದಿನ್ನಿ
ರಾಜಕಾರಣಿಗಳು ಕೊಚ್ಚೆಗುಂಡಿಯಲ್ಲಿ ನಿಂತು ಒಬ್ಬರ ಮೇಲೊಬ್ಬರು ಕೆಸರೆರಚಾಟ ಮಾಡುವ ಸಮಯ!
- ವೆಂಕಟೇಶ್ ನಾಯಕ್, ಕಾರವಾರ
ಜಾಗೃತ ಮತದಾರನಿಗೆ ರಾಜಕಾರಣಿಗಳ ಭವಿಷ್ಯ ಬರೆಯಲು ಐದು ವರ್ಷಕ್ಕೊಮ್ಮೆ ಸಿಗುವ ಅವಕಾಶ!
- ರಮಾಕಾಂತ ಶಾಸ್ತ್ರಿ, ಮೇಲುಕೋಟೆ