ನಿದಿರೆ ಬರದಿರೆ ಏನಂತಿ?
ಹೌದು, ಖಚಿತವಾಗಿಯೂ ನೀವು ಇನ್ಸೋಮ್ನಿಯಾ ರೋಗದಿಂದ ಬಳಲುತ್ತಿದ್ದೀರಿ. ನಿದ್ರಾಭಾವವನ್ನು ಎರಡು ರೀತಿಯಲ್ಲಿ ವಿಂಗಡಿಸಬಹುದು. ಯಾವುದೇ ರೋಗ ಲಕ್ಷಣವಿಲ್ಲದೆ ನಿದ್ರೆಯ ಅಭಾವ ಕಂಡುಬಂದರೆ ಅದು ಪ್ರಾಥಮಿಕ ಹಂತ. ನಾನಾ ರೀತಿಯ ರೋಗ ಲಕ್ಷಣಗಳಿಂದ ಬಳಲುತ್ತಿದ್ದರೆ ಪ್ರೌಢ ಹಂತ.
ನಿದ್ರಾಹೀನತೆ ಕಾಡುವ ಕಾಲಮಾನಕ್ಕನುಗುಣವಾಗಿ ಇದನ್ನು ಮತ್ತೆ ಮೂರು ವಿಧವಾಗಿ ಪರಿಗಣಿಸಲಾಗಿದೆ. ಅಶಾಶ್ವತ ನಿದ್ರಾಭಾವ, ಅಲ್ಪಾವಧಿ ನಿದ್ರಾಭಾವ ಮತ್ತು ತೀವ್ರ ನಿದ್ರಾಭಾವ ಎಂಬುದಾಗಿ ಗುರುತಿಸಲಾಗಿದೆ. ಅಶಾಶ್ವತ ನಿದ್ರಾಭಾವ ಏಳುದಿನಕ್ಕಿಂತ ಕಡಿಮೆ. ಅಲ್ಪಾವಧಿ ನಿದ್ರಾಭಾವ ಬಾಧಿಸುವುದು ಒಂದರಿಂದ ಮೂರು ವಾರಗಳು. ಮೂರು ತಿಂಗಳಿಗೂ ಹೆಚ್ಚಾಗಿ ಕಾಡುವ ನಿದ್ರಾಭಾವವನ್ನು ಕ್ರಾನಿಕ್ ಅಥವಾ ತೀವ್ರ ನಿದ್ರಾಭಾವ ಎಂದು ಕರೆಯಲಾಗುತ್ತದೆ.
ವೈದ್ಯರ ಭೇಟಿ
- ಮೂರ್ನಾಲ್ಕು ವಾರಗಳಿಂದ ನಿದ್ರಾಹೀನತೆಯಿಂದ ಬಳಲುತ್ತಿದ್ದರೆ
- ರಾತ್ರಿ ವೇಳೆಯಲ್ಲಿ ಉಸಿರಾಟದ ತೊಂದರೆ ಹೆಚ್ಚಿದ್ದರೆ
- ದಿನಚರಿಯಲ್ಲಿ ವ್ಯತ್ಯಾಸ ಕಂಡು ಬಂದು ಉದಾಸೀನತೆ ಇದ್ದರೆ ಕಡ್ಡಾಯವಾಗಿ ವೈದ್ಯರನ್ನು ಭೇಟಿ ಮಾಡಿ.
- ಬದಲಾಗುತ್ತಿರುವ ಕೆಲಸದ ಪಾಳಿ
- ಅಳತೆ ಮೀರಿದ ಅಥವ ಕಿರಿಕಿರಿ ಎಂದೆನಿಸುವ ಶಬ್ದ
- ಕೊಠಡಿಯಲ್ಲಿನ ಉಷ್ಣತೆಯ ಹೆಚ್ಚಳ
- ಒತ್ತಡದ ಪರಿಸ್ಥಿತಿ
- ಜೀವನದಲ್ಲಿನ ತಿರುವುಗಳ ಸಂದರ್ಭ. ಅಂದರೆ ಪರೀಕ್ಷಾ ಸಿದ್ಧತೆ, ಪ್ರೀತಿ ಪಾತ್ರರನ್ನು ಕಳೆದುಕೊಂಡ ವೇದನೆ, ನಿರುದ್ಯೋಗ, ವಿಚ್ಛೇದನದ ಆಘಾತದಂಥ ಒತ್ತಡ.
- ಮಾದಕ ದ್ರವ್ಯ, ಆಲ್ಕೋಹಾಲ್ ನಿಲ್ಲಿಸಿದ ಕೆಲ ದಿನ
- ಕೆಲ ಔಷಧಗಳ ಪ್ರಭಾವ
- ಆತಂಕ
- ಖಿನ್ನತೆ
- ಮಾನಸಿಕ, ಭಾವನಾತ್ಮಕ ಹಾಗೂ ಸಾಂದರ್ಭಿಕ ಒತ್ತಡ
- ಸ್ಕಿಜೋಫ್ರೆನಿಯಾ/ಉಸಿರಾಟಕ್ಕೆ ಸಂಬಂಧಿಸಿದ ರೋಗ
- ಸಂದಿ ನೋವುಗಳಂಥವಿಂದ ಬಳಲುತ್ತಿದ್ದರೆ
- ತೀವ್ರ ದೈಹಿಕ ನೋವುಗಳಲ್ಲಿ
- ಹೃದಯಾಘಾತದ ಲಕ್ಷಣಗಳಿದ್ದಾಗ
- ಎದೆ ನೋವು ಅಥವ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ದಾಗ
- ಆಸ್ತಮಾದಂಥ ಕಾಹಿಲೆಗಳಿಂದ ಬಳಲುತ್ತಿದ್ದರೆ
- ಅಜೀರ್ಣ, ವಾಯು ಪ್ರಕೋಪಗಳಲ್ಲಿ
- ಪಾರ್ಶ್ವ ವಾಯುವಿನಂಥ ರೋಗ ಲಕ್ಷಣಗಳಿದ್ದಾಗ
- ಮೆದುಳಿಗೆ ಸಂಬಂದಿಸಿದ ಕಾಯಿಲೆಗಳಿಂದ ಬಳಲುತ್ತಿದ್ದರೆ
- ನಿದ್ರಾ ವೇಳಾಪಟ್ಟಿ ನಿರ್ಮಿಸಿ ಮತ್ತು ಅದನ್ನು ಪಾಲಿಸಿ
- ನಿದ್ದೆ ಬಾರದಿದ್ದಾಗ ಸುಮ್ಮನೆ ಹೊರಳಾಡದೆ ಎದ್ದು ಬಿಡಿ
- ಮಲಗುವ ಕೋಣೆಯನ್ನು ಸೆಕ್ಸ್ ಮತ್ತು ನಿದ್ರೆಗಾಗಿ ಮಾತ್ರ ಬಳಸಿ
- ಓದುವುದು, ಟೀವಿ ನೋಡುವುದು, ಊಟಮಾಡುವುದು ಇತ್ಯಾದಿ ಕಾರ್ಯಗಳನ್ನು ಹಾಸಿಗೆಯಲ್ಲಿ ಕುಳಿತೇ ಮಾಡುವುದು ಬೇಡ.
- ನಿದ್ರೆಗೆ ಜಾರುವ ಮುನ್ನ ಬೆಚ್ಚನೆಯ ಸ್ನಾನ ಮಾಡಿ
- ಉದ್ದ ಲೋಟದಲ್ಲಿ ಹಾಲುಕುಡಿಯುವ ರೂಢಿ ಇದ್ದರೆ ನಿದ್ರೆಗೆ ಹೆಚ್ಚು ಪುಷ್ಟಿ ದೊರೆಯುತ್ತದೆ
- ದಿನದಲ್ಲಿ 20ರಿಂದ 30 ನಿಮಿಷಗಳವರೆಗಾದರು ನಿಯಮಿತ ವ್ಯಾಯಾಮ ರೂಢಿಸಿಕೊಳ್ಳಿ
- ಕಾಫಿ, ಆಲ್ಕೋಹಾಲ್ ಇತ್ಯಾದಿ ಸೇವನೆಗಳನ್ನು ನಿಲ್ಲಿಸಿ ಅಥವ ಕಡಿಮೆಗೊಳಿಸಿ
- ಮಲಗುವ ಮುನ್ನ ಕಂಠಪೂರ್ತಿ ಆಹಾರ ಸೇವಿಸದಿರಿ. ಹಿತಮಿತ ಆಹಾರ ಸೇವನೆ ಇರಲಿ
- ವೈದ್ಯರನ್ನು ಭೇಟಿ ಮಾಡಿ ನಿಮ್ಮ ಈ ಮೇಲಿನ ಪ್ರಯತ್ನಗಳು ಫಲಕಾರಿಯಾಗುತ್ತಿವೆಯೇ ವಿಚಾರಿಸಿ.
- ಒತ್ತಡದಿಂದ ಹೊರಬರಲು ದೀರ್ಘ ಉಸಿರಾಟ ಅಭ್ಯಾಸ
- ಕೌನ್ಸೆಲಿಂಗ್ ಮುಖಾಂತರ ಗೊಂದಲಗಳನ್ನು ಹೊರಹಾಕುವುದು
- ಒಳ್ಳೆಯ, ಶಿಸ್ತಿನ ನಿದ್ರಾಭ್ಯಾಸ ಅನುಸರಿಸುವುದು
- ನಿದ್ದೆಯ ಅವಧಿಯನ್ನು ಕಿರಿದುಗೊಳಿಸುವುದು ಹಾಗೂ ನಿಗದಿತ ವೇಳೆಯಲ್ಲಿ ಮಾತ್ರ ನಿದ್ದೆಯ ಅಭ್ಯಾಸ ರೂಢಿಸಿಕೊಳ್ಳುವುದು. ಅಂದರೆ ಬಸ್ಸು ಮತ್ತಿತರ ವಾಹನಗಳಲ್ಲಿ ಪಯಣಿಸುವಾಗ, ಕೆಲಸ ಮಾಡುವ ವೇಳೆಯಲ್ಲಿ ನಿದ್ರೆ ಮಾಡದಂತೆ ಎಚ್ಚರ ವಹಿಸುವುದು.
- ಪ್ರತಿ ದಿನವೂ ನಿಗದಿತ ವೇಳೆಯಲ್ಲೇ ಮಲಗುವುದು
- ಲೈಟ್ ಥೆರಪಿಯ ಮೂಲಕವೂ ನಿದ್ರಾಹೀನತೆಗೆ ಬ್ರೇಕ್ ಹಾಕಬಹುದು.
- ರಾತ್ರಿ ವೇಳೆ ನಿದ್ರೆ ಬಾರದಿರುವುದು.
- ರಾತ್ರಿ ವೇಳೆ ನಡೆದಾಡುವುದು (ಅರೆ ನಿದ್ರಾಸ್ಥಿತಿಯಲ್ಲಿ ನಡೆಯುವುದು)
- ಹಗಲು ಹೊತ್ತಲ್ಲಿ ಸುಸ್ತಾಗುವುದು ಅಥವಾ ನಿದ್ರೆ ಬರುವುದು.
- ಮಾನಸಿಕ ಖಿನ್ನತೆ ಆವರಿಸುವುದು.
- ತಲೆ ನೋವು, ಸಲ್ಲದ ಒತ್ತಡ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

