ಕೈದಿಗಳಿಗೂ ರಜೆ ಉಂಟು!
ಪೆರೋಲ್ನಲ್ಲಿ ಎರಡು ವಿಧಗಳಿವೆ. ಒಂದು ತುರ್ತು ಪರಿಸ್ಥಿತಿಯಲ್ಲಿ, ಮತ್ತೊಂದು ಸಾಮಾನ್ಯ ದಿನಗಳಲ್ಲಿ ತೆಗೆದುಕೊಳ್ಳುವ ಪೆರೋಲ್ (ರಜೆ). ಪೆರೋಲ್ ಪಡೆಯಲು ಆರು ತಿಂಗಳ ಅಂತರವಿರಬೇಕು. ಆದರೆ, ತುರ್ತು ಕೆಲಸಗಳಿದ್ದಲ್ಲಿ ಇದು ಅನ್ವಯವಾಗುವುದಿಲ್ಲ.
ನ್ಯಾಯಾಧೀಶರಿಗೆ ಪೆರೋಲ್ ನೀಡಲು ಅಧಿಕಾರ ಇರುವುದಿಲ್ಲ. ಕಾರಾಗೃಹಗಳ ಇಲಾಖೆಯ ಮಹಾನಿರೀಕ್ಷಕ(ಎಡಿಜಿಪಿ)ರಿಗೆ ಮಾತ್ರ ಆ ಅಧಿಕಾರ ಇರುತ್ತದೆ. ಹಾಗಾಗಿ ಅವರೇ ಪೆರೋಲ್ ನೀಡುತ್ತಾರೆ. ಒಂದು ವೇಳೆ ಆ ಸ್ಥಾನ ಖಾಲಿ ಇದ್ದಲ್ಲಿ ಇಲಾಖೆಯ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಅದನ್ನು ಗಮನಿಸುತ್ತಾರೆ.
ಅಪರಾಧಿಗೆ ತುರ್ತಾಗಿ ರಜೆ ಬೇಕಿದ್ದಲ್ಲಿ 2 ರಿಂದ 15 ದಿನಗಳವರೆಗೆ ನೀಡಬಹುದು. ಸಾಮಾನ್ಯ ಪೆರೋಲ್ನ್ನು 30 ದಿನಗಳ ಕಾಲ ನೀಡಲಾಗುತ್ತದೆ. ಅಗತ್ಯಬಿದ್ದಲ್ಲಿ ಅದನ್ನು 60 ದಿನಗಳಿಗೂ ಹೆಚ್ಚಿಸಬಹುದು. ಮತ್ತೆ ಅದನ್ನು ಮುಂದುವರೆಸಲು ಆಗುವುದಿಲ್ಲ.
ಆದರೆ, ಅಪರಾಧಿ ಸಂಬಂಧಿ ಮೃತಪಟ್ಟಾಗ, ಮನೆಯಲ್ಲಿ ಶುಭ ಸಮಾರಂಭಗಳು ನಡೆದಾಗ, ಆತ/ಆಕೆಯ ಉಪಸ್ಥಿತಿ ಅಗತ್ಯ ಬಿದ್ದಾಗ ಅದನ್ನು 90 ದಿನಗಳಿಗೂ ಹೆಚ್ಚಿಸಬಹುದು.
ಜಾಮೀನು ಪಡೆದ ಆರೋಪಿ/ಅಪರಾಧಿ ನ್ಯಾಯಾಲಯದ ಆದೇಶದ ಮೇರೆಗೆ ನಿಗದಿಪಡಿಸಿದ ದಿನದಂದು ನ್ಯಾಯಾಲಯಕ್ಕೆ ಹಾಜರಾಗಿ ಸಹಿ ಹಾಕಬೇಕು. ಆದರೆ, ಪೆರೋಲ್ ಮೇಲೆ ರಜೆಗೆ ಬಂದವರು ನ್ಯಾಯಾಲಯಕ್ಕೆ ಹಾಜರಾಗಬೇಕಿಲ್ಲ. ಕಾರಾಗೃಹಗಳ ಇಲಾಖೆಯ ಅಧಿಕಾರಿಗಳ ಮುಂದೆಯೂ ಹಾಜರಾಗಬೇಕಾಗಿಲ್ಲ. ನಿಗದಿಪಡಿಸಿದ ದಿನದಂದು ಜೈಲಿಗೆ ಹಿಂತಿರುಗಬೇಕು.
ಒಂದು ವೇಳೆ ಜೈಲಿಗೆ ಹಿಂತಿರುಗದೆ ಪರಾರಿಯಾದಲ್ಲಿ ಸಂಬಂಧಪಟ್ಟ ಜೈಲು ವ್ಯಾಪ್ತಿಯ ಪೊಲೀಸ್ ಠಾಣೆ ಸಿಬ್ಬಂದಿ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸುತ್ತಾರೆ.
- ಶಾಂತ ತಮ್ಮಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

