ಪೆರೋಲ್ ಮೇಲೆ ಹೊರ ಬರಬಹುದು
ಜೈಲಿಗೆ ಹೋದ ಕೈದಿ/ಅಪರಾಧಿ ವಿವಿಧ ಪ್ರಮುಖ ಕಾರಣಗಳಿಂದ, ಶಿಕ್ಷೆ ಮುಗಿಯುವ ಮುನ್ನ ನ್ಯಾಯಾಲಯದ ಆದೇಶದ ಮೇರೆಗೆ ರಜೆ ಮೇಲೆ ಜೈಲಿನಿಂದ ಹೊರಬರುವುದನ್ನು ಪೆರೋಲ್ ಎನ್ನುತ್ತಾರೆ.
ಈ ಪೆರೋಲ್ ಎಂಬುದು ಎಲ್ಲಾ ಕೈದಿಗಳಿಗೂ ಅನ್ವಯಿಸುವುದಿಲ್ಲ. ಆರೋಪ ಸಾಬೀತಾಗಿ ಶಿಕ್ಷೆ ಅನುಭವಿಸುತ್ತಿರುವವರಿಗೆ ಮಾತ್ರ ಪೆರೋಲ್ ಮೇಲೆ ಹೊರಬರು ಕಾನೂನು ಅನ್ವಯಿಸುತ್ತದೆ. ವಿಚಾರಣಾಧೀನ ಕೈದಿ ಹೊರಬರಲು ಪೆರೋಲ್ ಅಗತ್ಯವಿಲ್ಲ. ಆತ/ಆಕೆ ಜಾಮೀನಿನ ಮೇಲೆ ಹೊರಬರಬಹುದು.
ಒಂದು ವೇಳೆ ಕೆಳನ್ಯಾಯಾಲಯದಲ್ಲಿ ಆರೋಪ ಸಾಬೀಕಾಗಿ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿದ್ದಲ್ಲಿ ಆತ ಹೈಕೋರ್ಟ್ನ ಮೊರೆ ಹೋಗಬಹುದು. ಕೆಳನ್ಯಾಯಾಲಯ ನೀಡಿರುವ ತೀರ್ಪು ಸರಿ ಇಲ್ಲ. ನಾನು ನಿರ್ದೋಷಿ ಎಂದು ಹೇಳಿಕೊಳ್ಳಬಹುದು.
ಈ ನಡುವೆ ಅಪರಾಧಿ ಜಾಮೀನು ಅಥವಾ ಪೆರೋಲ್ಗೂ ಅರ್ಜಿ ಸಲ್ಲಿಸಬಹುದು. ಆದರೆ, ಹೈಕೋರ್ಟ್ನಿಂದಲೇ ಆರೋಪಿಗೆ ಶಿಕ್ಷೆ ಆಗಿ ಅಪರಾಧಿ ಎಂದು ಸಾಬೀತಾದಲ್ಲಿ ಆತ ಸುಪ್ರೀಂ ಕೋರ್ಟ್ಗೆ ಹೋಗಲು ಅವಕಾಶವಿದೆ.
ಜಾಮೀನು ಬೇಕಿದ್ದಲ್ಲಿ ಮಾತ್ರ ನ್ಯಾಯಾಲಯ ಪ್ರಕರಣವನ್ನು ಪರಿಶೀಲಿಸಿ ಆತನಿಗೆ ಜಾಮೀನು ನೀಡಬಹುದು.
ಒಂದು ವೇಳೆ ಜಾಮೀನು ಸಿಕ್ಕಿದಲ್ಲಿ ಇಷ್ಟೇ ದಿನ ಸಿಗುತ್ತದೆ ಎಂದಿಲ್ಲ. ಅದು ನ್ಯಾಯಾಧೀಶರ ವಿವೇಚನೆಗೆ ಬಿಟ್ಟದ್ದು.
-ಶಾಂತ ತಮ್ಮಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

