ಓಡುತ್ತಿರುವ ಕಮೋಡಗಳೇ

'ಬದುಕಿರುವಾಗಲೇ ನಿತ್ಯ ಸ್ವರ್ಗ ತೋರ್ಸು' ಅಂತ ಭಕ್ತ, ಭಗವಂತಲ್ಲಿ ಡಿಮ್ಯಾಂಡಿಟ್ಟ. ದೇವರು ಕೂಡಲೇ ಆತನಿಗೆ 'ಟಾಯ್ಲೆಟ್' ಅನ್ನು ಸ್ಯಾಂಕ್ಷನ್ ಮಾಡಿದನಂತೆ! ಶೌಚಾಲಯ ಸದ್ಯಕ್ಕೆ 3್ಢ5 ಅಡಿಯ, ಭೂಲೋಕದ ಸ್ವರ್ಗ.
ಆದರೆ, ಆ ಸ್ವರ್ಗದ ಖದರ್ ಈಗ ಬದಲಾಗಿದೆ. ಕುಂತಲ್ಲಿ ಕೂರಲ್ಲ. ನಿಂತಲ್ಲಿ ನಿಲ್ಲಲ್ಲ. ನೀವೆಷ್ಟೇ ತಿಣುಕಿ, ಗ್ರಿಪ್ ಹಿಡಿದು ಕೂತರೂ ಅದರ ವೇಗ ನಿಮ್ಮ 'ಮಲವಿಸರ್ಜನೆ' ಸ್ಪೀಡಿಗಿಂತ ಹೆಚ್ಚು. ಹಿತ್ತಲಕಡೆಯಲ್ಲಿದ್ದ ಟಾಯ್ಲೆಟ್ ಈಗ ಕರೆದಲ್ಲಿಗೆ ಬರುತ್ತೆ. ಬೇಕಾದ ಕಡೆಗೆ ನುಗ್ಗುತ್ತೆ!
ಇಂಗ್ಲೆಂಡಿನ ಲಿಂಕನ್ಶೈರ್ನಲ್ಲೊಬ್ಬ ನಲ್ಲಿ ರಿಪೇರಿ ಮಾಡುವವ 'ಜಗತ್ತಿನ ವೇಗದ ಟಾಯ್ಲೆಟ್' ನಿರ್ಮಿಸಿ, ಸ್ವರ್ಗದ ಸುಖವನ್ನು ಇನ್ನೂ ನಾಲ್ಕು ಗ್ರಾಂ. ಹೆಚ್ಚಿಸಿದ್ದಾನೆ. ಇಲ್ಲಿ ಕಾಲುಬಿಟ್ಟುಕೊಂಡು, ಆರಾಮಾಗಿ ಕೂತು ನಿಮ್ಮ 'ಸಂಕಟ'ವನ್ನು ಹೊರಹಾಕಬಹುದು. ಆದರೆ, ಮನೆ ಟಾಯ್ಲೆಟಿನಲ್ಲಿನ ಹಾಗೆ ನಿದ್ದೆ ಮಾಡುವ ಹಾಗಿಲ್ಲ. ಏಕೆಂದರೆ, ಇಲ್ಲಿದನ್ನು ನೀವೇ ಡ್ರೈವ್ ಮಾಡಬೇಕು.
ಈ ವೇಗದ ಟಾಯ್ಲೆಟಿಗೆ 140 ಸಿಸಿ ಎಂಜಿನ್ ಇದೆ. ನಾಲ್ಕು ಗೇರ್ ಇದೆ. ಬೈಕಿನ ಸೀಟಿಗಿಂತ ಸ್ವೀಟಾಗಿ ಇಲ್ಲಿ ಕಮೋಡನ್ನು ರೆಡಿಮಾಡಲಾಗಿದೆ. ಬ್ರೇಕ್ ಹಿಡಿದ ಹಾಗೆ ಕ್ಲಚ್ ಅಮುಕಿದರೆ, ಫ್ಲಶ್ ಆಗುತ್ತೆ. ಪೆಟ್ರೋಲ್ ಚಾಲಿತ ಟಾಯ್ಲೆಟ್ ಇದು. ಲೀಟರ್ ಪೆಟ್ರೋಲ್ಗೆ 33 ಕಿಲೋಮೀಟರ್ ಮೈಲೇಜ್. ಗಂಟೆಗೆ ವೇಗ 88.51 ಕಿಲೋಮೀಟರ್. ಕೊಳಾಯಿಗಾರ ಕ್ರಿಸ್ ಫರ್ಝ್ ಬೆಳ್ಳಂಬೆಳಗ್ಗೆ ಹತ್ತು ಕಿ.ಮೀ. ಸಾಗಿ, ನಿತ್ಯಕರ್ಮ ಮುಗಿಸುತ್ತಾನಂತೆ.
ಭಾರತದಲ್ಲಿ ಟಾಯ್ಲೆಟ್ಗಿಂತ ಹೆಚ್ಚಾಗಿ ಬೈಕುಗಳಿವೆ. ಪ್ರತೀ ಬೈಕನ್ನು ಹೀಗೆ ಟಾಯ್ಲೆಟ್ ಆಗಿ ಪರಿವರ್ತಿಸಿಕೊಂಡರೂ 'ಮಲಕ್ರಾಂತಿ' ಆದೀತು!
-ಮಿಲೀ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


