ಹ್ಯಾಂಡ್ಲರ್ ಕೆಲಸವೇನು?
ಪ್ರತಿ ಶ್ವಾನಕ್ಕೆ ತರಬೇತಿ ನೀಡಿದ ನಂತರ ಹ್ಯಾಂಡ್ಲರ್ಗಳಿಗೆ ಒಪ್ಪಿಸಲಾಗುತ್ತದೆ. ಶ್ವಾನಕ್ಕೆ ಇಬ್ಬರು ಮುಖ್ಯಸ್ಥರಿರುತ್ತಾರೆ. ಅವರು ಹ್ಯಾಂಡ್ಲರ್ ಹಾಗೂ ಸಹಾಯಕ ಹ್ಯಾಂಡ್ಲರ್. ಒಬ್ಬ ಹ್ಯಾಂಡ್ಲರ್ಗೆ ಆರೋಗ್ಯ ತಪ್ಪಿದಲ್ಲಿ ಸಹಾಯಕ ಹ್ಯಾಂಡ್ಲರ್ ಶ್ವಾನದ ಆರೋಗ್ಯದ ಬಗ್ಗೆ ಗಮನಹರಿಸಬೇಕಾದುದು ಅವರ ಕರ್ತವ್ಯ.
ಶ್ವಾನಗಳ ಆರೋಗ್ಯ ಹಾಗೂ ಅವುಗಳ ಕಾರ್ಯಕ್ಷಮತೆ ಬಗ್ಗೆ ಹಿರಿಯ ಅಧಿಕಾರಿ(ಸೀನಿಯರ್ ಡಾಗ್ ಮಾಸ್ಟರ್ ಹಾಗೂ ಚೀಫ್ ಡಾಗ್ ಮಾಸ್ಟರ್)ಗಳಿಗೆ ಮಾಹಿತಿ ನೀಡಬೇಕು. ಇದು ಪ್ರತಿ ತಿಂಗಳ ಕೊನೆಯಲ್ಲಿ ಮಾಡುವ ಕೆಲಸ.
ತಿಂಗಳಿಗೊಮ್ಮೆ ತಪಾಸಣೆ ಮಾಡಿಸಬೇಕು. ಶ್ವಾನಗಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಅಲ್ಲಿನ ವೈದ್ಯರಿಂದ ಸೂಕ್ತ ಚಿಕಿತ್ಸೆ ಲಭ್ಯವಾಗದಿದ್ದಾಗ ಹ್ಯಾಂಡ್ಲರ್ಗಳೇ ತಮ್ಮ ಕೈಯಿಂದ ಹಣ ಹಾಕಿ ಅವುಗಳಿಗೆ ಚಿಕಿತ್ಸೆ ಕೊಡಿಸಬೇಕು. ಹ್ಯಾಂಡ್ಲರ್ ಪ್ರತಿ ಶ್ವಾನದ ಡೈರಿ ಹಾಗೂ ಹಿಸ್ಟ್ರಿ ಶೀಟ್ನ್ನು ಕಾಪಾಡಬೇಕು.
ಡೈರಿಯಲ್ಲಿ ಶ್ವಾನದ ಪ್ರತಿ ದಿನದ ಕೆಲಸವೇನು, ಆ ದಿನ ಎಲ್ಲಿಗೆ ಹೋಗಿತ್ತು, ವಾಪಸ್ ಬಂದದ್ದು ಯಾವಾಗ, ಅದರ ಆರೋಗ್ಯ, ತಿಂಡಿ, ವಿಶ್ರಾಂತಿ ಪಡೆದದ್ದು ಸೇರಿದಂತೆ ಇತರೆ ವಿಷಯಗಳನ್ನು ಒಳಗೊಂಡಿರಬೇಕು.
ಹಿಸ್ಟರಿ ಶೀಟ್ನಲ್ಲಿ ಹೆಸರು, ಹುಟ್ಟಿದ ದಿನ, ಬಣ್ಣ, ಗಂಡು ಅಥವಾ ಹೆಣ್ಣು, ಅದರ ತೂಕ, ಎತ್ತರ, ಜಾತಿ, ಶ್ವಾನವನ್ನು ಗುರುತು ಹಚ್ಚಲು ಅದರಲ್ಲಿ ಏನಾದರೂ ವಿಶೇಷ ಗುಣ ಇದ್ದಲ್ಲಿ ಅದನ್ನೂ ನಮೂದಿಸಬೇಕು.
ಅದನ್ನು ಎಲ್ಲಿಂದ ತಂದದ್ದು, ಅದರ ಪೋಷಕರು, ಮಾಲೀಕರು ಹಾಗೂ ಒಂದು ಫೋಟೊ, ಶ್ವಾನಕ್ಕೆ ಯಾವುದೇ ರೀತಿಯ ವಿಶೇಷ ತರಬೇತಿ ಕೊಡಿಸಿದ್ದಲ್ಲಿ ಆ ಬಗ್ಗೆ ಮಾಹಿತಿ ಇರಬೇಕು.
ಅವುಗಳ ಕಾರ್ಯಕ್ಷಮತೆ ಆಧರಿಸಿ 10 ವರ್ಷಕ್ಕೆ ನಿವೃತ್ತಿ ಕೊಡಲಾಗುತ್ತದೆ. ಒಂದು ವೇಳೆ ಅವುಗಳ ಆರೋಗ್ಯ ಹಾಳಾದಲ್ಲಿ ಅದಕ್ಕಿಂತ ಮುಂಚಿತವಾಗಿಯೂ ನಿವೃತ್ತಿ ಕೊಡಿಸಬಹುದು.
-ಶಾಂತ ತಮ್ಮಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

