ನಾವಿಕ ವಿಶ್ವ ಕನ್ನಡ ಸಮಾವೇಶ
ಅಮೆರಿಕದಲ್ಲಿ ನಡೆಯುತ್ತಿರುವ ನಾವಿಕ ಸಂಸ್ಥೆಯ ಎರಡನೇ ವಿಶ್ವ ಕನ್ನಡ ಮಹಾ ಸಮಾವೇಶದ ತಯಾರಿ ಭರದಿಂದ ಸಾಗಿದೆ. ಈ ವರ್ಷದ ಆಗಸ್ಟ್ ಅಂತ್ಯದಲ್ಲಿ ಬೋಸ್ಟನ್ನಲ್ಲಿ ನಡೆಯುವ ಈ ಸಮಾವೇಶದ ಸಾರಥ್ಯವನ್ನು ಡಾ. ಶರಣಬಸವ ರಾಜೂರ ವಹಿಸಿದ್ದಾರೆ. ಅವರ ಸಹಾಯಕ್ಕೆ ಕೃಪಾ ರಾಜೂರ ಮತ್ತು ಇತರ ಹಲವಾರು ಬೋಸ್ಟನ್ ಕನ್ನಡಿಗರು ಕೈಜೋಡಿಸಿದ್ದಾರೆ.
ಸಮಾವೇಶದ ಸಲುವಾಗಿ ಕರ್ನಾಟಕದಿಂದ ರಾಜಲಕ್ಷ್ಮಿ ಕೃಷ್ಣಮೂರ್ತಿಯವರು ಸಹಯೋಗ ನೀಡಲಿದ್ದು. ಎಲ್ಲ ತಯಾರಿಗಳ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ.
ಕಳೆದ ಆಗಸ್ಟ್ನಲ್ಲಿ ಬೋಸ್ಟನ್ನಲ್ಲಿಯ ಹಿಂದು ಮಂದಿರದಲ್ಲಿ ಯಶವಂತ ಸರದೇಶಪಾಂಡೆಯವರ 'ರಾಶಿಚಕ್ರ' ಏಕವ್ಯಕ್ತಿ ಹಾಸ್ಯ ಪ್ರದರ್ಶನದಿಂದ ಆರಂಭವಾದ ಸಮಾವೇಶದ ಕೆಲಸ ಪ್ರತಿ ತಿಂಗಳು ಒಂದೊಂದು ಕಾರ್ಯಕ್ರಮದೊಂದಿಗೆ ಅಮೆರಿಕದ ಕನ್ನಡಿಗರನ್ನು ತಲುಪುತ್ತಿದೆ. ಇತ್ತೀಚೆಗೆ ನಾವಿಕ ಸಂಸ್ಥೆಯ ಅಧ್ಯಕ್ಷರಾದ ಡಾ. ಕೇಶವ ಬಾಬು, ಸಮಾವೇಶದ ಸಾರಥಿ ಡಾ. ರಾಜುರ್ ಮತ್ತು ಸ್ಥಳೀಯ ಕೃಷ್ಣಮೂರ್ತಿ ದಂಪತಿಗಳು ಕರ್ನಾಟಕದ ಹಲವಾರು ಗಣ್ಯರು, ಕಲಾವಿದರನ್ನು ಮತ್ತು ಸೆಲೆಬ್ರಿಟಿಗಳನ್ನು ಆಹ್ವಾನಿಸಿದ್ದಾರೆ. ಸಮಾವೇಶಕ್ಕೆ 3000ಕ್ಕೂ ಹೆಚ್ಚು ಕನ್ನಡ ಬಾಂಧವರು ಸೇರುವ ಸಾಧ್ಯತೆಗಳಿವೆ. ನೋಂದಣಿ ಆರಂಭವಾಗಿದೆ.
ಈ ತಿಂಗಳ ಕಾರ್ಯಕ್ರಮದಲ್ಲಿ ಕನ್ನಡತಿ ಡಾ. ಸುಧಾಮೂರ್ತಿಯವರು ಭಾಗವಹಿಸಿದ್ದಲ್ಲದೆ ಪ್ರಖ್ಯಾತ ಉದ್ಯಮಿ ದೇಶಪಾಂಡೆ ಸಹ ಹಾಜರಿದ್ದರು. ಎರಡನೇ ವಿಶ್ವ ಕನ್ನಡ ಮಹಾಸಮಾವೇಶ ಆಯೋಜನೆಯ ರೂಪುರೇಷೆಗಳನ್ನು ಚರ್ಚಿಸಿದರು. ಬಂದಿರುವ ಕನ್ನಡಿಗರಿಗೆ ಯಾವುದೇ ರೀತಿಯ ಅನಾನುಕೂಲತೆಗಳಾಗದಿರಲಿ ಎಂಬ ಸದಾಶಯದೊಂದಿಗೆ ಮುಕ್ತಾಯಗೊಂಡ ಕಾರ್ಯಕ್ರಮದಲ್ಲಿ ನ್ಯೂ ಇಂಗ್ಲೆಂಡ್ ಕನ್ನಡ ಕೂಟದ 200ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

