ಆಪತ್ತಿಗೆ ಅಂಜದ ಎದೆಗಾರ!
ನರೇಂದ್ರನಿಗೆ ಆಗ ಹದಿಮೂರು ವರ್ಷ. ಅಂಗಸಾಧನೆಯಲ್ಲಿ ತೊಡಗಿಸಿಕೊಂಡಿದ್ದ ಅವನ ಉತ್ಸಾಹ, ಶ್ರದ್ಧೆಗಳನ್ನುಕಂಡು ಮಾಲೀಕನಾದ ನವಗೋಪಾಲ ಮಿತ್ರನು ವ್ಯಾಯಾಮಶಾಲೆಯ ಪಾರುಪತ್ಯವನ್ನು ನರೇಂದ್ರನ ಕೈಗೆ ಕೊಟ್ಟು ಕೆಲಸ ಮೇಲೆ ಹೋಗಿದ್ದ. ಒಂದು ದಿನ ವ್ಯಾಯಾಮಶಾಲೆಯ ಹುಡುಗರೆಲ್ಲ ಸೇರಿ ಶಾಲೆಯ ಎದುರಿನಲ್ಲಿ ಉಯ್ಯಾಲೆ ವ್ಯವಸ್ಥೆ ಮಾಡುವುದಕ್ಕಾಗಿ ಭಾರವಾದ ತೊಲೆಯನ್ನು ಹಗ್ಗ-ರಾಟೆಗಳ ಸಹಾಯದಿಂದ ಎತ್ತುತ್ತಿದ್ದರು. ಅದರಲ್ಲಿ ಒಬ್ಬ ಬ್ರಿಟಿಷ್ ನಾವಿಕನೂ ಕೈಜೋಡಿಸಿದ್ದ. ಭಾರವಾದ ತೊಲೆಯನ್ನು ಎತ್ತುವಾಗ ಒಂದು ಹಗ್ಗ ತುಂಡಾಗಿ ತೊಲೆ ಬ್ರಿಟಿಷ್ ನಾವಿಕನ ತಲೆಗೆ ಬಡಿದು ಗಾಯವಾಯಿತು. ಇದನ್ನು ಕಂಡು ಉಳಿದ ಹುಡುಗರೆಲ್ಲ ಹೆದರಿ ಓಡಿಹೋದರು. ಆದರೆ ನರೇಂದ್ರ ತಡಮಾಡದೇ ತನ್ನ ಧೋತಿಯನ್ನೇ ಹರಿದು ನಾವಿಕನ ಗಾಯಕ್ಕೆ ಕಟ್ಟಿದ. ಬಳಿಕ ಮುಖದ ಮೇಲೆ ನೀರನ್ನು ಸಿಂಪಡಿಸಿ ಉಪಚರಿಸಿದ. ಹತ್ತಿರದಲ್ಲೇ ಇದ್ದ ಕೊಠಡಿಗೆ ಕರೆದೊಯ್ದು ವಾರ ಕಾಲ ಶುಶ್ರೂಷೆ ಮಾಡಿದ. ನಂತರ ಎಲ್ಲರಿಂದಲೂ ವಂತಿಗೆ ವಸೂಲು ಮಾಡಿ ಒಂದಷ್ಟು ಹಣವನ್ನು ಸೇರಿಸಿ ನಾವಿಕನಿಗೆ ಕೊಟ್ಟು ಕಳುಹಿಸಿಕೊಟ್ಟ.
ಎಂತಹ ಕಷ್ಟ ಒದಗಿಬಂದರೂ ಎದೆಗುಂದದೆ, ಪಲಾಯನ ಮಾಡದೆ ಧೈರ್ಯದಿಂದ ಸನ್ನಿವೇಶವನ್ನು ಎದುರಿಸಿ, ನಿಭಾಯಿಸುವ ಕಲೆಯನ್ನು ನರೇಂದ್ರ ಬಾಲ್ಯದಲ್ಲೇ ಕರಗತ ಮಾಡಿಕೊಂಡಿದ್ದ.
-ಆನಂದ ಎಸ್.ಎನ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

