ಬೈಟುಕಾಫಿ

ಸಣ್‌ಕತೆ

Published On :

ಬಾಲ್ ಶೇಮ್‌ನ ಶಿಷ್ಯರು ಒಮ್ಮೆ ತಮ್ಮ ಗುರುಗಳನ್ನು ಕೇಳಿದರು, 'ಗುರುಗಳೇ, ನಾವು ದೇವರ ಸೇವೆಯನ್ನು ಹೇಗೆ ಮಾಡಬೇಕೆಂದು ತಿಳಿಸಿಕೊಡಿ.'
ಬಾಲ್ ಶೇಮ್‌ರು ಹೇಳಿದರು, 'ನನಗೇನು ಗೊತ್ತು?' ಅನಂತರ ಅವರು ತಮ್ಮ ಶಿಷ್ಯರಿಗೆ ಹೀಗೊಂದು ಕತೆಯನ್ನು ಹೇಳಿದರು.
ಒಬ್ಬ ಅರಸನಿಗೆ ಇಬ್ಬರು ಗೆಳೆಯರಿದ್ದರು. ಅವರಿಬ್ಬರೂ ಒಮ್ಮೆ ಅಪರಾಧಿಗಳೆಂದು ಸಾಬೀತಾಗಿ ಮರಣದಂಡನೆಯ ಶಿಕ್ಷೆಗೆ ಒಳಗಾದರು. ಅರಸನಿಗೆ ಅವರ ಮೇಲೆ ಪ್ರೀತಿ ಇತ್ತಾದರೂ ಅವರ ಶಿಕ್ಷೆಯನ್ನು ರದ್ದುಗೊಳಿಸಿ ಅವರನ್ನು ಹೋಗಗೊಟ್ಟರೆ ಜನರಿಗೆ ಅದೊಂದು ಕೆಟ್ಟ ಉದಾಹರಣೆಯಾಗುವುದೆಂಬ ಹೆದರಿಕೆಯೂ ಇತ್ತು. ಅದಕ್ಕೋಸ್ಕರ ಅವನು ಹೀಗೆಂದು ತೀರ್ಪು ನೀಡಿದನು: 'ಒಂದು ಆಳವಾದ ಕಂದರಕ್ಕೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಅಡ್ಡಲಾಗಿ ಒಂದು ಹಗ್ಗವನ್ನು ಕಟ್ಟಲಾಗುವುದು ಮತ್ತು ಅಪರಾಧಿಗಳು ಒಬ್ಬೊಬ್ಬರಾಗಿ ಕಂದರದ ಈ ಕಡೆಯಿಂದ ಆ ಕಡೆಗೆ ಹಗ್ಗದ ಮೇಲೆ ಹೋಗಬೇಕು. ಅವರು ಸುರಕ್ಷಿತವಾಗಿ ತಲುಪಿದರೆ ಅವರಿಗೆ ಸ್ವಾತಂತ್ರ್ಯ. ಇಲ್ಲವಾದರೆ ಕಂದರಕ್ಕೆ ಬಿದ್ದು ಮೃತ್ಯು'
ಅವರಲ್ಲೊಬ್ಬ ಹಗ್ಗದ ಮೇಲೆ ನಡೆದು ಸುರಕ್ಷಿತವಾಗಿ ಆ ಕಡೆ ಸೇರಿದ. ಆಗ ಈ ಕಡೆ ನಿಂತಿದ್ದವನು ಗಟ್ಟಿಯಾದ ಸ್ವರದಲ್ಲಿ ಅವನನ್ನು ಕೇಳಿದ, 'ಸ್ನೇಹಿತನೇ, ನೀನು ಆ ಕಡೆ ಹೇಗೆ ತಲುಪಿದೆ ಎನ್ನುವುದನ್ನು ನನಗೆ ದಯವಿಟ್ಟು ಹೇಳು.'
ಅದಕ್ಕೆ ಆ ಕಡೆಯವನು ಗಟ್ಟಿಯಾಗಿ ಉತ್ತರಿಸಿದ- 'ನನಗೇನು ಗೊತ್ತು? ನಾನು ಮಾಡಿದ್ದು ಇಷ್ಟೆ: ನಾನು ಒಂದು ಪಕ್ಕಕ್ಕೆ ವಾಲುತ್ತಿದ್ದೇನೆ ಎಂದು ಅರಿವಿಗೆ ಬಂದಾಗ ಇನ್ನೊಂದು ಪಕ್ಕಕ್ಕೆ ವಾಲಿದೆ.'
ನೀತಿ: ಸತ್ಯ ಇರುವುದು ನಾವು ಮಾಡುವ ಕ್ರಿಯೆಯಲ್ಲಿ; ಹೇಳುವ ಮಾತುಗಳಲ್ಲಿ ಅಲ್ಲ.

ನಂದಿನಿ ಡಿ. ಕಾಮತ್
ಮೂಲ: ಅಂತೋನಿ ಡಿಮೆಲ್ಲೊ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.