ಪ್ರವಾಹಕ್ಕೊಂದು ಅಣೆಕಟ್ಟು

ಹಳ್ಳಿಗಳಲ್ಲಿ, ಸಣ್ಣ ಪಟ್ಟಣಗಳಲ್ಲಿ ಇಂದಿಗೂ ಜಾತ್ರೆ ಮೊದಲಾದ ಉತ್ಸವಗಳು ತರುಣ- ತರುಣಿಯರು ಭೇಟಿಯಾಗಿ ಪರಿಚಯ ಮಾಡಿಕೊಳ್ಳಲು, ಪರಿಚಯವನ್ನು ಪ್ರಣಯದತ್ತ ಮುಂದುವರಿಸಲು ಸೂಕ್ತವಾದ ಸಂದರ್ಭಗಳು. ಆಗತಾನೇ ಪರಿಚಯವಾದ ಗಂಡು- ಹೆಣ್ಣುಗಳು ಇನ್ನೂ ಒಂದು ಹೆಜ್ಜೆ ಮುಂದೊತ್ತಲು ಊರಿನ ತೇರಿನ ದಿನಕ್ಕಾಗಿ ಕಾಯುತ್ತಿರುತ್ತಾರೆ. ಹೀಗಾಗಿಯೇ ಆ ದಿನ ಹೆಣ್ಣು ಹೆತ್ತವರೂ ತಮ್ಮ ಮಕ್ಕಳನ್ನು ಹದ್ದುಗಣ್ಣಿನಿಂದ ಕಾಯುತ್ತಿರುತ್ತಾರೆ! ಅಂಥ ಒಂದು ಸಂದರ್ಭದಲ್ಲಿ ಎದುರಾದ ನಲ್ಲ- ನಲ್ಲೆಯರ ಪಾಡು ಈ ರೀತಿ ಇದೆ.
ಸ್ಮರರಸನದೀಪೂರೇಣೋಢಾಃ ಪುನರ್ಗುರುಸೇತುಭಿರ್
ಯದಪಿ ವಿಧೃತಾಸ್ತಿಷ್ಠಾನ್ತ್ಯಾರಾದ ಪೂರ್ಣಮನೋರಥಾಃ
ತದಪಿ ಲಿಖಿತಪ್ರಖೈರಂಗೈಃ ಪರಸ್ಪರಮುನ್ಮುಖಾಃ
ನಯನನಲಿನೀನಾಲಾನೀತಂ ಪಿಬಂತಿ ರಸಂ ಪ್ರಿಯಾಃ
ತರುಣ- ತರುಣಿಯರು ಇದ್ದಕ್ಕಿದ್ದಂತೆ ಮುಖಾಮುಖಿಯಾಗಿದ್ದಾರೆ. ಪರಸ್ಪರರನ್ನು ನೋಡುತ್ತಲೇ ಅವರ ದೇಹದಲ್ಲಿ ಕಾಮಭಾವದ ಅಲೆಗಳು ಉಕ್ಕೇರಿ, ಪ್ರವಾಹ ತುಂಬಿದ ನದಿಯಂತೆ ಭೋರ್ಗರೆಯತೊಡಗಿದವು. ಆ ಪ್ರವಾಹದಲ್ಲಿ ಅವರ ರಾಗಪೀಡಿತ ದೇಹಗಳು ಕೊಚ್ಚಿಹೋಗತೊಡಗಿದವು. ಆದರೇನು ಮಾಡುವುದು? ಅವರಿಬ್ಬರ ಹೆತ್ತವರು ಅಣೆಕಟ್ಟುಗಳಂತೆ ಪಕ್ಕದಲ್ಲೇ ನಿಂತಿದ್ದರು. ಆದ್ದರಿಂದ, ಪ್ರವಾಹದಲ್ಲಿ ಒಂದಾಗಬೇಕೆಂಬುದು ಅವರ ಉದ್ದೇಶವೇ ಆಗಿದ್ದರೂ, ಅಕ್ಕಪಕ್ಕದಲ್ಲೇ ನಿಂತಿದ್ದರೂ ದಂಡೆಯನ್ನು ಮೀರಿ ಹೋಗಲು ಇಬ್ಬರಿಗೂ ಸಾಧ್ಯವಾಗಲಿಲ್ಲ. ಆದರೆ ಕಣ್ಣುಗಳೆಂಬ ಕಮಲದ ದಂಟುಗಳಿದ್ದವಲ್ಲ! ಅವುಗಳ ಮೂಲಕ ಪರಸ್ಪರರ ಮುಖವನ್ನು ಅವಲೋಕಿಸುತ್ತ ಸುರತಾಕಾಂಕ್ಷೆಯನ್ನು ಹೀರುತ್ತ ಸರಸ ಸಂತೃಪ್ತಿಯನ್ನು ಅದರಲ್ಲೇ ಉಂಡರು!
- ಹರಿಹರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


