ಬೈಟುಕಾಫಿ

ಗಂಡುಸ್ತನ ಕ್ಯಾನ್ಸರ್

ಗಂಡುಸ್ತನ ಕ್ಯಾನ್ಸರ್
Published On :

ಬ್ರೆಸ್ಟ್ ಕ್ಯಾನ್ಸರ್ ಎಂದರೆ ನೆನಪಾಗೋದು ಮಹಿಳೆಯರು. ಆದರೆ, ಪುರುಷರಲ್ಲಿಯೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದರೆ ನಂಬುತ್ತೀರಾ?
ಹೌದು. ಇತ್ತೀಚೆಗೆ ಮಹಿಳೆಯರಲ್ಲಿ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್ ಸಮಸ್ಯೆ ಪುರುಷರಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಅದೃಷ್ಟವಶಾತ್ ಈ ಸಂಖ್ಯೆ ಕಡಿಮೆ ಇದೆ. ಭಾರತದಲ್ಲಿ 100 ಪುರುಷರಲ್ಲಿ ಒಬ್ಬರು ಮಾತ್ರ ಬ್ರೆಸ್ಟ್ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಭಾರತದಲ್ಲಿ ಈ ಸಮಸ್ಯೆಗೆ ತುತ್ತಾಗುತ್ತಿರುವ ಪುರುಷರ ಅಂಕಿ-ಅಂಶಗಳು ಲಭ್ಯವಿಲ್ಲ. ಒಟ್ಟಿನಲ್ಲಿ ಶೇ.2ರಷ್ಟು ಪುರುಷರು ಈ ಸಮಸ್ಯೆಯಿಂದ ಬಳಲುತ್ತಾರೆ. ಆದರೆ, ಕಾಶ್ಮೀರದಲ್ಲಿ ಈ ಸರಾಸರಿ ಶೇ.4.6 ರಷ್ಟಿದೆ.

ಇದು ಸಹಜ
ದೇದಲ್ಲಿನ ಎಲ್ಲ ಜೀವಕಣಗಳಂತೆಯೇ ಒಬ್ಬ ವ್ಯಕ್ತಿಯ ಸ್ತನಗಳಲ್ಲಿನ ಜೀವಕಣಗಳಲ್ಲಿಯೂ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು. ಆದರೆ ಪುರುಷರ ಸ್ತನ ನಾಳಗಳಲ್ಲಿ ಜೀವಕೋಶಗಳು ಕಡಿಮೆ ಅಭಿವೃದ್ಧಿ ಹೊಂದಿರುತ್ತವೆ. ಅಲ್ಲದೆ ಇವರಲ್ಲಿ ಮಹಿಳೆಯರಲ್ಲಿರುವುದಕ್ಕಿಂತ ಹಾರ್ಮೋನ್‌ಗಳೂ ಕಡಿಮೆ. ಬ್ರೆಸ್ಟ್ ಕ್ಯಾನ್ಸರ್ ಕೂಡ ಇತರೆ ಕ್ಯಾನ್ಸರ್‌ನಂತೆ ಜೀವಕಣಗಳಲ್ಲಿ ಮೊದಲಿಗೆ ಟ್ಯೂಮರ್ ಕಾಣಿಸಿಕೊಂಡು ನಂತರ ಇತರೆ ಭಾಗಗಳಿಗೂ ಆವರಿಸಿಕೊಂಡು, ಹಬ್ಬುತ್ತದೆ.

ಪುರುಷರಲ್ಲಿ ಏಕೆ ಈ ತೊಂದರೆ?

  • ವಯಸ್ಸಿನ ಕಾರಣಗಳು
  • ಕೌಟುಂಬಿಕ ಹಿನ್ನೆಲೆ
  • ಹೆಚ್ಚಿನ ತಾಪಮಾನ ಇರುವ ಸ್ಟೀಲ್ ಫ್ಯಾಕ್ಟರಿಗಳಂಥ ಕಡೆ ಕೆಲಸ ಮಾಡಿದಲ್ಲಿ, ಗ್ಯಾಸೋಲಿನ್ ಹೊಗೆ ತಾಗಿದಲ್ಲಿ ಈ ತೊಂದರೆ ಕಾಣಿಸಿಕೊಳ್ಳಬಹುದು
  • ಬಿಆರ್‌ಸಿಎ ಪರಿವರ್ತನೆ
  • ಕ್ಲಿನ್ಫೆಲ್ಟರ್ ಸಿಂಡ್ರೋಮ್
  • ಯಕೃತ್ತಿನ ಹಾನಿ ಹಾಗೂ ಅತಿ ಮದ್ಯ ಸೇವನೆ
  • ವೃಷಣಗಳಲ್ಲಿನ ಟ್ಯೂಮರ್ ಚಿಕಿತ್ಸೆಗೆ ಒಳಪಟ್ಟವರು ಸ್ಥೂಲಕಾಯ
  • ಎಸ್ಟ್ರೋಜೆನ್‌ನಂಥ ಕೆಲವು ಔಷಧಗಳನ್ನು ಸೇವಿಸಿದಲ್ಲಿಯೂ ಇಂಥ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಪತ್ತೆ ಹಚ್ಚೋದು ಹೇಗೆ?
ಚಿಕಿತ್ಸೆಗೆ ಕೊರತೆಯಿಲ್ಲ
ಪುರುಷರಿಗೇ ಚಿಕಿತ್ಸೆ
  • 100 ಪುರುಷರಿಗೆ ಒಬ್ಬರಿಗೆ ದೇಶದಲ್ಲಿ  ಸ್ತನ ಕ್ಯಾನ್ಸರ್ ಇದೆ.
  • 60 ವರ್ಷ ದಾಟಿದ ಪುರುಷರು ಚೆಕಪ್ ಮಾಡಿಸಿಕೊಳ್ಳಬೇಕು.
  • 2.0% ಪುರುಷರು ಜಗತ್ತಿನಾದ್ಯಂತ ಸ್ತನ ಕ್ಯಾನ್ಸರ್‌ಗೆ ತುತ್ತಾಗುತ್ತಾರೆ.
- ಡಾ.ಆ್ಯಂಟೋನಿ ಪೈಸ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.