ಬೈಟುಕಾಫಿ

ಗೊರೂರು ಗೃಹ ಮಾರಾಟವಾಗಿದೆ!

ಗೊರೂರು ಗೃಹ ಮಾರಾಟವಾಗಿದೆ!
Published On :

ಗೊರೂರು ರಾಮಸ್ವಾಮಿ ಅಯ್ಯಂಗಾರರದು ಪ್ರಬಂಧಗಳ ಲೋಕದಲ್ಲಿ ವಿಶಿಷ್ಟ ಹೆಜ್ಜೆ. ಹೆಸರಿನೊಂದಿಗೆ ಊರನ್ನೂ ಖ್ಯಾತಿಯ ಎತ್ತರಕ್ಕೆ ಕೊಂಡೊಯ್ದವರು. ಹಳ್ಳಿಯ ಬದುಕನ್ನು ಚಿತ್ರವತ್ತಾಗಿ ನಿರೂಪಿಸಿ, ಅದಕ್ಕೆ ವಿನೋದದ ಲೇಪ ಕೊಟ್ಟು ಬದುಕಿನ ಒಳನೋಟಗಳನ್ನು ಸವಿಸ್ತಾರಗೊಳಿಸಿದವರು ಗೊರೂರರು. ಸಾಹಿತ್ಯದೊಟ್ಟಿಗೆ ಗಾಂಧೀಜಿ ನೇತೃತ್ವದ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ದೇಶಭಕ್ತಿಯನ್ನು ಮೆರೆದ ಅಪೂರ್ವ ಸಾಹಿತಿ ಇವರು.
ಆದರೆ, ಗೊರೂರಿನಲ್ಲಿ ಅಯ್ಯಂಗಾರರು ಹುಟ್ಟಿ ಬೆಳೆದ ಮನೆಯನ್ನು ಸ್ಮಾರಕವಾಗಿಸುವ ಕೆಲಸ ಇಲ್ಲಿಯ ತನಕ ಆಗಿಲ್ಲ. ಈ ಹೋರಾಟ 22 ವರ್ಷಗಳಿಂದ ನಡೆಯುತ್ತಲೇ ಇದೆ. ಆದರೆ, ಮನ್ನಣೆ ಸಿಕ್ಕಿಲ್ಲ. ಹಾಸನದಿಂದ 23 ಕಿ.ಮೀ. ದೂರದಲ್ಲಿರುವ ಗೊರೂರು ಪುಟ್ಟಗ್ರಾಮ. ಹೇಮಾವತಿ ಮತ್ತು ಯಗಚಿ ನದಿಗಳ ಸಂಗಮ ಕ್ಷೇತ್ರ. ಈ ಕಾರಣಕ್ಕಾಗಿಯೇ ಗೊರೂರರನ್ನು 'ಹೇಮಾವತಿ ತೀರದ ಗಾಂಧಿ' ಎಂದು ಕರೆಯುತ್ತಾರೆ.

ಮನೆ ಮಾರಾಟವಾಗಿದೆ!
1982ರಲ್ಲಿ ಗೊರೂರರು ತಾವು ಹುಟ್ಟಿದ ಮನೆಯನ್ನು 18 ಸಾವಿರ ರು.ಗಳಿಗೆ ಕಾರಣಾಂತರಗಳಿಂದ ಎಂಜಿನಿಯರ್ ಶ್ರೀನಿವಾಸ್ ಎಂಬವರಿಗೆ ಮಾರಿದ್ದರು. ಈಗ 'ಮನೆಯನ್ನು ಸ್ಮಾರಕವನ್ನಾಗಿಸಿದರೆ ನನ್ನದೇನೂ ಅಭ್ಯಂತರವಿಲ್ಲ. ಮನೆ ಬಿಟ್ಟು ಕೊಡಲು ಸಿದ್ಧ' ಎನ್ನುತ್ತಾರೆ ಶ್ರೀನಿವಾಸ್. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಎ.ಕೆ. ರಾಮಾನುಜಂ ನಿರ್ದೇಶಕರಾಗಿದ್ದಾಗ ಗೊರೂರರ ಮನೆಯನ್ನು ಸ್ಮಾರಕವನ್ನಾಗಿಸಲು ಸಂಪರ್ಕಿಸಿದ್ದರು. ಆದರೆ, ಪರ್ಯಾಯ ಪರಿಹಾರ ಕೊಡುವಲ್ಲಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ.

ಕಣ್ಣು ತೆರೆಯ ಸರ್ಕಾರ
1991 ಸೆ.28ರಂದು ಗೊರೂರು ಅವರು ಇಹಲೋಕ ತ್ಯಜಿಸಿದ ಸಂದರ್ಭದಲ್ಲಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಕಾಳೇಗೌಡ ನಾಗವಾರ ಈ ಮನೆಯನ್ನು ಸ್ಮಾರಕವನ್ನಾಗಿಸಲು ಯತ್ನಿಸಿದ್ದರು. ಅಲ್ಲದೆ ಸಾಹಿತ್ಯಾಸಕ್ತರು ಮತ್ತು ಗ್ರಾಮಸ್ಥರು ಗೊರೂರಿನಲ್ಲಿ 'ಡಾ. ಗೊರೂರು ಸ್ಮರಣ ಸಮಿತಿ' ರಚಿಸಿ ಈ ಸಂಬಂಧ ನಿರ್ಣಯ ಕೈಗೊಂಡು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಲ್ಲಿಸಿದ್ದರು. ಆದರೂ, ಸರ್ಕಾರ ಕಣ್ಣು, ಕಿವಿ ತೆರೆಯಲೇ ಇಲ್ಲ. 'ರಾಜಕಾರಣಿಗಳ ನೀತಿಗೆ ಏನನ್ನಬೇಕೋ ತಿಳಿಯುತ್ತಿಲ್ಲ' ಎನ್ನುತ್ತಾರೆ ಗೊರೂರು ಜನತೆ.

- ದಯಾಶಂಕರ ಮೈಲಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.