ಕ್ರಿಕೆಟ್ ನ ವಿಸ್ಮಯ ವ್ಯಕ್ತಿ
'ನನ್ನ ಆಟ ನನಗಿರಲಿ ನಿಮ್ಮ ಟೀಕೆ ನಿಮಗಿರಲಿ' ಇದು ಸಚಿನ್ ಅವರ ನಿವೃತ್ತಿ ಬಯಸುತ್ತಿರುವ ಮನಸ್ಸುಗಳಿಗೆ ಅತ್ಯಂತ ಮೃದುವಾಗಿಯೇ ಪ್ರತಿಕ್ರಿಯಿಸಿದ್ದ ಪರಿ. ಸಾಧಕನಿಗೆ ಹಾಗೂ ನಾಯಕತ್ವದ ಗುಣ ಉಳ್ಳವನಿಗೆ ವಿನಯ ಮತ್ತು ಸೌಮ್ಯತೆ ಇದ್ದರೆ ಆತ ಎಷ್ಟು ಸೊಗಸಾಗಿ ಕಾಣುತ್ತಾನೆ ಎಂಬುದಕ್ಕೆ ಸಚಿನ್ ತೆಂಡೂಲ್ಕರ್ರೇ ಸಾಕ್ಷಿ. ಎಳ್ಳಷ್ಟು ಅಹಂಕಾರ ತನ್ನತ್ತ ಸುಳಿಯದಂತೆ ನೋಡಿಕೊಂಡ, ಎಲ್ಲಿಯೂ ಹೆಸರು ಕೆಡಿಸಿಕೊಳ್ಳದ ಅವರ ಕ್ರಿಕೆಟ್ ಪ್ರೀತಿಗೆ ನಮಿಸುವೆ. ನನ್ನೂರಿನ ಹಳ್ಳಿ ಹೈದರಲ್ಲಿ ಹತ್ತರಲ್ಲಿ ಎರಡು ಮಂದಿಗೆ ಇವರ ಹೆಸರನ್ನೇ ಇಟ್ಟಿದ್ದಾರೆ, ಇದು ಸಚಿನ್ ಬಗ್ಗೆ ಇರುವ ಅಭಿಮಾನವೆಷ್ಟೆಂದು ತಿಳಿಯುತ್ತದೆ.
- ಸಂಪತ್ ಬೆಟ್ಟಗೆರೆ, ಮೂಡಿಗೆರೆ
ಅವಿಚ್ಛಿನ್ನ ಈ ಸಚಿನ್ನ
ಭಾರತ ಕಂಡ ಅಪ್ರತಿಮ ಆಟಗಾರ, ಅಂತಾರಾಷ್ಟ್ರೀಯ ಖ್ಯಾತ ಪಟು, ಕ್ರಿಕೆಟ್ ಲೋಕದ ದಿಗ್ಗಜ, ಅಗ್ರಜನಂತೆ ಮಿಂಚಿ ಮಿನುಗಿದ ಅವಿಚ್ಛಿನ್ನ ಈ ಸಚಿನ್ನ! ನಿರ್ಣಯ-ನಿರ್ಧಾರಗಳು ಏನೇ ಇದ್ದರೂ ಎಂದೂ ಮರೆಯದ ಅಜರಾಮರ ಕ್ರಿಕೆಟ್ ಚಿರಂಜೀವಿ ಎಂದರೆ ಅತಿಶಯೋಕ್ತಿ ಆಗಲಾರದು. ಮಾಸ್ಟರ್ ಬ್ಲಾಸ್ಟರ್, ಕ್ರಿಕೆಟ್ ನಕ್ಷತ್ರ, ಕ್ರಿಕೆಟ್ ದೇವರು ಎಂಬಿತ್ಯಾದಿ ಬಿರುದು ಹೊಂದಿದ ಸಚಿನ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಹಲವು ಬೌಲರ್ಗಳಿಗೆ ದುಃಸ್ವಪ್ನವಾಗಿ ಕಾಡಿ, ನಿದ್ದೆಗೆಡಿಸಿದ್ದ ಇವರ ನಿವೃತ್ತಿ ಮಾತ್ರ ಅಪಾರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.
- ಹಿರೇನಲ್ಲೂರು ಶಿವು, ಕಡೂರು, ಚಿಕ್ಕಮಗಳೂರು
ಬೇಸರದ ಸಂಗತಿ
ಸಚಿನ್ ಭಾರತ ದೇಶಕ್ಕೆ ಕ್ರಿಕೆಟ್ನಲ್ಲಿ ಕೀರ್ತಿ ತಂದ ಮಹಾನ್ ಚೇತನ. ಕ್ರಿಕೆಟ್ ಜಗತ್ತಿಗೆ ಇವರ ಕೊಡುಗೆ ಅಪಾರ. ಸಚಿನ್ಗೆ ಸಚಿನ್ ಅವರೆ ಸರಿಸಾಟಿ. ಎಲ್ಲ ದಾಖಲೆಗಳನ್ನು ಮುರಿದ ಧೀರ. ಅವರ ನಿವೃತ್ತಿ ಬೇಸರ ತಂದಿದೆ ಆದರೆ, ಯಾವುದೇ ವೃತ್ತಿಯನ್ನು ಮಾಡುವಾಗ ಕಾಲ ಕ್ರಮೇಣ ನಿವೃತ್ತಿ ಹೊಂದುವುದು ಸಾಮಾನ್ಯ. ವಯಸ್ಸಾದಂತೆ ತಾವಾಗಿಯೇ ನಿವೃತ್ತಿ ನೀಡುತ್ತಿರುವುದು ಒಳಿತು. ಇದರಿಂದ ಕಿರಿಯರಿಗೆ ಅವಕಾಶ ಮಾಡಿಕೊಟ್ಟಂತಾಗಿದೆ. ಇನ್ನು ಮುಂದೆಯೂ ಇವರು ಆಟಗಾರರ ಜೊತೆಯಲ್ಲಿದ್ದುಕೊಂಡು ಮಾರ್ಗದರ್ಶಕರಾಗಿರಲಿ.
- ಸಿ.ಡಿ.ಮಹೇಶ್, ಮೈಸೂರು
'ಜಗುಲಿ'ಯಲ್ಲಿ ಈ ಸಲದ ವಿಷಯ 'ಸಚಿನ್ ನಿವೃತ್ತಿ'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

