ಮಬ್ಬಾಗಿದೆ ಶಾಂತಿನಾಥರ ಮನೆ

ಕನ್ನಡದ ಖ್ಯಾತ ಕಾದಂಬರಿಕಾರ ಡಾ. ಶಾಂತಿನಾಥ ದೇಸಾಯಿ ಹುಟ್ಟಿ, ಬೆಳೆದ ಮನೆ ತೀವ್ರ ದುಃಸ್ಥಿತಿಯಲ್ಲಿದೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಈ ಮನೆಯ ಮುಚ್ಚಿಗೆ ದುರಸ್ತಿಯನ್ನೇ ಕಂಡಿಲ್ಲ. ಅಂದು ಕಟ್ಟಿದ ಸ್ಥಿತಿಯಲ್ಲೇ ಇರುವ ಮನೆಗೆ ಈಗ ಕೇವಲ ಬಣ್ಣ ಬಳಿಯಲಾಗಿದೆಯಷ್ಟೇ.
ದೇಸಾಯಿ ವೃತ್ತಿ ನಿಮಿತ್ತ ಊರು ಬಿಟ್ಟರು. ಆದರೂ ಆಗಾಗ್ಗೆ ಇಲ್ಲಿನ ಮನೆಗೆ ಆಗಮಿಸುತ್ತಿದ್ದರು. ಆರ್ಥಿಕವಾಗಿ ಹಿಂದುಳಿದಿರುವ ದೇಸಾಯಿ ಮನೆತನದವರು ಅದೇ ಹಳೆಯ ಮನೆಯನ್ನು ಮತ್ತೆಮತ್ತೆ ದುರಸ್ತಿಪಡಿಸುತ್ತಾ ಇಲ್ಲಿಯೇ ವಾಸವಿದ್ದಾರೆ.
ಕರ್ನಾಟಕ ವಿವಿಯಲ್ಲಿ ಪ್ರಾಧ್ಯಾಪಕರಾಗಿ, ರೀಡರ್ ಆಗಿ ಸೇವೆ ಸಲ್ಲಿಸಿದ ಶಾಂತಿನಾಥ ದೇಸಾಯಿ ನಂತರ ಕೊಲ್ಲಾಪುರ ವಿವಿಯ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದರು. ನಂತರ ಅದೇ ವಿವಿ ಉಪಕುಲಪತಿಗಳೂ ಆದರು. ಕೆಲವು ವರ್ಷಗಳ ಬಳಿಕ ಕುವೆಂಪು ವಿವಿ ಉಪಕುಲಪತಿಗಳಾಗಿಯೂ ಅಧಿಕಾರ ವಹಿಸಿಕೊಂಡು ಧಾರವಾಡದಲ್ಲೇ ನೆಲೆ ನಿಂತರು. ಅಂದಹಾಗೆ, ಶಾಂತಿನಾಥರು ನಿವೃತ್ತ ಜೀವನವನ್ನು ಕಳೆದಿದ್ದು ಕೊಲ್ಲಾಪುರದಲ್ಲಿ.
ನಾಲ್ಕು ಜನ ಸಹೋದರರ ಪೈಕಿ ಶಾಂತಿನಾಥರು ಮಾತ್ರ ಹೆಚ್ಚಿನ ವಿದ್ಯಾಭ್ಯಾಸ ಕೈಗೊಂಡು ನೌಕರಿ ಸೇರಿದವರು. ಉಳಿದ ಮೂವರು ತವರೂರಾದ ಹಳಿಯಾಳದಲ್ಲೇ ಜೀವನ ಕಂಡುಕೊಂಡರು. ಶಾಂತಿನಾಥ ದೇಸಾಯಿ ಪತ್ನಿ ಸುಮಿತ್ರಾ ದೇಸಾಯಿ ಆರು ತಿಂಗಳ ಹಿಂದಷ್ಟೇ ಇಹಲೋಕ ತ್ಯಜಿಸಿದ್ದಾರೆ. ಇವರಿಗೆ ನಾಲ್ಕು ಪುತ್ರಿಯರು. ಈಗ ಅವರೆಲ್ಲ ವಿದೇಶದಲ್ಲಿದ್ದಾರೆ.
ನೆಲ ಮಬ್ಬಾಗಿದೆ...
ಸಿಮೆಂಟ್ ಹಾಕಿದ ಈ ಮನೆಯಲ್ಲಿ ಅಲ್ಲಲ್ಲಿ ಕಾವಿ ಅಳಿಸಿ, ನೆಲ ಮಬ್ಬಾಗಿದೆ. ಮನೆ ಎದುರೇ ಚರಂಡಿ. ಚಪ್ಪಡಿಗಳೆಲ್ಲ ಮೇಲೆದ್ದು, ಅದರ ಒಳಗಿನ ದೃಶ್ಯಗಳೆಲ್ಲ ಸಲೀಸಾಗಿ ಕಣ್ಣಿಗೆ ಬೀಳುತ್ತವೆ. ಆದರೂ ಸರ್ಕಾರಕ್ಕೆ ಈ ಕವಿಮನೆಗೆ ಕಳೆ ತಂದುಕೊಡುವ ಕಾಳಜಿ ಇಲ್ಲ.
ಶಾಂತಿನಾಥ ದೇಸಾಯಿಯವರು ಸರಳ, ಸಜ್ಜನಿಕೆಯ ವ್ಯಕ್ತಿತ್ವದವರು. ಕನ್ನಡದ ಮೇಲೆ ಅವರಿಗೆ ಅಪಾರ ಆಸಕ್ತಿ ಇತ್ತು. ತವರೂರಾದ ಹಳಿಯಾಳದ ಮೇಲೆ ಅವರಿಗೆ ತೀವ್ರ ಅಕ್ಕರೆ. ತಮ್ಮ ಮಕ್ಕಳನ್ನು ಕರೆದುಕೊಂಡು ಹಳಿಯಾಳದ ಮೂಲ ಮನೆಗೆ ಆಗಾಗ್ಗೆ ಬರುತ್ತಿದ್ದರು. ಈ ಮನೆಯ ಅಭಿವೃದ್ಧಿ ಬಗ್ಗೆ ರಾಜಕೀಯ ನಾಯಕರು ಚಿಂತಿಸಬೇಕು.
- ಸುರೇಶ ದೇಸಾಯಿ
ಶಾಂತಿನಾಥ ದೇಸಾಯಿಯವರ ತಮ್ಮನ ಮಗ
- ವಿಶ್ವಾಮಿತ್ರ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


