ನಿಮಗಾಗಿ ತುಡಿಯುವ ನಾವು
ನಿಮಗಾಗಿ ತುಡಿಯುವ ನಾವು ದೇಶಕ್ಕಾಗಿ ಅದೆಷ್ಟು ದಿನ, ಗಂಟೆಗಳು, ಮೈದಾನದಲ್ಲಿ ಕಳೆದಿರಿ. ಅದೆಷ್ಟು ಗಾಯಗಳಾದವು. ಅದೆಷ್ಟು ಲಕ್ಷ ಬಾಲ್ಗಳನ್ನ ಅದೆಷ್ಟು ಬೌಲರ್ಗಳನ್ನು ಎದುರಿಸಿದ್ದೀರಿ. 24 ವರ್ಷ ತಂಡದ ಒಳಗೆ ಇದ್ದ ಒಬ್ಬ ಕೋಚ್! ಬ್ಯಾಟ್ ಹಿಡಿದ ದಿನದಿಂದ ಬ್ಯಾಟ್ ಕೆಳಗಿಡುವ ಇಲ್ಲಿಯ ತನಕವು ಅದೇ ತಾಳ್ಮೆ ಶಿಸ್ತು, ಅದೇ ವ್ಯಕ್ತಿತ್ವ. ನೀವು ನಿವೃತ್ತಿ ಘೋಷಿಸಿರಬಹುದು. ಆದರೆ, ನಿಮ್ಮ ಈ ಅಭಿಮಾನಿಗಳ ಮನಸ್ಸು ಕೊನೆವರೆಗೂ ನಿಮ್ಮನ್ನು ಮೈದಾನದಲ್ಲಿ ಹುಡುಕುತ್ತಲೇ ಇರುತ್ತವೆ.
- ನಂದನ್.ಹೆಚ್.ಜಿ.ಗೌಡ, ಭದ್ರಾಜಲಾಶಯ
ಅಗಣಿತ ಅಭಿಮಾನಿಗಳಿಗೆ ನಿರಾಶೆ!
ಸಚಿನ್ ಕ್ರೀಸ್ನಲ್ಲಿ ನಿಂತ ನಿಮಿಷಗಳನ್ನು, ಎದುರಿಸಿದ ಚೆಂಡುಗಳನ್ನು, ಭಾರಿಸಿದ ರನ್ನುಗಳನ್ನು ಲೆಕ್ಕಹಾಕಿ ಹೇಳಬಹುದು. ಆದರೆ, ವಿಶ್ವದ ನಾನಾ ಮೂಲೆಯ ಜನರಿಗೂ ಚಿರಪರಿಚಿತರಾಗಿ, ವಿಶ್ವದ ಶ್ರೇಷ್ಠ ಆಟಗಾರರೆಲ್ಲರ ಹೊಗಳಿಕೆಗೆ ಭಾಜನರಾದ ಅವರ ಅಭಿಮಾನಿಗಳಿಗೆ ಲೆಕ್ಕವುಂಟೇ!? ಅಗಣಿತ ಅಭಿಮಾನಿಗಳಿಗೆ ನಿರಾಶೆ ಮೂಡಿಸಿರುವುದಂತೂ ಸತ್ಯ. ಮುಂದಿನ ದಿನಗಳಲ್ಲಿ ಅವರು ಕ್ರಿಕೆಟ್ ಟೀಮಿನ ಕೋಚ್, ಕಾಮೆಂಟರಿ, ಅಕಾಡೆಮಿ ರೂಪದಲ್ಲಿ ಮುಂದುವರಿಯಲಿ. ಅವರಿಗೆ ಶುಭ ವಿದಾಯ.
- ಅಶೋಕ ಬಳ್ಳಾ, ಸೂಳೀಭಾವಿ
ಮುಂಚೆಯೇ ಆಗಬೇಕಿತ್ತು
ಭಾರತೀಯ ಕ್ರಿಕೆಟ್ ರಂಗದ ಧ್ರುವತಾರೆ, ಲಿಟಲ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಂತೂ ನಿವೃತ್ತಿ ಹೊಂದುತ್ತಿದ್ದಾರೆ, ಊಹಿಸಲಾಗದ ದಾಖಲೆಗಳ ಸರದಾರನ ಈ ನಿರ್ಧಾರ, ಹಲವು ವರ್ಷಗಳ ಹಿಂದೆಯೇ ಕೈಗೊಳ್ಳಬೇಕಾಗಿದ್ದು, ಮುಂದೂಡುತ್ತಾ ಅವರು ಮಾಧ್ಯಮಗಳ ಹಾಗೂ ಟೀಕಾಕಾರರ ಬಾಯಿಗೆ ಆಡುಂಬೊಲವಾಗಿದ್ದರು. ಅಪಹಾಸ್ಯಕ್ಕೆ ಕಾರಣೀಭೂತರಾಗಿದ್ದರು. ಅವರು ದಾಖಲೆಗಳಿಗಾಗಿಯೇ ಆಡಿದರೆಂಬ ಅಪಸವ್ಯವಿದ್ದರೂ ತೆಂಡೂಲ್ಕರರ ಸಾಧನೆ ಅಪ್ರತಿಮ, ಅಳಿಸಲಾಗದ್ದು ಕೂಡ. ಆದರೆ, 5 ವರ್ಷಗಳ ಕೆಳಗೆ ಅವರು ರಾಜೀನಾಮೆ ನೀಡಿ ಬೆಳೆಯುವ ಯುವ ಕ್ರಿಕೆಟಿಗರಿಗೆ ಅವಕಾಶ ನೀಡಿದ್ದರೆ ಚೆನ್ನಿತ್ತು. ಏನೇ ಆಗಲಿ, ವಿಕ್ಷಿಪ್ತ ಕಾಲದಲ್ಲಿ ಕ್ಲುಪ್ತ ನಿರ್ಧಾರ ಕೈಗೊಂಡ 'ಮುಂಬಯಿ ಕುಳ್ಳ' ತೆಂಡೂಲ್ಕರ್ಗೆ ಇದೋ ಸಾವಿರ ನಮನಗಳು.
- ಕೆ.ಶ್ರೀನಿವಾಸ ರಾವ್, ಹರಪನಹಳ್ಳಿ.
'ಜಗುಲಿ'ಯಲ್ಲಿ ಈ ಸಲದ ವಿಷಯ 'ಸಚಿನ್ ನಿವೃತ್ತಿ'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

