ಕುವಲಯಾಪೀಡ ಕುಂಭಸ್ಥಳ

ಕಾವ್ಯಗಳಲ್ಲಿ ಬರುವ ಪ್ರೇಮಿಗಳಿಗೆ ಎಲ್ಲೋ ಏನನ್ನೋ ನೋಡಿದಾಗ ಇನ್ನೇನೋ ನೆನಪಾಗುತ್ತದೆ. ನಿಜಕ್ಕೂ ಅವರಿಗೆ ಅದು ನೆನಪಾಗಿತ್ತೋ ಇಲ್ಲವೋ, ಕವಿಗಳಿಗಂತೂ ನೆನಪಾಗುತ್ತದೆ. ತರುಣಿಯರ ತುಂಬಿದ ವಕ್ಷಸಂಪತ್ತನ್ನು ಆನೆಗಳ ಕುಂಭಸ್ಥಳಕ್ಕೆ ಹೋಲಿಸುವುದು ಹಿಂದಿನಿಂದಲೂ ಇದೆ. ಅದ್ಯಾವ ಮಹರಾಯ ಆ ಹೋಲಿಕೆ ಕಂಡನೋ, ಅಂದಿನಿಂದ ಇಂದಿಗೂ ಕವಿಗಳು ಅದನ್ನೇ ಉಪಯೋಗಿಸುತ್ತಿದ್ದಾರೆ. ನಮ್ಮ ಜಯದೇವನೂ ಅದನ್ನು ಬಳಸದೆ ಬಿಟ್ಟಿಲ್ಲ. ಆದರೆ ಈತ ಅದನ್ನು ಒಂದು ವಿಶಿಷ್ಟವಾದ ಸಂದರ್ಭದಲ್ಲಿ ಇಟ್ಟು ತನ್ನ ಜಾಣತನ ಮೆರೆದ.
ಸ ಪ್ರೀತಿಂ ತನುತಾಂ ಹರಿಃ ಕುವಲಯಾಪೀಡೇನ ಸಾರ್ಧಂ ರಣೇ
ರಾಧಾಪೀನಪಯೋಧರಸ್ಮರಣಕೃತ್ಕುಂಭೇನ ಸಂಭೇದವಾನ್
ಯತ್ರ ಸ್ವಿದ್ಯತಿ ಮೀಲತಿ ಕ್ಷಣಮಪಿ ಕ್ಷಿಪ್ರಂ ತದಾಲೋಕನ
ವ್ಯಾಮೋಹೇನ ಜಿತಂ ಜಿತಂ ಜಿತಮಭೂತ್ಕಂಸಸ್ಯ ಕೋಲಾಹಲಃ
ಕೃಷ್ಣ ಬಿಲ್ಲಹಬ್ಬಕ್ಕಾಗಿ ಮಥುರೆಗೆ ಬಂದಿದ್ದಾನೆ. ಆತನನ್ನು ಕೊಲ್ಲಲೆಂದು ಕಂಸ, ಮದಿತ ಆನೆಯಾದ ಕುವಲಯಾಪೀಡವನ್ನು ನಿಯೋಜಿಸಿದ್ದಾನೆ. ಮಹಾದ್ವಾರದಲ್ಲಿ ಆ ಆನೆ ಕೃಷ್ಣನ ಮೇಲೇರಿ ಹೋಗಿದೆ. ಆದರೆ ಕೃಷ್ಣ ಲೀಲಾಜಾಲವಾಗಿ ಅದರ ಮೇಲೆಗರಿ, ಅದನ್ನು ಸದೆಬಡಿಯುತ್ತಿದ್ದಾನೆ. ಆದರೆ ಇದೇ ವೇಳೆಗೆ ಕುವಲಯಾಪೀಡದ ಕುಂಭಸ್ಥಳ(ನೆತ್ತಿ)ವನ್ನು ಕಂಡು, ಅದು ರಾಧೆಯ ಕುಚಕುಂಭವೇ ಇರಬಹುದೆಂಬ ಭ್ರಮೆ ಆತನಿಗಾಗಿದೆ. ಮೈ ಬೆವರಿದೆ. ಇದನ್ನು ಕಂಡು, ಕೃಷ್ಣ ಸೋತನೆಂದು ಕಂಸ ಭ್ರಮಿಸಿದ್ದಾನೆ!
ನಿಜಕ್ಕೂ ಕುಚಸಂಪತ್ತು ಆನೆಗಳ ಕುಂಭಸ್ಥಳದ ಹಾಗಿರುತ್ತಾ? ಮಾವುತರನ್ನು ಕೇಳಿದರೆ ಗೊತ್ತಾಗಬಹುದು.
- ಹರಿಹರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


