ಟಿ ಬೆಟ್ಟದಿಂದ ಕರುನಾಡಿಗೆ

ನವಂಬರ್ ಬಂದಂತೆ ಕನ್ನಡಿಗರಿಗೆ ಮಾತೃ ಭಾಷಾಭಿಮಾನ ಉಕ್ಕುತ್ತದೆ. ಈ ವಿಚಾರದಲ್ಲಿ ಕುಶಾಲನಗರ ಸಮೀಪದ ಬೈಲಕುಪ್ಪೆಯಲ್ಲಿರುವ ಪರಭಾಷಿಗರು ಕನ್ನಡಿಗರಿಗೆ ಆದರ್ಶಪ್ರಾಯವಾಗಿದ್ದಾರೆ.
ಬೈಲಕುಪ್ಪೆ ಶಿಬಿರದ ನಾಗರಿಕರು ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಕ್ಯಾಂಪ್ನ ಪ್ರತಿ ನಾಮಫಲಕದಲ್ಲಿ ಪ್ರಥಮ ಆದ್ಯತೆ ಕನ್ನಡ ಭಾಷೆಗೆ. ಬಹುತೇಕ ಟಿಬೆಟಿಯನ್ ಮಕ್ಕಳು ಕನ್ನಡದಲ್ಲಿ ಓದಲು ಬರೆಯಲು ಶಕ್ತರು. ಕನ್ನಡವನ್ನು ನಿರರ್ಗಳವಾಗಿ ಮಾತನಾಡಬಲ್ಲರು. ಈ ಮಕ್ಕಳು ಕನ್ನಡದಲ್ಲಿ ಹೆಚ್ಚಿನ ಅಂಕ ಪಡೆಯುತ್ತಿರುವುದು ಶ್ಲಾಘನೀಯ ಎನ್ನುತ್ತಾರೆ ಸ್ಥಳೀಯ ಪತ್ರಕರ್ತೆ ವನಿತಾ ಚಂದ್ರಮೋಹನ್. ಟಿಬೆಟಿಯನ್ ಯುವತಿ ತೆನ್ಜಿನ್ ಚೋಡನ್ ಪ್ರಕಾರ ಕನ್ನಡ ಭಾಷೆ ಇಂಪಾಗಿದೆ, ಬಹುಬೇಗ ಕಲಿಯುವಂತಹದ್ದು. ಈಕೆ ಮೈಸೂರಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ. ಶಿಬಿರದಲ್ಲಿರುವ ಕೇಂದ್ರೀಯ ವಿದ್ಯಾಲಯಗಳಲ್ಲಿ ಕನ್ನಡವನ್ನು ಪ್ರಥಮ ಭಾಷೆಯನ್ನಾಗಿ ಮಾಡಲು ಕೇಂದ್ರ ಸರ್ಕಾರಕ್ಕೆ ಮತ್ತು ಕೇಂದ್ರೀಯ ಟಿಬೆಟಿಯನ್ ಆಡಳಿತ ಮಂಡಳಿಗೆ ಕೋರಿಕೊಳ್ಳಲಾಗಿದೆ ಎಂದು ನಿರರ್ಗಳವಾಗಿ ಕನ್ನಡದಲ್ಲಿ ಮಾತನಾಡುವ ಬೈಲಕುಪ್ಪೆ ಶಿಬಿರದ ಸಂಪರ್ಕಾಧಿಕಾರಿ ಗೆಲೆಕ್ ಹೇಳುತ್ತಾರೆ. ಅವರ ಪ್ರಕಾರ ಶಿಬಿರದಲ್ಲಿ ಶೇ. 30ರಷ್ಟು ನಾಗರಿಕರು ಕನ್ನಡ ಮಾತನಾಡಬಲ್ಲರಂತೆ.
- ಕೀರ್ತನಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


