ಕೃಷ್ಣಸರ್ಪ ಇಲ್ಲಿದೆ

ಪ್ರಣಯಿಗಳು ಪ್ರೀತಿಯಲ್ಲಿರಲಿ, ಕೋಪದಲ್ಲಿರಲಿ... ಇಬ್ಬರಿಗೂ ಪರಸ್ಪರರ ಮನೋವ್ಯಾಪಾರಗಳ ಬಗ್ಗೆ ಚೆನ್ನಾಗಿಯೇ ಗೊತ್ತಿರುತ್ತದೆ. ಅದಕ್ಕನುಗುಣವಾಗಿ ತಮ್ಮ ರಾತ್ರಿಯ ದಿನಚರಿಯನ್ನೂ ಅವರು ಸಿದ್ಧಪಡಿಸಿಕೊಳ್ಳಬಲ್ಲರು, ಕಳ್ಳಪ್ರಣಯಿಗಳಿಗೆ, ತಮ್ಮ ಸಂಗಾತಿ ಯಾವ ಹೊಲದ ನಡುವೆ, ಯಾವ ಮರದ ಕೆಳಗೆ, ಎಷ್ಟು ಹೊತ್ತಿಗೆ ಕಾದಿರುತ್ತಾರೆಂಬುದು ಚೆನ್ನಾಗಿಯೇ ಗೊತ್ತು!
ಕಿಂ ವಿಶ್ರಾಮ್ಯಸಿ ಕೃಷ್ಣ ಭೋಗಿಭವನೇ ಭಾಂಡೀರಭೂಮೀರುಹೇ
ಭ್ರಾತರ್ಯಾಹಿ ನ ದೃಷ್ಟಿಗೋಚರಮಿತಃ ಸಾನಂದನಂದಾಸ್ಪದಂ
ರಾಧಾಯಾ ವಚನಂ ತದಧ್ವಗಮುಖಾನ್ನಂದಾಂತಿಕೇ ಗೋಪತೋ
ಗೋವಿಂದಸ್ಯ ಜಯಂತಿ ಸಾಯುಮತಿಥಿಪ್ರಾಶಸ್ತ್ಯಗರ್ಭಾ ಗಿರಃ
ಒಂದು ಸಂಜೆ, ಗೋಕುಲದ ಹೊರವಲಯದಲ್ಲಿರುವ ಒಂದು ಮರದಡಿಯಲ್ಲಿ ಒಬ್ಬ ಹಾದಿಹೋಕ ರಾತ್ರಿ ವಿಶ್ರಮಿಸಲು ಉದ್ಯುಕ್ತನಾಗುತ್ತಿದ್ದಾನೆ. ಆತನಿಗೆ ರಾಧೆ ಹೇಳುತ್ತಾಳೆ: 'ಎಲೈ ಅತಿಥಿಯೆ, ಇಲ್ಲೇಕೆ ವಿಶ್ರಮಿಸುವೆ? ಇಲ್ಲಿ ನೋಡು, ಇದು ತೂತಿರುವ ಗೋಳಿಮರ. ಇಲ್ಲಿ 'ಕೃಷ್ಣಭೋಗಿ' ವಾಸಿಸುತ್ತಾನೆ. ಸ್ವಲ್ಪ ದೂರದಲ್ಲಿ ಗೋಪಾಲಕ ನಂದನ ಮನೆಯಿದೆ. ಅಲ್ಲಿ ಹೋಗು'. ಅತಿಥಿ ಪಾಪ, ಹಾಗೇ ಮಾಡುತ್ತಾನೆ.
ಇಲ್ಲಿ 'ಕೃಷ್ಣಭೋಗಿ' ಎಂದರೆ ಎರಡರ್ಥ. ಒಂದು- ಕೃಷ್ಣಸರ್ಪ. ಇನ್ನೊಂದು ಸ್ವತಃ ಶ್ರೀಕೃಷ್ಣ. ರಾತ್ರಿ ಆ ಹಾದಿಹೋಕ ಅಲ್ಲಿದ್ದರೆ ಆ 'ಕೃಷ್ಣಭೋಗಿ' ಮತ್ತು ರಾಧೆ ಅಲ್ಲಿ ಸೇರಲಾದರೂ ಹೇಗೆ ಸಾಧ್ಯ? ಆಕೆ ಜಾಣೆ. ಅತಿಥಿಗೂ ಸತ್ಪಥ ತೋರಿಸಿದಳು, ತನಗೂ ಅನುಕೂಲ ಮಾಡಿಕೊಂಡಳು.
- ಹರಿಹರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


