ಬೈಟುಕಾಫಿ

ಖಾಸಗಿಯವರು ಹಣ ನೀಡಬೇಕು

Published On :

ಸಾಮಾನ್ಯವಾಗಿ ಪೊಲೀಸ್ ಭದ್ರತೆಯನ್ನು ಹಣ ನೀಡಿ ಪಡೆಯಬೇಕು. ಆದರೆ, ಸರ್ಕಾರವೇ ಗಣ್ಯ ವ್ಯಕ್ತಿಗಳಿಗೆ ಪೊಲೀಸ್ ಭದ್ರತೆ ನೀಡಿದರೆ ಅದಕ್ಕೆ ಆ ವ್ಯಕ್ತಿಗಳು ಪೊಲೀಸ್ ಇಲಾಖೆಗೆ ಹಣ ನೀಡುವಂತಿಲ್ಲ. ಜನಪ್ರತಿನಿಧಿಗಳಿಗೆ ಅಂದರೆ, ಮುಖ್ಯಮಂತ್ರಿ, ಸಚಿವರು, ಶಾಸಕರಿಗೆ ಒದಗಿಸುವ ಭದ್ರತೆಗೂ ಹಣ ನೀಡುವಂತಿಲ್ಲ.
ಖಾಸಗಿ ವ್ಯಕ್ತಿಗಳು, ಗಣ್ಯ ವ್ಯಕ್ತಿಗಳಲ್ಲದವರು ಇಲಾಖೆಯಿಂದ ಭದ್ರತಾ ಸಿಬ್ಬಂದಿಯನ್ನು ಪಡೆದರೆ ತಿಂಗಳಿಗೆ ಇಂತಿಷ್ಟು ಎಂದು ಹಣ ಪಾವತಿ ಮಾಡಬೇಕು. ಹಾಗೂ ಒಬ್ಬ ಪೊಲೀಸ್ ಸಿಬ್ಬಂದಿಗೆ ಇಷ್ಟು ಹಣ ಎಂದು ನಿಗದಿಪಡಿಸಲಾಗಿರುತ್ತದೆ.
ಯಾರಿಂದ ಎಷ್ಟು ಹಣ ಪಡೆಯಬೇಕು ಎಂಬುದನ್ನು ಸಂಬಂಧಪಟ್ಟ ಸಹಾಯಕ ಪೊಲೀಸ್ ಆಯುಕ್ತರು ಅಥವಾ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿರ್ಧರಿಸುತ್ತಾರೆ.
ಸಾಮಾನ್ಯವಾಗಿ ಪೊಲೀಸ್ ಭದ್ರತೆ ಪಡೆಯುವ ಪ್ರತಿಯೊಬ್ಬ ವ್ಯಕ್ತಿಯಿಂದ ತಿಂಗಳಿಗೆ ಸುಮಾರು ರು. 40 ಸಾವಿರ ಪಡೆಯಲಾಗುತ್ತದೆ. ಆದರೆ, ಭದ್ರತಾ ಸಿಬ್ಬಂದಿಯನ್ನು ಪಡೆಯು ವ್ಯಕ್ತಿಯಿಂದ ಇಂತಿಷ್ಟೇ ಹಣ ಪಡೆಬೇಕೆಂಬ ಕಾನೂನಿಲ್ಲ. ಬಿಲ್ಡರ್‌ಗಳು, ಉದ್ಯಮಿಗಳು, ಪತ್ರಕರ್ತರು, ಬ್ಯಾಂಕ್‌ಗಳಲ್ಲಿ, ಖಾಸಗಿ ಕಂಪನಿಗಳಲ್ಲಿ, ಈ ಭದ್ರತಾ ಸಿಬ್ಬಂದಿಯನ್ನು ಪಡೆಯುತ್ತಾರೆ.
ಅದಕ್ಕೂ ಮೊದಲು ಪೊಲೀಸ್ ಭದ್ರತೆ ಎಂದರೆ ಎಷ್ಟು ಸಿಬ್ಬಂದಿ ತೆಗೆದುಕೊಳ್ಳುತ್ತಾರೆ ಎಂಬುದು ಮುಖ್ಯ. ಒಬ್ಬ ಸಿಬ್ಬಂದಿ, ಇಬ್ಬರು, ಮೂವರು, ನಾಲ್ವರು.. ಹೀಗೆ ಇಷ್ಟು ಸಿಬ್ಬಂದಿ ಪಡೆದರೆ ಇಷ್ಟು ಹಣ ಎಂದು ಪಾವತಿಸಬೇಕಾಗುತ್ತದೆ. ಎಷ್ಟು ದಿನ ಬೇಕಾದರೂ ಪೊಲೀಸ್ ಭದ್ರತಾ ಸಿಬ್ಬಂದಿಯನ್ನು ಪಡೆಯಬಹುದು. ಇಂತಿಷ್ಟೇ ದಿನ ಭದ್ರತಾ ಸಿಬ್ಬಂದಿ ಪಡೆಯಬೇಕೆಂಬ ನಿಯಮವಿಲ್ಲ.

- ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.