ಬೈಟುಕಾಫಿ

ಹಿಂದೆ ವಾಸ್ತು ಎಲ್ಲಿತ್ತು?

Published On :

ನಾವು ಹಳೇ ಕಾಲದ ಮನೆಯಲ್ಲಿ ಹುಟ್ಟಿ ಬೆಳೆದವರು. ವಾಸ್ತು ಎನ್ನುವ ಶಬ್ಧವೇ ನಮಗೆ ಗೊತ್ತಿರಲಿಲ್ಲ. ಅಂತಹ ಮನೆಯಲ್ಲಿ ನಮ್ಮ ಪೂರ್ವಿಕರು ಬಹಳ ಕಾಲ ಬಾಳಿ ಬದುಕಿದ್ದರು. ಈಗ ವಾಸ್ತುಹೆಸರಲ್ಲಿ ಮನೆಗಳನ್ನು ಅಂದಗೆಡಿಸಿ, ಮನಸ್ಸಿಗೂ ನೆಮ್ಮದಿ ಇಲ್ಲದಂತೆ ಜೀವನ ನಡೆಸುತ್ತಿರುವವರು ನಮ್ಮ ನಡುವೆಯೇ ಇದ್ದಾರೆ. ವಾಸ್ತು ಪ್ರಕಾರವೇ ಮನೆ ಕಟ್ಟಿಸಿಕೊಂಡ ಅವರು ಸುಖವಾಗಿದ್ದಾರೆಯೇ? ಕಷ್ಟ-ಸುಖಗಳೆರಡೂ ಮನುಷ್ಯನಿಗೆ ಕಟ್ಟಿಟ್ಟ ಬುತ್ತಿ.
- ಎ.ಎನ್.ಗೀತಾ, ಅರಕಲಗೂಡು

ಸ್ತ್ರೀಯರನ್ನು ಗೌರವಿಸಿ
ಗಾಳಿ, ಬೆಳಕು ಸರಿಯಾಗಿ ಬರುವಂತೆ ಸ್ವಚ್ಛ ಮತ್ತು ಚಿಕ್ಕ ಮನೆಯಿದ್ದರೆ ಸಾಕು. ವಾಸ್ತುವನ್ನು ನಂಬಿಕೊಂಡು ದುಂದುವೆಚ್ಚ ಮಾಡಿ, ಕಟ್ಟಿರುವ ಮನೆಯನ್ನು ಕೆಡವಿ ಪುನಃ ನಿರ್ಮಿಸುವುದು ಅನುಚಿತ, ಮೂರ್ಖತನದ ಪರಮಾವಧಿ. ಮನೆಯ ವಾಸ್ತುವಿಗಿಂತ ಮನೆಯ ಸದಸ್ಯರ ಮನೋವಾಸ್ತು ಸರಿಯಿರಬೇಕು. ಎಲ್ಲಿ ಸ್ತ್ರಿಯರನ್ನು ಗೌರವಿಸಲಾಗುವುದೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಅದುದರಿಂದ ಕುಟುಂಬದ ಸದಸ್ಯರ ನಡುವೆ ಪರಸ್ಪರ ಹೊಂದಾಣಿಕೆ, ಪ್ರೀತಿ, ವಿಶ್ವಾಸ, ಹಿರಿಯರಲ್ಲಿ, ಸ್ತ್ರೀಯರಲ್ಲಿ ಗೌರವ ಇದ್ದರೆ ಆ ಮನೆಯಲ್ಲಿ ದೇವತೆಗಳು ನೆಲೆಸಿರುತ್ತಾರೆ.
- ಮಹದೇವಸ್ವಾಮಿ. ಹೆಚ್.ಪಿ.

ಮಾನಸಿಕ ಸ್ಥಿರತೆ ಇರಲಿ
ಮನುಷ್ಯನಿಗೆ ದೃಢವಾದ ಮನಸ್ಸು ಬೇಕೇ ವಿನಃ ವಾಸ್ತುವಲ್ಲ. ಮನೆ ಯಾವ ದಿಕ್ಕಿಗೆ, ಯಾವ ಮೂಲೆಗೆ ಇದ್ದರೂ ಅದರೊಳಗೆ ಜೀವಿಸುವ ನಾವು ಎಲ್ಲರೊಂದಿಗೆ ಹೊಂದಾಣಿಕೆಯಿಂದ ಜೀವನ ಸಾಗಿಸಿದರೆ ಸಾಕು. ಸುಮ್ಮನೆ ಅವರಿವರ ಮಾತು ಕೇಳಿ ಮನಸ್ಸು ಕೆಡಿಸಿಕೊಂಡು ಮನೆಯನ್ನು ದೂಷಿಸುವುದು ಸರಿಯಲ್ಲ. ಜ್ಯೋತಿಷಿಗಳ ಮಾತು ನಂಬಬಾರದು. ನಮ್ಮ ಇಚ್ಛೆಗೆ ಅನುಸಾರ ನಮ್ಮ ಮನೆಕಟ್ಟಿಕೊಳ್ಳಬೇಕು. ಆತ್ಮ ವಿಶ್ವಾಸದಿಂದ ಆ ಮನೆಯಲ್ಲಿ ಬಾಳಿದರೆ ಮನೆಯೇ ಮಂತ್ರಾಲಯವೆನಿಸುತ್ತದೆ. ಮನೆಯಲ್ಲಿನ ಮನಸ್ಸುಗಳು ನಿರ್ಮಲವಾಗಿರಬೇಕು.
- ವೀರೇಂದ್ರ ಉಪ್ಪಾರ, ಕುಕನೂರ

ಅದೃಷ್ಟ ನಮ್ಮಲ್ಲೇ ಇದೆ
ವಾಸ್ತು ಎಂಬುದನ್ನು ಮನುಷ್ಯರು ಮಾಡಿದ್ದು. ಪ್ರಕೃತಿ ಮಾಡಿದ್ದಲ್ಲ. ವಾಸ್ತು ನಮಗೆ ಬೇಡವೇ ಬೇಡ. ಮನುಷ್ಯನ ಒಳ್ಳೆಯತನ, ಕೆಟ್ಟತನದಲ್ಲೇ ವಾಸ್ತು ಅಡಗಿದೆ. ಮನುಷ್ಯನಲ್ಲಿ ದಾನ-ಧರ್ಮ ಮಾಡುವ ಗುಣವಿದ್ದರೆ, ಪ್ರೀತಿ ವಿಶ್ವಾಸವಿದ್ದರೆ, ನಂಬಿಕೆಗಳಿದ್ದರೆ ಅವನಿಗೆ ಮುಂಬರುವ ಕೆಡಕುಗಳನ್ನು ದೂರಮಾಡುವ ಶಕ್ತಿ ಇರುತ್ತದೆ. ನಮ್ಮ ಮನಸ್ಸನ್ನೇ ದೇವರೆಂದು, ನಮ್ಮ ಮನೆಯನ್ನೇ ದೇವಾಲಯವೆಂದುಕೊಂಡರಾಯಿತು. ನಮ್ಮ ಕೈಯಲ್ಲೇ ಎಲ್ಲ ಅದೃಷ್ಟವೂ ಇರುವಾಗ ಇಂತಹ ವಾಸ್ತು ಬಗ್ಗೆ ಚಿಂತೆ ಏಕೆ?
- ಮಾಲವಿ.ಸಿ.ವಿ

'ಜಗುಲಿ'ಯಲ್ಲಿ ಈ ಸಲದ ವಿಷಯ 'ಸಚಿನ್ ನಿವೃತ್ತಿ'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.