ಹಿರಿ-ಕಿರಿಯ ಪ್ರತಿಭೆಗಳ ಸಮಾಗಮ
'ಇನ್ನೂ ಏನೇನ್ ಮಾಡ್ತೀವಿ ನೋಡ್ತಾ ಇರಿ' ಎನ್ನುವ ಹೇಳಿಕೆಯನ್ನು 'ಬೈಟು ಕಾಫಿ' ಮೂಲಕ ಸಾರ್ಥಕಪಡಿಸಿಕೊಂಡಿದೆ ಕನ್ನಡಪ್ರಭ.
ಮೊದಲ ವಸಂತನ ಆಗಮನ
ಹಲವು ಹಿರಿಯ ಕಿರಿಯ ಪ್ರತಿಭೆಗಳ ಸಮಾಗಮ
ನೂತನ ಲೇಖನಗಳ ಆಗಮನ
ಹೊಸಹೊಸ ಶೀರ್ಷಿಕೆಗಳಿಗೆ ಸೋಲುವ ಮನ
ಏನ ಹೇಳಲಿ ಇದರ ವೈಯ್ಯಾರವ
ಪಸರಿಸಲಿ ಎಲ್ಲೆಡೆ ಇದರ ಪರಿಮಳವ
ನೋಡುತ್ತಿದ್ದೇವೆ ಈ ಕಾಫಿಯ ಕ್ವಾಲಿಟಿಯ
ಬಾಯಿ ಚಪ್ಪರಿಸುತಿದೆ ಇದರ ಸ್ವಾದವ
ದಯಮಾಡಿ ದಿನವೂ ನೀಡುತಿರಿ
ಬೈಟುಕಾಫಿಯ ಹೊಸಹೊಸ ರುಚಿಯ
ಹಾಗಾಗಿ ನಿನಗೆ-
ಹುಟ್ಟುಹಬ್ಬದ ಶುಭಾಶಯ
ಹುಟ್ಟುಹಬ್ಬದ ಶುಭಾಶಯ
ಹುಟ್ಟುಹಬ್ಬದ ಶುಭಾಶಯ
ಬೈಟುಕಾಫಿ ನಿನಗೆ ಹುಟ್ಟು ಹಬ್ಬದ ಶುಭಾಶಯ.
ದೇವರೂ ನಿನ್ನ ಹರಸಲಿ
ದೇವರು ನಿನ್ನ ಹರಸಲಿ
ದೇವರೂ ನಿನ್ನ ಹರಸಲಿ
- ಸವಿತಾ ನಾಗೇಶ್, ಬೆಂಗಳೂರು
ಅಚ್ಚರಿ ಆಯ್ತು!
'ಬೈಟು ಕಾಫಿ'ಗೆ ಒಂದು ವರ್ಷ ಅಂದಾಗ ಅಚ್ಚರಿ ಆಯಿತು, ನಾಲ್ಕೈದು ತಿಂಗಳ ಹಿಂದೆ ಆರಂಭವಾದ ಹಾಗಿದೆ, ಇಷ್ಟು ಬೇಗ ವರ್ಷ ಬಂತಾ ಅಂತ! 'ಬೈಟು ಕಾಫಿ' ನಾಡಿನಲ್ಲಿ ಮಾಡಿರುವ ಮೋಡಿ ಅಂತಾಹದ್ದು. ನನ್ನ ಅಚ್ಚುಮೆಚ್ಚಿನ ಪುರವಣಿ ಇದು. ಶಿಕ್ಷಕನಾದ ನನಗೆ ನನ್ನ ಶಾಲೆಯ ಮಕ್ಕಳನ್ನು ಲವಲವಿಕೆಯಿಂದ ಇಡಲು, ಅವರಿಗೆ ದಿನಕ್ಕೊಂದು ಮಾಹಿತಿ ನೀಡಲು ನೆರವಾಗುವ ನನ್ನ ಆತ್ಮೀಯ ಸ್ನೇಹಿತ 'ಬೈಟು ಕಾಫಿ'. ನಿನಗೆ ವರುಷವಾಗಿದ್ದು ನಮಗೆಲ್ಲ ಹರುಷ.
-ಯು.ಎಸ್. ತೋಟದ, ಬೆಳಕೊಡ (ಚಿಕ್ಕೋಡಿ ತಾ.)
ಓದುಗರ ಹೃದಯ ಆಳಲಿ
'ಬೈಟು ಕಾಫಿ' ನನಗೆ ತುಂಬಾ ಅಚ್ಚುಮೆಚ್ಚು. ಅದು ನಿರಂತರವಾಗಿರಲಿ. ಇನ್ನಷ್ಟು ವೈವಿಧ್ಯಮಯವಾಗಿ ಮೂಡಿಬಂದು ಕನ್ನಡಿಗರ ಹೃದಯವನ್ನು ಆಳಲಿ. ಇಡೀ 'ಬೈಟು ಕಾಫಿ' ತಂಡಕ್ಕೆ ನನ್ನ ಅಭಿನಂದನೆಗಳು.
- ಗೋಪಾಲ ಕುಲಕರ್ಣಿ ಬಾದರದಿನ್ನಿ, ಹಿರೆಕೆರೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

