ಪರಿವ್ರಾಜಕರಾಗಿ ಕಂಡ ವಾಸ್ತವ ಭಾರತ
ಸ್ವಾಮಿ ವಿವೇಕಾನಂದರು ಪರಿವ್ರಾಜಕರಾಗಿ ದೇಶದಾದ್ಯಂತ ಸಂಚಾರಕ್ಕೆ ಹೊರಟರು. ಸರ್ವವನ್ನೂ ತ್ಯಾಗ ಮಾಡಿದ ಅವರು ಉನ್ನತ ಅಧಿಕಾರಿಗಳ, ರಾಜಮಹಾರಾಜರ ಅತಿಥಿಯಾಗಿ ಉಳಿಯುತ್ತಿದ್ದುದು ಜನರಲ್ಲಿ ಅನುಮಾನಕ್ಕೆಡೆಮಾಡಿತು. ವಾಸ್ತವವೆಂದರೆ, ಅವರು ಪಾಳುಬಿದ್ದ ದೇವಾಲಯದಲ್ಲೋ, ಊರಾಚೆಯ ಆಲದ ಮರದ ನೆರಳಿನಲ್ಲೋ ಮಲಗುತ್ತಿದ್ದುದು ಅಷ್ಟೇ ಸತ್ಯ. ಯಾರ ಔತಣ, ಆತಿಥ್ಯಗಳಿಂದಲೂ ವಿಚಲಿತರಾಗದೆ ಒಬ್ಬ ಭಿಕಾರಿ ಸನ್ಯಾಸಿಯಂತೆಯೇ ಸಾಗಿದರು ಸ್ವಾಮೀಜಿ. ಅವರ ಬಳಿಯಿದ್ದುದು ಪುಸ್ತಕಗಳ ಗಂಟು, ಕಾವಿಬಟ್ಟೆ ಮತ್ತು ದಂಡ-ಕಮಂಡಲು ಮಾತ್ರ.
ಅವರು ಉನ್ನತ ಹುದ್ದೆಯ ಅಧಿಕಾರಿಗಳು, ದಿವಾನರು, ರಾಜರುಗಳನ್ನು ಭೇಟಿ ಮಾಡುತ್ತಿದ್ದುದಕ್ಕೂ ಕಾರಣವಿತ್ತು. 'ಯಾರ ಕೈಯಲ್ಲಿ ಅಧಿಕಾರ-ಹಣ ಇದೆಯೋ ಅವರ ಹೃದಯ ಗೆಲ್ಲಲು ಸಾಧ್ಯವಾದರೆ ನನ್ನ ಉದ್ದೇಶ ಶೀಘ್ರವಾಗಿ ಕೈಗೂಡುತ್ತದೆ. ಒಬ್ಬ ಮಹಾರಾಜನ ಮೇಲೆ ಪ್ರಭಾವ ಬೀರುವುದರ ಮೂಲಕ ಪರೋಕ್ಷವಾಗಿ ಸಾವಿರಾರು ಜನರಿಗೆ ನೆರವಾಗಬಹುದು' ಎನ್ನುತ್ತಿದ್ದರು. ಅವರ ಪಾಲಿಗೆ ತ್ಯಾಗ ಮತ್ತು ಸೇವೆಗಳೇ ಆದರ್ಶದ ಎರಡು ಕಣ್ಣುಗಳಾಗಿದ್ದವು.
ಹೀಗೆ ಸಂಚರಿಸುತ್ತಾ ಸ್ವಾಮೀಜಿ ಪೋರ್ಬಂದರಿನ ದಿವಾನರಾದ ಶಂಕರ ಪಾಂಡುರಂಗರನ್ನು ಭೇಟಿಯಾದರು. ದಿವಾನರು 'ನೀವು ಈ ದೇಶದಲ್ಲಿ ಹೆಚ್ಚಿನದೇನನ್ನೂ ಸಾಧಿಸಲಾರಿರಿ. ಏಕೆಂದರೆ ನಿಮ್ಮನ್ನು ಅರ್ಥಮಾಡಿಕೊಳ್ಳಬಲ್ಲವರು ಬಹಳ ಕಡಿಮೆ. ನೀವು ಪಾಶ್ಚಾತ್ಯ ರಾಷ್ಟ್ರಗಳಿಗೆ ಹೋಗಿ ಅಲ್ಲಿಯ ಜನರಿಗೆ ನಮ್ಮ ಸನಾತನ ಧರ್ಮವನ್ನು ಪ್ರಚಾರ ಮಾಡುವುದರಿಂದ ಅವರಿಗೆ ಹೊಸ ಬೆಳಕನ್ನು ನೀಡಬಲ್ಲಿರಿ' ಎಂದು ಮರುವರ್ಷ ನಡೆಯಲಿರುವ 'ಧರ್ಮಸಮ್ಮೇಳನ'ದಲ್ಲಿ ಭಾಗವಹಿಸುವಂತೆ ಸಲಹೆ ನೀಡಿದರು.
-ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

