ಛಲ ಬಿಡದ ತ್ರಿವಿಕ್ರಮ!
ಪರಿವ್ರಾಜಕರಾಗಿ ಸಂಚರಿಸುತ್ತಿರುವ ವಿವೇಕಾನಂದರನ್ನು ಕಾಣಬೇಕೆಂಬ ಉತ್ಕಟ ಹಂಬಲದಿಂದ ಅಖಂಡಾನಂದರು ಅವರನ್ನು ಹಿಂಬಾಲಿಸಿ ಹೊರಟರು. ಆಗ ಎದುರಾದ ಸನ್ನಿವೇಶಗಳನ್ನು ಲೆಕ್ಕಿಸದೆ ಮುನ್ನುಗ್ಗಿ ಸಾಗಿ ವಿವೇಕಾನಂದರನ್ನು ಕಂಡಾಗ ಅವರಿಗಾದ ಆನಂದಕ್ಕೆ ಪಾರವೇ ಇರಲಿಲ್ಲ. ಅವರ ಬಿಡದ ಛಲವೇ ಅವರನ್ನು ಸ್ವಾಮೀಜಿ ಬಳಿಗೆ ಕರೆತಂದಿತು.
ಸ್ವಾಮೀಜಿಯನ್ನು ದರ್ಶನ ಮಾಡಿದಾಗ ಅವರಿಗಾದ ಆನಂದಕ್ಕೆ ಪಾರವೇ ಇಲ್ಲ. ಬಹುಕಾಲದ ನಂತರ ಅನಿರೀಕ್ಷಿತವಾಗಿ ಅಖಂಡಾನಂದರನ್ನು ಕಂಡ ಸ್ವಾಮೀಜಿಗೂ ಆಶ್ಚರ್ಯ-ಆನಂದ. ಬಹಳ ಹೊತ್ತು ಇಬ್ಬರೂ ಪರ್ಯಟನೆಯ ಅನುಭವಗಳನ್ನು ವಿನಿಮಯ ಮಾಡಿಕೊಳ್ಳುವುದರಲ್ಲಿ ಮುಳುಗಿದರು.
ಕೆಲವು ದಿನಗಳಾದ ಮೇಲೆ ಸ್ವಾಮೀಜಿ ಗಂಭೀರರಾಗಿ 'ಗಂಗಾಧರ, ನಾನು ಸಾಧಿಸಬೇಕಾದ ಮಹಾಕಾರ್ಯವೊಂದಿದೆ. ನೀವು ಯಾರಾದರೂ ನನ್ನ ಜತೆಯಲ್ಲಿದ್ದರೆ ಅದನ್ನು ಸಾಧಿಸಲು ನನಗೆ ಸಾಧ್ಯವಾಗುವುದೇ ಇಲ್ಲ' ಎಂದರು. ಅಖಂಡಾನಂದರು ಇದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಕೊನೆಗೆ ಹೇಳಿದರು, 'ನಿನ್ನ ದಾರಿಗೆ ಅಡ್ಡವಾಗಿ ಬರಲು ನನಗೂ ಇಷ್ಟವಿಲ್ಲ, ನಿನ್ನನ್ನು ನೋಡಬೇಕೆಂದು ತೀವ್ರ ಹಂಬಲ. ಈಗ ನಿನ್ನನ್ನು ನೋಡಿ ಮೇಲೆ ಮನಸ್ಸಿಗೆ ತೃಪ್ತಿಯಾಗಿದೆ. ನೀನಿನ್ನು ಏಕಾಂಗಿಯಾಗಿ ಹೋಗಬಹುದು.' ಸ್ವಾಮೀಜಿಗೆ ಅಖಂಡಾನಂದರ ಬಿಚ್ಚುಮನಸ್ಸಿನ ಮಾತುಗಳನ್ನು ಕೇಳಿ ಸಂತೋಷವಾಯಿತು. ಇಬ್ಬರೂ ಜುನಾಗಢದವರೆಗೆ ಪಯಣಿಸಿ ಅಲ್ಲಿಂದ ಸ್ವಾಮೀಜಿ ಮುಂಬೈಗೆ ತೆರಳಿದರು. ಅಖಂಡಾನಂದರು ಕಾಥೇವಾಡಕ್ಕೆ ನಡೆದರು. ವಿವೇಕಾನಂದರನ್ನು ಅಖಂಡಾನಂದರು ಸಂಧಿಸಿದ್ದು ಇದೇ ಕಡೆಯ ಸಲ.
- ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

