ಬೈಟುಕಾಫಿ

ಲೋಕದ್ವಯರ ಅಪೂರ್ವ ಸಮಾಗಮ

Published On :

ಸ್ವಾಮಿ ವಿವೇಕಾನಂದರು ಹಾಗೂ ಲೋಕಮಾನ್ಯ ಬಾಲಗಂಗಾಧರ ತಿಲಕರು ಪರಸ್ಪರ ಭೇಟಿಯಾದುದು ಭಾರತದ ಚರಿತ್ರೆಯಲ್ಲಿ ಒಂದು ಅಪೂರ್ವ ಸಮ್ಮೇಳನದಂತೆ ಉಲ್ಲೇಖಾರ್ಹ. ಇಬ್ಬರ ಧ್ಯೇಯ 'ಭಾರತೀಯರಲ್ಲಿ ಜಾಗೃತಿ; ಭಾರತ ದೇಶದ ಮುಕ್ತಿ'ಯಾದರೂ ಸಾಧನಾ ಮಾರ್ಗಗಳು ಮಾತ್ರ ಬೇರೆ ಬೇರೆ. ಧರ್ಮ ಮತ್ತು ಆಧ್ಯಾತ್ಮಿಕ ನೆಲೆಗಟ್ಟಿನ ಮೇಲೆ ನಿಂತು ಭಾರತೀಯರನ್ನು ಎಚ್ಚರಿಸಲು ವಿವೇಕಾನಂದರು ನಿಂತರೆ, ರಾಜಕೀಯ ಹೋರಾಟದ ಹಾದಿಯಲ್ಲಿ ಸ್ವರಾಜ್ಯ ಕಟ್ಟಲು ನಿಂತವರು ತಿಲಕರು. ಇಂತಹ ಲೋಕದ್ವಯರು ಪರಸ್ಪರ ಭೇಟಿಯಾದ ಅಪರೂಪದ ಪ್ರಸಂಗ ಇಲ್ಲಿದೆ.

ಒಮ್ಮೆ ಸ್ವಾಮೀಜಿ ರೈಲಿನಲ್ಲಿ ದಕ್ಷಿಣ ಭಾರತದ ಕಡೆ ಹೊರಟಿದ್ದರು. ತಿಲಕರು ಕುಳಿತಿದ್ದ ಬೋಗಿಯೊಳಗೆ ಸ್ವಾಮೀಜಿ ಪ್ರವೇಶಿಸಿದರು. ತಿಲಕರಿಗೆ ಸ್ವಾಮೀಜಿ ಪರಿಚಯವಿರಲಿಲ್ಲ. ಆದರೆ ಸ್ವಾಮೀಜಿಯನ್ನು ಗುರುತಿಸಿದ ತಿಲಕರ ಸ್ನೇಹಿತರೊಬ್ಬರು ಅವರನ್ನು ತಿಲಕರಿಗೆ ಪರಿಚಯಿಸಿದರು. ತಿಲಕರು ಆಗ 'ಮರಾಠಾ' ಮತ್ತು 'ಕೇಸರಿ' ಪತ್ರಿಕೆಗಳ ಸಂಪಾದಕರಾಗಿದ್ದರು. ಸ್ವಾಮೀಜಿ  'ನಾನೊಬ್ಬ ಸನ್ಯಾಸಿ' ಎಂದಷ್ಟೇ ಪರಿಚಯಿಸಿಕೊಂಡಿದ್ದರು. ಮುಂದೆ ಚಿಕಾಗೋ ವಿಶ್ವಧರ್ಮ ಸಮ್ಮೇಳನದ ಮೂಲಕ ಸ್ವಾಮಿ ವಿವೇಕಾನಂದರೆಂಬ ಹೆಸರಿನಿಂದ ಜಗತ್ಪ್ರಸಿದ್ಧರಾದಾಗ, ಪತ್ರಿಕಾ ವರದಿಗಳನ್ನು ನೋಡಿ ತಿಲಕರು ಹಿಂದೆ ತಮ್ಮ ಅತಿಥಿಯಾಗಿದ್ದವರೇ ಇವರೆಂದು ತಿಳಿದು ಅಚ್ಚರಿಪಟ್ಟರು. ನಂತರ ತಿಲಕರು ರಾಮಕೃಷ್ಣ ಮಠದಲ್ಲಿ ಸ್ವಾಮೀಜಿಯನ್ನು ಸಂದರ್ಶಿಸಿದರು. ಅವರ ಅಪ್ರತಿಮ ರಾಷ್ಟ್ರೀಯ ಚಿಂತನೆಗಳಿಗೆ ಮನಸೋತರು.

- ಆನಂದ ಎಸ್.ಎನ್.
anandsn193@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.