ಒಳ್ಳೆಯ ಸಂಸ್ಕೃತಿ ಕಲಿಸಿ
ವಾಸ್ತು ಬೇಕೇ ಅಥವಾ ಬೇಡವೇ ಅನುವುದಾದರೆ, 'ನನಗೆ ವಾಸ್ತು ಬೇಡ' ಎಂದು ಹೇಳಲು ಇಚ್ಛಿಸುತ್ತೇನೆ. ನಾವು ಮನೆಯನು ಉದಾಹರಣೆಯಾಗಿ ತೆಗೆದುಕೊಂಡರೆ, 'ಕೆಲವರು ನಮ್ಮ ಮನೆ ವಾಸ್ತು ಸರಿಯಿಲ್ಲ, ನಮಗೆ ಇಲ್ಲಿ ತುಂಬಾ ಹಣದ ತೊಂದರೆಯಾಗಿದೆ. ನಮ್ಮ ಕೈಯಲ್ಲಿ ಹಣ ಉಳಿಯುತ್ತಿಲ್ಲ' ಅನುತ್ತಾರೆ. ಆದರೆ ಅವರು ತಮ್ಮ ಆದಾಯ ಮತ್ತು ಖರ್ಚುಗಳನು ನೋಡಬೇಕಾಗುತ್ತದೆ. ಇವರು ತಮ್ಮ ಬೇಡಿಕೆಗಳನು ಪೂರೈಸಿಕೊಂಡು, ಮಕ್ಕಳ ಆಸೆಗಳನು ಈಡೇರಿಸಿ, ವಾರದ ಕೊನೆ ದಿನಗಳಲ್ಲಿ ಝಛಟ್ಜಿಜ ಅಂತಾ ಹೋಟೆಲ್, ಸಿನಿಮಾಗಳಿಗೆ ನೀರಿನ ಹಾಗೆ ಹಣವನು ಖರ್ಚು ಮಾಡುತ್ತಾರೆ. ಇದರಿಂದ ಎಷ್ಟು ಆದಾಯ ಇದ್ದರೂ ಸಾಲುವುದಿಲ್ಲ. ಆದ್ದರಿಂದ ನಮ್ಮ 'ಆಡಂಬರದ ಜೀವನಕ್ಕೆ ವಾಸ್ತುವಿನ ದೋಷ ಬೇಡ'. ನಮ್ಮ ಇತಿ-ಮಿತಿಗಳನು, ನಮ್ಮ ಜೀವನ ಮಟ್ಟವನು ತಿಳಿದು, ಮಕ್ಕಳಿಗೂ ತಿಳಿ ಹೇಳಿ, ಸಂಸಾರದ ದೋಣಿಯನು ಮುನಡೆಸಿದರೆ ಅದುವೇ ನಂದನವನ. ಆದ್ದರಿಂದ ವಾಸ್ತುವಿನ ಬೆನು ಹತ್ತಿ ಸಾವಿರಾರು ರುಪಾಯಿ ಖರ್ಚು ಮಾಡುವ ಬದಲು ಮನೆಯಲ್ಲಿ ಮಕ್ಕಳಿಗೆ ಮಿತವ್ಯಯದ ಪಾಠ ಹೇಳಿದರೆ, ಒಳ್ಳೆಯ ಸಂಸ್ಕೃತಿಯನು ಕಲಿಸಿದರೆ ವಾಸ್ತು ತಾನಾಗಿಯೇ ಒಳ್ಳೆಯದು ಮಾಡುತ್ತದೆ!
- ಪ್ರತಿಮಾ ಪ್ರದೀಪ ಮರಳಿ, ಬೆಂಗಳೂರು
ಬಡರಿಗಿಲ್ಲದ ವಾಸ್ತು ಉಳ್ಳವರಿಗೇಕೆ?
ವಾಸ್ತು ನಂಬಿ ಎಷ್ಟೋ ಜನ ಮನೆ ಕಟ್ಟಿ ಮನಸ್ಸಿನ ನೆಮ್ಮದಿ ಹಾಳು ಮಾಡಿಕೊಂಡು, ಹಣವನು ಕಳೆದುಕೊಂಡು ಮಮ್ಮಲ ಮರುಗುತ್ತಿದ್ದಾರೆ. ವಾಸ್ತು ನಿಜವಾಗಲು ಬೇಕೆ? ಗುಡಿಸಲಿನಲ್ಲೂ ವಾಸಿಸುವವರಿಗೆ ಎಲ್ಲಿದೆ ವಾಸ್ತು? ಅವರು ಸುಖವಾಗಿಲ್ಲವೇ? ಶ್ರೀಮಂತರಿಗಷ್ಟೇ ವಾಸ್ತು. ವಾಸ್ತು ಎಂಬುದೊಂದು ಹಣ ಮಾಡುವ ತಂತ್ರ. ವಾಸ್ತು ಪಂಡಿತರ ಮಂತ್ರ, ಜೀವನದಲ್ಲಿ ಇದ್ದರೆ ಸಾಕು ಶಿಸ್ತು, ಏತಕೆ ಬೇಕು ವಾಸ್ತು? ವಾಸ್ತು ನಂಬಿ ಹಾಳಾದವರ ಜೇವನ ನೋಡಿಯಾದರೂ ಕಲಿಯೋಣ. ವಾಸ್ತುವನು ದೂರವೇ ಇಡೋಣ. ಆ ಭಗವಂತನ ಮತ್ತು ತಂದೆ-ತಾಯಿಯ ಅನುದಿನವೂ ನೆನೆಯೋಣ.
-ಲಕ್ಷ್ಮೀ, ಮೈಸೂರು
ಮೂಢನಂಬಿಕೆಯ ದಾಸರಾಗಬೇಡಿ
'ಸಾವಿಲ್ಲದ ವ್ಯಕ್ತಿಯಿಲ್ಲ, ಸಮಸ್ಯೆಯಿಲ್ಲದ ಮನೆಯಿಲ್ಲ' ನಾಣ್ಣುಡಿಯಂತೆ ಪ್ರತಿಯೊಂದು ಮನೆಯಲ್ಲೂ ಸಮಸ್ಯೆ ಇದ್ದದ್ದೆ. ಒಂದು ಮನೆಗೆ ಗಾಳಿ ಬೆಳಕು ಉತ್ತಮವಾಗಿದ್ದರೆ ಅದಕ್ಕಿಂತ ಹೆಚ್ಚು ಇನೆನೂ ಬೇಕಾಗಿಲ್ಲ. ಅದನು ಬಿಟ್ಟು ವಾಸ್ತುಶಾಸ್ತ್ರದ ಪ್ರಕಾರ ಮನೆ ನಿರ್ಮಾಣ ಮಾಡಿದರೆ ಸಮಸ್ಯೆಗಳು ಉದ್ಭವಿಸುವುದಿಲ್ಲ, ಯಾವುದೇ ಅಪಘಾತಗಳು ಉಂಟಾಗುವುದಿಲ್ಲ ಹಾಗೂ ಸುಖ ಸಂಪತ್ತು ಹರಿದು ಬರುತ್ತದೆ ಎಬುಂದು ನಮ್ಮ ಮೂಢನಂಬಿಕೆ ಅಷ್ಟೆ. ವೈಜ್ಞಾನಿಕವಾಗಿ ತಾಂತ್ರಿಕವಾಗಿ ಇಷ್ಟೊಂದು ಮುಂದುವರೆದರೂ ನಾವು ವಾಸ್ತುಶಾಸ್ತ್ರದ ಮೊರೆ ಹೋಗುವುದು ನಮ್ಮ ದೌರ್ಬಲ್ಯ. ಕಷ್ಟಪಟ್ಟು ದುಡಿದು ಆತ್ಮವಿಶ್ವಾಸದಿಂದ ತನ ಕೆಲಸ ಕಾರ್ಯಗಳಲ್ಲಿ ಪಾಲ್ಗೊಂಡರೆ ಸಾಕು. ಒಂದು ಕುಟುಂಬ 10 ವರ್ಷದಿಂದ ನೆಮ್ಮದಿ ಜೀವನ ನಡೆಸುತ್ತಿದ್ದು ಅನಿವಾರ್ಯವಾಗಿ ಏನೋ ಅಪಘಾತ ಸಂಭವಿಸಿದರೆ ಅದಕ್ಕೆ ವಾಸ್ತು ಕಾರಣ ಎಂದು ಹೇಳಿ ಮನೆ ಕೆಡವಿ ಕಟ್ಟಿದರೆ ಸಮಸ್ಯೆ ಪರಿಹಾರ ಆಗುತ್ತಾ? 10 ವರ್ಷಕ್ಕಿಂತ ಮುಂಚೆ ವಾಸ್ತು ಸರಿ ಇತ್ತು, ಈಗ ಸರಿಯಿಲ್ಲವಾ? ಎಂಬ ಪ್ರಶೆಗಳಿಗೆ ನಾವೇ ಉತ್ತರಿಸಬೇಕಾಗುತ್ತದೆ. ಹಾಗಾಗಿ ಮೂಢನಂಬಿಕೆಯ ದಾಸರಾಗದೇ ವೈಜ್ಞಾನಿಕ ದೃಷ್ಟಿಯಿಂದ ಸಮಸ್ಯೆಗಳನು ಪರಿಹರಿಸಿ ಸುಖದ ಹಾಗೂ ನೆಮ್ಮದಿಯ ಮನೆ ನಿರ್ಮಾಣ ಮಾಡಿಕೊಳ್ಳೋಣ.
- ಲತಾ.ಟಿ., ಮಲ್ಲಿಗುಂಟೆ (ಕುದೂರು ಹೋಬಳಿ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

