ಬೈಟುಕಾಫಿ

ಸಾರ್ವತ್ರಿಕ ಉದ್ಯೋಗ ಸಂಹಿತೆ

Published On :

ಸ್ವಾಮಿ ವಿವೇಕಾನಂದರ ವಿಚಾರಧಾರೆಗಳು ಸಾರ್ವತ್ರಿಕವೂ, ಸಾರ್ವಕಾಲಿಕವೂ ಆಗಿದ್ದು, ಧರ್ಮಾತೀತವಾಗಿ ಸರ್ವರೂ ಪಾಲಿಸಬಹುದಾದ ನಿತ್ಯಸತ್ಯಗಳಾಗಿವೆ. ನಮ್ಮ ದುಃಖಕ್ಕಾಗಲಿ, ಬಂಧನಕ್ಕಾಗಲಿ ಪರರಲ್ಲಿ ಕಾರಣ ಹುಡುಕುವ ಬದಲು ನಮ್ಮಲ್ಲಿಯೇ ಇರುವ ಪರಿಹಾರ ಮಾರ್ಗವನು ಕಂಡುಕೊಂಡು ಬಂಧಮುಕ್ತರಾಗಿ ಸಾರ್ಥಕ ಜೀವನ ಮಾಡುವ ವಿಧಾನವನು ಈ ಘಟನೆಯಿಂದ ನಾವು ತಿಳಿಯಬಹುದು.
ಹರಿಪದನು ಕೈತುಂಬ ಸಂಬಳ ಬರುವ ಉದ್ಯೋಗದಲ್ಲಿದ್ದ. ಆದರೆ ಕಚೇರಿಯಲ್ಲಿ ಮೇಲಧಿಕಾರಿಗಳೊಂದಿಗೆ ಅವನ ಸಂಬಂಧ ಅಷ್ಟು ಚೆನಾಗಿರಲಿಲ್ಲ. ಇದರಿಂದಾಗಿ ಕಚೇರಿಯಲ್ಲಿ ಅವನಿಗೆ ನೆಮ್ಮದಿಯಿಂದಿರಲು ಸಾಧ್ಯವಾಗುತ್ತಿರಲಿಲ್ಲ. ತನ ಈ ಪರಿಸ್ಥಿತಿಯನು ಸ್ವಾಮೀಜಿಯಲ್ಲಿ ನಿವೇದಿಸಿಕೊಂಡ. ಆಗ ಸ್ವಾಮೀಜಿ 'ನೀನು ಆ ಕೆಲಸದಲ್ಲಿರುವುದೇಕೆ? ಪಡೆಯುವ ಸಂಬಳಕ್ಕಾಗಿ ತಾನೆ? ನಿನಗೆ ತಿಂಗಳು ತಿಂಗಳು ಸರಿಯಾಗಿ ಸಂಬಳ ಬರುತ್ತದೆ ಎಂದ ಮೇಲೆ ಏಕೆ ತಲೆ ಕೆಡಿಸಿಕೊಳ್ಳಬೇಕು? ಸಣ್ಣಪುಟ್ಟ ವಿಷಯಗಳಿಗೆಲ್ಲ ಬುದ್ಧಿ ಸ್ತಿಮಿತ ಕಳೆದುಕೊಂಡು, ಕೊರಗುತ್ತ, ನಿನ ದುಃಖವನು ಇನಷ್ಟು ಹೆಚ್ಚಿಸಿಕೊಳ್ಳುತ್ತಿದ್ದೀಯ. ನಿನನು ಯಾರೂ ಹಿಡಿದಿಟ್ಟಿಲ್ಲ. ಇಷ್ಟಬಂದಾಗ ರಾಜೀನಾಮೆ ಕೊಡುವ ಸ್ವಾತಂತ್ರ್ಯ ನಿನಗಿದೆ. ಹೀಗಿರುವಾಗ ಇನೊಬ್ಬರನು ದೂರುವುದೇತಕ್ಕೆ? ನಿನ ಜವಾಬ್ದಾರಿಗಳ ಕಡೆಗೆ ಗಮನಕೊಡಬೇಕಾದ್ದಷ್ಟೇ ನಿನ ಕರ್ತವ್ಯ. ನೀನು ಒಳ್ಳೆಯವನಾಗಿದ್ದರೆ ಇಡೀ ಜಗತ್ತೇ ನಿನಗೆ ಒಳ್ಳೆಯದಾಗಿ ಕಾಣಿಸುತ್ತದೆ. ಇತರರಲ್ಲಿ ತಪ್ಪು ಕಂಡುಹಿಡಿಯುವ ಅಭ್ಯಾಸವನು ಇಂದಿನಿಂದಲೇ ಬಿಟ್ಟುಬಿಡು' ಎಂದರು. ಅಂದಿನಿಂದ ಹರಿಪದನ ಜೀವನಕ್ರಮವೇ ಬದಲಾಗಿ ಹೋಯಿತು.


-ಆನಂದ ಎಸ್.ಎನ್.
anandsn193@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.