ಬೈಟುಕಾಫಿ

ತಂತ್ರಜ್ಞಾನ ಪ್ರದರ್ಶನ

Published On :

ಕರ್ನಾಟಕ ಮುದ್ರಕರ ಸಂಘದವತಿಯಿಂದ ಅರಮನೆ ಮೈದಾನದಲ್ಲಿ ಇದೇ ತಿಂಗಳ (ಸೆಪ್ಟೆಂಬರ್) 27ರಿಂದ 30ರವರೆಗೆ 'ಪ್ರಿಂಟ್ ಮತ್ತು ಪ್ಯಾಕ್‌ಟೆಕ್ ವರ್ಲ್ಡ್ ಎಕ್ಸ್‌ಪೊ-2013' ಮೇಳವನ್ನು ಆಯೋಜಿಸಲಾಗಿದೆ. ಭಾರತವು ವಿಶ್ವ ಮಾರುಕಟ್ಟೆಯಲ್ಲಿ ನಾಲ್ಕನೇ ಅತಿ ದೊಡ್ಡ ಸ್ಥಾನವನ್ನು ದಾಖಲಿಸಲಿದೆ. ಉದ್ಯಮವು ಅತ್ಯಂತ ತ್ವರಿತವಾಗಿ ಅನಾವರಣಗೊಳ್ಳುತ್ತಿದ್ದು, ಅತ್ಯಾಧುನಿಕವಾಗಿ ಕಟ್ಟಕಡೆಯ ಗ್ರಾಹಕರ ಬೇಡಿಕೆಗೆ ತಕ್ಕಂತೆ ಸ್ಪಂದಿಸುತ್ತಿದೆ. ದೇಶಾದ್ಯಂತ ಸುಮಾರು 3 ಲಕ್ಷ ಸಣ್ಣ, ಮಧ್ಯಮ ಮತ್ತು ದೊಡ್ಡ ಪ್ರಮಾಣದ ಮುದ್ರಕರಿದ್ದಾರೆ.
ಭಾರತೀಯ ಪತ್ರಿಕೆಗಳ/ನಿಯತಕಾಲಿಕೆಗಳ ಮಾರುಕಟ್ಟೆ ಬೆಳೆಯುತ್ತಿದ್ದು ತಮ್ಮ ಪ್ರಾಬಲ್ಯವನ್ನು ಮರುಸ್ಥಾಪಿಸಬೇಕಾದರೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿರುವಂತೆ ಮುದ್ರಣ ಮತ್ತು ಪ್ಯಾಕೇಜಿಂಗ್‌ನ ಅಗ್ರ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕಿದೆ. ಈ ರೀತಿಯ ಪ್ರದರ್ಶನವು ಮೂರು ವರ್ಷಗಳ ನಂತರ ಬೆಂಗಳೂರಿನಲ್ಲಿ ಜರುಗುತ್ತಿದೆ. ಕರ್ನಾಟಕದಿಂದ ಮಾತ್ರವಲ್ಲದೆ ದೇಶಾದ್ಯಂತ ಇರುವ ತಂತ್ರಜ್ಞರು ತಮ್ಮ ಇತ್ತೀಚಿನ ತಂತ್ರಜ್ಞಾನವನ್ನು ಈ ಮೇಳದಲ್ಲಿ ಪ್ರದರ್ಶಿಸಲಿದ್ದಾರೆ. ಈ ಮೇಳದಿಂದ ಆರ್ಥಿಕ ವಲಯಕ್ಕೂ ಹೆಚ್ಚಿನ ಪ್ರಯೋಜನವಾಗಲಿದೆ.

ದಿನಾಂಕ: 27ರಿಂದ 30 ಸೆಪ್ಟೆಂಬರ್ 2013
ಸ್ಥಳ: ಅರಮನೆ ಮೈದಾನ, ಬೆಂಗಳೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.