ಬೈಟುಕಾಫಿ

ಕಾಮದೇವನಿಗೆ ನಮಸ್ಕಾರ

ಕಾಮದೇವನಿಗೆ ನಮಸ್ಕಾರ
Published On :

ಯಾವುದೇ ಕಾರ್ಯ ಸಿದ್ಧಿಯಾಗಬೇಕಾದರೂ ಜನ ನೆನೆಯುವುದು ಮೊದಲು ಗಣಪತಿಯನ್ನು. ತದನಂತರ ಜಗತ್ ಸಂಸಾರಿಯಾದ ಭೋಳೇಶಂಕರನನ್ನು. ಇನ್ನು, ತಮ್ಮ ತಮ್ಮ ನಂಬಿಕೆಗಳಿಗನುಗುಣವಾಗಿ ವಿಷ್ಣು, ದೇವಿ ಮತ್ತಿತರರನ್ನು. ಇಚ್ಛಿಸಿದ್ದು ಈಡೇರಲಿ ಎಂದು ಎಲ್ಲಾದರೂ ಮನ್ಮಥನನ್ನು ಬೇಡಿಕೊಳ್ಳುವವರುಂಟೆ? ಇದ್ದಾರೆ. ಕವಿಕುಲಗುರು ಕಾಳಿದಾಸ ಈ ಪಂಥಕ್ಕೆ ಸೇರಿದವನು. 'ಮಾಲವಿಕಾಗ್ನಿಮಿತ್ರ' ನಾಟಕದಲ್ಲಿ ಅವನು ಬೇಡಿಕೊಳ್ಳುವುದು ಹೀಗೆ:

ಅನಂಗೇನಾಬಲಾಸಂಗಾಜ್ಜಿತಾ ಯೇನ ಜಗತ್ತ್ರಯೀ
ಸ ಚಿತ್ರಚರಿತಃ ಕಾಮಃ ಸರ್ವಕಾಮಪ್ರದೋಸ್ತು ವಃ


ಕಾಮದೇವನ ಸ್ವರೂಪ, ವಿಲಾಸಗಳೇ ವಿಶಿಷ್ಟ. ಆತ ಶಿವನ ಕೆಂಗಣ್ಣಿಗೆ ಸಿಕ್ಕಿ ಸುಟ್ಟು ಬೂದಿಯಾದವನು. ಅಂದರೆ ದೇಹವೇ ಇಲ್ಲವಾಗಿ ಇರುವವನು. ಆದರೂ ಆತ ಅಬಲೆಯರೆನಿಸಿರುವ ತರುಣಿಯರನ್ನು ತನ್ನ ಸೈನಿಕರನ್ನಾಗಿಟ್ಟುಕೊಂಡು ಲೋಕವನ್ನೇ ಗೆಲ್ಲಬಲ್ಲ. ಹೀಗೇ ನಮ್ಮ ಕಾಮನೆಗಳನ್ನು ಈಡೇರಿಸಿ ತಣಿಸಬಲ್ಲ ಮಾರ ನಮ್ಮನ್ನು ಕಾಪಾಡಲಿ.
ಬಲವತ್ತರವಾದ ವೈರಿಗಳನ್ನು ಗೆಲ್ಲಬೇಕಾದರೆ ನಮಗೂ ಅವರಷ್ಟೇ ದೇಹಬಲ, ಇಚ್ಛಾಬಲ, ಧನಬಲಗಳಿರಬೇಕಲ್ಲವೆ? ದೇಹವೇ ಇಲ್ಲದವನು, ದುರ್ಬಲವಾದ ಸಂಗಾತಿಗಳನ್ನಾಶ್ರಯಿಸಿ ಇನ್ನೊಬ್ಬರನ್ನು ಗೆಲ್ಲಲಾದೀತೆ? ಇದೇ ಕಾಮದೇವನ ವಿಚಾರದಲ್ಲಿ ವಿಚಿತ್ರ ಎಂಬುದು ಕಾಳಿದಾಸನ ಅಂಬೋಣ. ಹೌದು ಮತ್ತೆ, ವಿಶ್ವಾಮಿತ್ರನ ತಪೋಬಲಕ್ಕಿಂತಲೂ ಮೇನಕೆಯ ಸೌಂದರ್ಯಬಲವೇ ಗೆದ್ದಿತಲ್ಲವೆ?

- ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.