ಬೈಟುಕಾಫಿ

ಹೈ ಲೈಫ್ ವಸ್ತುಪ್ರದರ್ಶನ

ಹೈ ಲೈಫ್ ವಸ್ತುಪ್ರದರ್ಶನ
Published On :

ಭಾರತದ ಅತಿದೊಡ್ಡ ಫ್ಯಾಷನ್, ಲೈಫ್‌ಸ್ಟೈಲ್ ಮತ್ತು ವಿಲಾಸಿ ವಸ್ತುಪ್ರದರ್ಶನ ಹೈ ಲೈಫ್ ನಗರದ ಲಲಿತ್ ಅಶೋಕದಲ್ಲಿ ಏಪ್ರಿಲ್ 3, 4 ಮತ್ತು 5 ಮೂರು ದಿನಗಳ ಕಾಲ ನಡೆಯಲಿದೆ.
ಹೆಸರೇ ಸೂಚಿಸುವಂತೆ ಹೈ ಲೈಫ್ ಫ್ಯಾಷನ್, ಪರ್ಸನಲ್ ಸ್ಟೈಲ್, ಗೃಹಾಲಂಕಾರ ಮತ್ತು ಉಡುಗೊರೆ ಕ್ಷೇತ್ರಗಳಲ್ಲಿ ಇತ್ತೀಚಿನ ಅಂತಾರಾಷ್ಟ್ರೀಯ ವಿದ್ಯಮಾನಗಳನ್ನು ಪ್ರದರ್ಶಿಸಲಿದೆ. ವಿಲಾಸಿ ವಸ್ತುಗಳು ಮತ್ತು ಅತ್ಯಾಧುನಿಕ ಲೈಫ್‌ಸ್ಟೈಲ್ ಉತ್ಪನ್ನಗಳನ್ನು ಇದು ಪ್ರದರ್ಶಿಸಲಿದೆ.
ಮುಂಬೈ, ದೆಹಲಿ, ಜೈಪುರ, ಅಹ್ಮದಾಬಾದ್, ಲಖನೌ, ಪುಣೆ, ಬೆಂಗಳೂರು, ಕೋಲ್ಕತ್ತ ಮತ್ತು ಚೆನ್ನೈಯ 150ಕ್ಕೂ ಹೆಚ್ಚು ಪ್ರಖ್ಯಾತ ಫ್ಯಾಷನ್ ಡಿಸೈನರ್‌ಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಆಯ್ದ ಕಲಾಕೃತಿಗಳು, ಸಂಗ್ರಹಗಳು ಮತ್ತು ಗೃಹಾಲಂಕಾರ ಉತ್ಪನ್ನಗಳನ್ನೂ ಇಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತಿದೆ.
ಸಾಂಪ್ರದಾಯಿಕ ಸಮಕಾಲೀನ ತೊಡುಗೆಗಳಿಂದ ಹಿಡಿದು, ಆಧುನಿಕ ಜುವೆಲ್ಲರಿಗಳು, ವಿಶೇಷ ಸಂದರ್ಭಗಳಲ್ಲಿ ನೀಡುವ ಉಡುಗೊರೆಗಳು ಇಲ್ಲಿ ಲಭ್ಯವಿರಲಿವೆ. ಡಿಸೈನರ್ ಸೀರೆಗಳು, ಸೂಟ್, ಕೇಶವಿನ್ಯಾಸದ ಎಕ್ಸೆಸರಿಗಳು, ಪಾದರಕ್ಷೆ, ಬ್ಯಾಗ್, ಮಕ್ಕಳ ಉಡುಗೆ ಇತ್ಯಾದಿಗಳು ದೊರೆಯಲಿವೆ. ಕೇವಲ ಉಡುಪುಗಳು ಮಾತ್ರವಲ್ಲ, ಈ ಬಾರಿಯ ಹೈ ಲೈಫ್ ವಸ್ತುಪ್ರದರ್ಶನದಲ್ಲಿ ವಿಶೇಷ ಅಲಂಕಾರಿಕ ಗೃಹೋಪಕರಣಗಳು, ಡಿಸೈನರ್ ಪಾತ್ರೆ, ಕಲಾಕೃತಿಗಳು, ಬೆಳ್ಳಿ, ಪುರಾತನ ಸಾಮಗ್ರಿಗಳು, ಇತ್ಯಾದಿಗಳೂ ಇರುತ್ತವೆ.
ಹೈ ಲೈಫ್ ಫ್ಯಾಶನ್ ಪ್ರಿಯರಿಗೆ ಒಂದೇ ಸೂರಿನಡಿ ಎಲ್ಲ ಅಗತ್ಯಗಳನ್ನು ಒದಗಿಸುವ ಪ್ರಯತ್ನ ನಡೆಸಲಿದೆ. ವಿಶಾಲ ಶ್ರೇಣಿಯ ಉತ್ಪನ್ನಗಳು ಮತ್ತು ಫ್ಯಾಷನ್ ಚಿಂತನೆಗಳ ಝಲಕ್ ಇಲ್ಲಿ ದೊರೆಯಲಿದೆ.
ವಿವರಗಳಿಗೆ- ಡಾಮಿನಿಕ್ 09820496202 ಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.