ಮೇಟಿ ಸರಿಯಾಗಿದ್ದರೆ ಸಾಕು
ಮೇಟಿ ಅಥವಾ ಯಜಮಾನ ಸರಿ ಇಲ್ಲಾಂದ್ರೆ ಇಡೀ ಮನೆ ಲಯ ಕಳ್ಕೊಂಡು ಬಿಡುತ್ತದೆ. ಅದೇ ರೀತಿ ದೇಶದ ಪ್ರಧಾನಿ ಸರಿಯಿಲ್ಲ ಅಂತಂದ್ರೆ ಇಡೀ ದೇಶದ ವ್ಯವಸ್ಥೆ ಹಾಳಾಗಿ ಬಿಡುತ್ತದೆ. ರಾಷ್ಟ್ರದ ಪ್ರಧಾನಿಯು ದೇಶದ ಸಮಸ್ಯೆಗಳಿಗೆ ಸ್ಪಂದಿಸುವಂತಾಗಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶದ ಘನತೆ, ಗೌರವಗಳನ್ನು ಎತ್ತಿ ಹಿಡಿಯುವಂತಹ ಮಾರ್ಗದರ್ಶಕರೂ ಆಗಿದ್ದು. ಸಂಸದರು ರಾಷ್ಟ್ರಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳವಂತೆ ಎಚ್ಚರ ವಹಿಸುವಲ್ಲಿ ಈ ನಾಯಕನ ಪಾತ್ರ ಹಿರಿದಾಗಿರುತ್ತದೆ. ಜಾಗತಿಕ ಮಟ್ಟದಲ್ಲಿ ನಮ್ಮ ದೇಶವನ್ನು ಮುನ್ನಡಿಸುವ ಶಕ್ತಿ-ಯುಕ್ತಿಗಳು ಇರಬೇಕು ಅಂತಹ ಪ್ರಧಾನಿ ಅಭ್ಯರ್ಥಿಯನ್ನು ಚುನಾಯಿಸಬೇಕು.
- ಸುಜಾತಾ ವೆಂಕಟರಾಮು, ದೊಡ್ಡಾಲಹಳ್ಳಿ
ಯಥಾ ರಾಜಾ ತಥಾಃ ಪ್ರಜಾ ಮಂತ್ರ ಪಠಿಸಿ
ಸ್ಥಳೀಯ ಅಭ್ಯರ್ಥಿಗಿಂತ ಮುಖ್ಯವಾಗಿ ಪ್ರಧಾನಿ ಅಭ್ಯರ್ಥಿಯನ್ನು ಪರಿಗಣಿಸುವುದು ಉತ್ತಮ. ಏಕೆಂದರೆ ದೇಶಕ್ಕೆ ಉತ್ತಮ ಆಡಳಿತ ಹಾಗೂ ಉತ್ತಮ ಸರ್ಕಾರವನ್ನು ಕೊಡಲು ಪಕ್ಷದವರೆಲ್ಲ ಶ್ರಮವಹಿಸಿದರೂ ಅದರ ಚುಕ್ಕಾಣಿಯನ್ನು ಹಿಡಿದು ಸರಿಯಾಗಿ ನಡೆಸುವವರು ಪ್ರಧಾನಿಯೇ ಆಗಿರುವುದರಿಂದ ಸೂಕ್ತ ಅಭ್ಯರ್ಥಿಯನ್ನು ಆರಿಸುವುದು ನಮ್ಮ ಕೈಲಿಯೇ ಇದೆ. ಸ್ಥಳೀಯ ಅಭ್ಯರ್ಥಿಗೆ ಕೆಲಸ ಮಾಡುವ ಮತ್ತು ಮಾಡಿಸುವ ಛಾತಿ ಇದ್ದರೂ ಆತನ ಪಕ್ಷದ ಪ್ರಧಾನಿ ಅಭ್ಯರ್ಥಿ ಸರಿಯಿಲ್ಲದಿದ್ದರೆ ನಮ್ಮ ಮತ ದಂಡವಾದಂತಾಗುತ್ತದೆ. ಪ್ರಧಾನಿ ಅಭ್ಯರ್ಥಿ ಸರಿಯಾಗಿದ್ದರೆ, ಅವರ ಕೈಕೆಳಗೆ ಎಲ್ಲರೂ ಸರಿಯಾಗೇ ಕೆಲಸ ಮಾಡುತ್ತಾರೆ. ದಕ್ಷ ಆಡಳಿತ ನೀಡಬಹುದು. ಯಥಾಃ ರಾಜಾ ತಥಾಃ ಪ್ರಜಾ ಎನ್ನುವುದೇ ಸರಿ.
- ಕೆ. ಜೆ. ರಾಮಪ್ರಸಾದ್, ಕಡೂರು
ಆಶೋತ್ತರಗಳನ್ನು ಸಫಲವಾಗಿಸಿಕೊಳ್ಳಿ
ಲೋಕಸಭಾ ಚುನಾವಣೆಯಲ್ಲಿ ನಾವು ಮತದಾನ ಮಾಡುವಾಗ ಸ್ಥಳೀಯ ವಿಷಯಗಳಿಗಿಂತ ಮುಖ್ಯವಾಗಿ ರಾಷ್ಟ್ರೀಯ ವಿಷಯಗಳಾದ ದೇಶದ ಐಕ್ಯತೆ, ಸಮಗ್ರತೆ, ಗಡಿ ಭದ್ರತೆ, ಶಾಂತಿ, ಶೈಕ್ಷಣಿಕ ಅಭಿವೃದ್ಧಿ ಮೊದಲಾದವುಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಆದ್ದರಿಂದ ಸ್ಥಳೀಯ ಅಭ್ಯರ್ಥಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುವುದಕ್ಕಿಂತ ಈ ದೇಶದ ಹಿತವನ್ನು ಕಾಪಾಡುವಂತಹವರಿಗೆ ಪ್ರಧಾನಿ ಅಭ್ಯರ್ಥಿಯನ್ನು ನೋಡಿ ಚುನಾಯಿಸಬೇಕು. ಪಕ್ಷದ ಪ್ರಧಾನಿ ಅಭ್ಯರ್ಥಿಯು ಸರಿಯಿಲ್ಲದಿದ್ದರೆ ನಮ್ಮ ಆಶೋತ್ತರಗಳು ಸಫಲವಾಗುವುದಿಲ್ಲ. ನಮ್ಮ ನಿರ್ಧಾರಗಳು ಸರಿಯಿಲ್ಲದ್ದರೆ ಮುಂದೆ 5 ವರ್ಷ ಪಶ್ಚಾತ್ತಾಪ ಪಡಬೇಕಾದೀತು. ಮುಂದಿನ ಐದು ವರ್ಷ ಸಂಕಷ್ಟದಲ್ಲಿ ಸಿಲುಕಬೇಕಾಗುತ್ತದೆ.
- ಮಂಜುಳಾ, ತುಮಕೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

