ಬೈಟುಕಾಫಿ

ಹೀಗಿತ್ತು ಮೊದಲ ಮತದಾನ!

ಹೀಗಿತ್ತು ಮೊದಲ ಮತದಾನ!
Published On :

ಸುಮಾರು 63 ವರ್ಷದ ಹಿಂದೆ (1951) ಭಾರತ ಮೊದಲ ಲೋಕಸಭಾ ಎಲೆಕ್ಷನ್ನಿನ ಸಂಭ್ರಮ ಆಚರಿಸಿತು. ಆಗ ಮೊದಲ ವೋಟು ಹಾಕಿದ ಶೇ.80 ಮಂದಿ ಈಗಿಲ್ಲ. ಆದರೆ, ಮತೋತ್ಸವದ ಆ ಭರಾಟೆ ಈ ಪೀಳಿಗೆಗೂ ವರ್ಗಾವಣೆಯಾಗಿದೆ. ಈ ದೀರ್ಘ ಅಂತರದಲ್ಲಿ ಆದ ಬದಲಾವಣೆಗಳು ಅಗಾಧ. ಆಗಿನ ಬ್ಯಾಲೆಟ್ ಬಾಕ್ಸ್‌ಗಳ ಬದಲಾಗಿ, ಈಗ ಬ್ಯಾಲೆಟ್ ಪೇಪರ್ ಬಂದಿದೆ. ಮತಗಟ್ಟೆಗಳಿಗೆ ಈಗ ಹಿಂದೆಂದಿಗಿಂತ ಬಿಗಿ ಭದ್ರತೆ ಪ್ರಾಪ್ತವಾಗಿದೆ. ಬೂತ್‌ಗಳು ಹೆಚ್ಚಾಗಿವೆ. ಒಂಟೆ, ಕುದುರೆ, ಎತ್ತುಗಳ ಬದಲಾಗಿ ಬೈಕು, ಕಾರು, ಬಸ್ಸು ಪ್ರಚಾರಕ್ಕೆ ವಾಹನಗಳಾಗಿವೆ. ವಯಸ್ಸು ತೊಂಬತ್ತಾದರೂ ಆಗಿನವರಲ್ಲೂ ವೋಟ್ ಹಾಕುವ ಉತ್ಸಾಹವಿತ್ತು. ಈಗಿನವರಿಗೂ ಇದೆ. ಆದರೆ, ವಿದ್ಯಾವಂತರೆನಿಸಿಕೊಂಡ ಯುವಕರು ಗಣನೀಯ ಪ್ರಮಾಣದಲ್ಲಿ ಮತದಾನದಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಈ ದುರಂತ, ಸ್ವಾತಂತ್ರ್ಯ ಭಾರತಕ್ಕೆ ಕಾಡಿರಲಿಲ್ಲ.

ಮೊದಲ
ಚುನಾವಣೆಯ ಇಣುಕುನೋಟ

2,24,000
ಒಟ್ಟು ಮತಗಟ್ಟೆಗಳು

1000
ಪ್ರತಿ ಇಷ್ಟು ಮತದಾರರಿಗೆ ಒಂದು ಬೂತ್.

2.2
ಬಳಕೆಯಾದ ಬ್ಯಾಲಟ್ ಸ್ಟೀಲ್ ಬಾಕ್ಸ್‌ಗಳು ಇಷ್ಟು ಕೋಟಿ

10
ಲಕ್ಷ ಸರ್ಕಾರಿ ಅಧಿಕಾರಿಗಳು ಚುನಾವಣೆಗೆ ಕೆಲಸ ಮಾಡಿದ್ದರು.

26 ಆಗಿದ್ದ ಒಟ್ಟು ರಾಜ್ಯಗಳು

489
ಒಟ್ಟು ಇಷ್ಟು ಸ್ಥಾನಕ್ಕೆ ಚುನಾವಣೆ ನಡೆಯಿತು.

1960
ನೇ ಇಸವಿಯಲ್ಲಿ ದ್ವಿಸದಸ್ಯ ಕ್ಷೇತ್ರಗಳು ರದ್ದಾದವು.

2 ಆಂಗ್ಲೋ-ಇಂಡಿಯನ್ ಸದಸ್ಯರಿಗೆ ಮೀಸಲು

17,500
ಅಂದಾಜು ಇಷ್ಟು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು.

40,000
ನೆಹರು ಒಟ್ಟು ಇಷ್ಟು ಕಿ.ಮೀ. ಸಂಚರಿಸಿ, ಪ್ರಚಾರ ನಡೆಸಿದ್ದರು.

364
ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ಒಟ್ಟು ಸ್ಥಾನಗಳು.

37
ಗೆದ್ದ ಪಕ್ಷೇತರ ಅಭ್ಯರ್ಥಿಗಳು

14
ಪಾಲ್ಗೊಂಡಿದ್ದ ಒಟ್ಟು ರಾಷ್ಟ್ರೀಯ ಪಕ್ಷಗಳು.

38
ಪ್ರಾದೇಶಿಕ ಪಕ್ಷಗಳು ಸ್ಪರ್ಧೆಯೊಡ್ಡಿದ್ದವು.

11
ಆಗ ಮೈಸೂರು ರಾಜ್ಯದಲ್ಲಿದ್ದ ಒಟ್ಟು ಕ್ಷೇತ್ರಗಳು.

37
ಮೈಸೂರು ರಾಜ್ಯದಲ್ಲಿ ಸ್ಪರ್ಧಿಸಿದ್ದ ಒಟ್ಟು ಅಭ್ಯರ್ಥಿಗಳು.

44.99
ಆ ವರ್ಷ ಶೇಕಡಾ ಇಷ್ಟು ಮತದಾನವಾಗಿತ್ತು.

51
ಮೈಸೂರು ರಾಜ್ಯದಲ್ಲಾದ ಮತದಾನದ ಪ್ರಮಾಣ ಇಷ್ಟು ಶೇಕಡಾ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.